×
Ad

ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೇಲಿನ ದೌರ್ಜನ್ಯ ನಿವಾರಣೆ ತಿದ್ದುಪಡಿ ಕಾಯಿದೆ ಜಾರಿ

Update: 2016-01-26 20:44 IST

ನವದೆಹಲಿ.ಜ.26: 2015ರ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೇಲಿನ ದೌರ್ಜನ್ಯ ನಿವಾರಣೆ ತಿದ್ದುಪಡಿ ಕಾಯಿದೆ ಇದೀಗ ಜಾರಿಗೆ ಬಂದಿದೆ. ಪರಿಶಿಷ್ಟ ಜಾತು ಮತ್ತು ವರ್ಗಗಳಿಗೆ ಸೇರಿದವರ ವಿರುದ್ಧದ ದೌರ್ಜನ್ಯ ತಪ್ಪಿಸಲು ಕಾಯಿದೆಯಲ್ಲೀಗ ಹೆಚ್ಚು ಕಟ್ಟುನಿಟ್ಟಾದ ನಿಬಂಧನೆಗಳನ್ನು ಸೇರಿಸಲಾಗಿದೆ. ಈ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕಳೆದ ತಿಂಗಳ 31 ರಂದು ಅನುಮತಿ ನೀಡಿದ್ದರು. ಈ ತಿಂಗಳ 1ನೇ ದಿನಾಂಕ ಮಸೂದೆ ಕುರಿತ ಅಧಿಸೂಚನೆ ಹೊರಡಿಸಲಾಯಿತು. ಪರಿಶಿಷ್ಟ ಜಾತಿ ವರ್ಗಗಳ ಜನರ ಗೌರವಕ್ಕೆ ಕುಂದುಂಟು ಮಾಡುವ ತಲೆ ಕೂದಲು ಬೋಳಿಸುವುದು, ಚಪ್ಪಲಿಗಳ ಹಾರ ಹಾಕುವುದು, ಕೈಗಳಿಂದ ಹೊಲಸು ತೆಗೆಯುವಂತೆ ಮಾಡುವುದು ಅಥವಾ ಅದಕ್ಕೆ ಅವಕಾಶ ನೀಡುವುದು, ಜಾತಿಯ ಹೆಸರಿನಲ್ಲಿ ನಿಂದಿಸುವುದು ಸಾಮಾಜಿಕ ಅಥವಾ ಆರ್ಥಿಕ ಬಹಿಷ್ಕಾರ ಹಾಕುವುದು ಮುಂತಾದ ಅಪರಾಧಗಳನ್ನು ತಿದ್ದುಪಡಿಯಾದ ಕಾನೂನಿನ ವ್ಯಾಪ್ತಿಯಲ್ಲಿ ಹೊಸದಾಗಿ ಸೇರಿಸಲಾಗಿದೆ. ಈ ಕಾನೂನಿನ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆಂದೇ ಮೀಸಲಾದ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು. ಎಲ್ಲ ಮಟ್ಟಗಳಲ್ಲಿ ಸರ್ಕಾರಿ ನೌಕರರ ಉದ್ದೇಶ ಪೂರ್ವಕ ಅಸಡ್ಡೆ ಮತ್ತು ಕರ್ತವ್ಯ ನಿರ್ಲಕ್ಷ್ಯವನ್ನು ಸಹ ಕಾನೂನಿನಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News