×
Ad

ಫೆ.4ಕ್ಕೆ ಮಂಬಾಡ್ ಸಖಾಫಿ ಪುರಭವನಕ್ಕೆ

Update: 2016-01-26 21:42 IST

ಮಂಗಳೂರು : ಫೆಬ್ರವರಿ 12,13,14ರಂದು ನಡೆಯಲಿರುವ ದಕ್ಷಿಣ ಭಾರತದ ಪ್ರಸಿದ್ಧ ವಿದ್ಯಾಸಂಸ್ಥೆ ಜಾಮಿಅ ಸಅದಿಯ ಅರಬಿಯಾದ 46ನೇ ವಾರ್ಷಿಕ ಹಾಗೂ ಸನದುದಾನ ಮಹಾ ಸಮ್ಮೇಳನದ ಪ್ರಚಾರಾರ್ಥ ಫೆ.4ರಂದು ಗುರುವಾರ ಪೂರ್ವಾಹ್ನ 10ಕ್ಕೆ ಮಂಗಳೂರು ಪುರಭವನದಲ್ಲಿ ಸಅದಿಯಾ ಪ್ರಚಾರ ಹಾಗೂ ಆದರ್ಶ ಸಂಗಮ ನಡೆಯಲಿದೆ.


ಕಾರ್ಯಕ್ರಮದಲ್ಲಿ ಖ್ಯಾತವಾಗ್ಮಿ ಅಬ್ದುಲ್ ವಹಾಬ್ ಸಖಾಫಿ ಮಂಬಾಡ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸ್ವಾಗತ ಸಮಿತಿ ಚೇರ್‌ಮೇನ್ ಹಮೀದ್ ಹಾಜಿ ಕಂದಕ್ ವಹಿಸಲಿದ್ದು; ಕರ್ನಾಟಕ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಖಾಝಿ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಜಂಇಯ್ಯತುಲ್ ಉಲಮಾದ ಉಪಾಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್, ಮುಡಿಪು ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ಕರ್ನಾಟಕ ಜಂಇಯ್ಯತುಲ್ ಉಲಮಾದ ಪ್ರ.ಕಾರ್ಯದರ್ಶಿ ವಳವೂರು ಮುಹಮ್ಮದ್ ಸಅದಿ, ಅಸ್ಸಯ್ಯಿದ್ ಜಲಾಲುದ್ದೀನ್ ತಂಙಳ್ ಮಲ್ಜಅ್, ಸಿಟಿಎಂ ಉಮ್ಮರ್ ಅಸ್ಸಖಾಫ್ ತಂಙಳ್ ಮನ್ಶರ್, ಸಚಿವ ಯು.ಟಿ.ಖಾದರ್, ಶಾಸಕ ಮೊಯ್ದಿನ್ ಬಾವಾ, ಐಸಿಸಿ ಪ್ರ.ಕಾರ್ಯದರ್ಶಿ ಮುಮ್ತಾರ್ ಅಲೀ ಕೃಷ್ಣಾಪುರ, ದ.ಕ.ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಅಧ್ಯಕ್ಷ ಎಸ್‌ಎಂಆರ್ ರಶೀದ್ ಹಾಜಿ, ಕೆಎಂಜೆಸಿ ಮುಖಂಡ ಹೈದರ್ ಪರ್ತಿಪಾಡಿ ಮುಂತಾದವರು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News