ಉಡುಪಿ :ಕುಮ್ಕಿ ಹಕ್ಕನ್ನು ಕಸಿದ ಕಾಂಗ್ರೆಸ್ ಸರಕಾರ - ಬಿಜೆಪಿ ಆರೋಪ
ಉಡುಪಿ, ಜ.26: ರಾಜ್ಯ ಸರಕಾರದ ನಿರ್ಲಕ್ಷದಿಂದ ಕುಮ್ಕಿ ಹಕ್ಕಿನ ವಿಷಯ ದಲ್ಲಿ ಸುಪ್ರೀಂ ಕೋರ್ಟಿನಲ್ಲಿದ್ದ ಕೇಸ್‌ನಲ್ಲಿ ವ್ಯತಿರಿಕ್ತ ತೀರ್ಪು ಬಂದಿದೆ ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಆರೋಪಿಸಿದ್ದಾರೆ.
ಬಿಜೆಪಿ ಆಡಳಿತದ ಅವಯಲ್ಲಿ ಸಚಿವ ಸಂಪುಟ ಕರಾವಳಿ ಭಾಗದ ರೈತಾಪಿ ಜನರ ಬಹುದಿನಗಳ ಬೇಡಿಕೆಯಾಗಿದ್ದ ಕುಮ್ಕಿ ಹಕ್ಕನ್ನು ರೈತರಿಗೆ ಕಾನೂನು ಬದ್ಧವಾಗಿ ನೀಡುವ ನಿರ್ಧಾರ ಕೈಗೊಂಡಿತ್ತು. ಅದು ಅಂತಿಮ ಹಂತಕ್ಕೆ ಹೋಗುವ ಮುನ್ನ ಚುನಾವಣೆ ಘೋಷಣೆಯಾಗಿದ್ದರಿಂದ ಬದಿಗೆ ಸರಿದಿತ್ತು. ಆ ನಂತರ ಬಂದ ಸಿದ್ಧರಾಮಯ್ಯ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆಯನ್ನು ನೀಡುತ್ತಾ ಬಂದಿತ್ತೇ ವಿನಹಃ ನಿರ್ಧಾರ ಕೈಗೊಳ್ಳಲಿಲ್ಲ ಎಂದವರು ಪತ್ರಿಕೆಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದರ ಪರಿಣಾಮ ಸುಪ್ರೀಂ ಕೋರ್ಟಿನಲ್ಲಿ ಇದರ ಕುರಿತು ರೈತರಿಗೆ ವ್ಯತಿರಿಕ್ತ ತೀರ್ಪು ಬಂದಿದೆ. ರಾಜ್ಯ ಸರಕಾರ ಕೋರ್ಟಿನಲ್ಲಿ ರೈತ ಪರವಾಗಿ ನಿಲ್ಲದೆ, ಸರಿಯಾಗಿ ವಾದ ಮಂಡಿಸದೆ ಇದ್ದದ್ದು ಇದಕ್ಕೆ ಕಾರಣ. ಹಾಗಾಗಿ ರೈತ ವಿರೋ ಕಾಂಗ್ರೆಸ್ ಸರಕಾರದ ವಿರುದ್ಧ ಜನತೆ ಆಕ್ರೋಶಗೊಂಡಿದ್ದು ಮುಂಬರುವ ಜಿಪಂ/ತಾಪಂ ಚುನಾವಣೆಯಲ್ಲಿ ರೈತರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.