ಉಳ್ಳಾಲ : ಮರಿಕ್ಕಳ ಎಸ್ಸೆಸೆಫ್ ವತಿಯಿಂದ ಬುರ್ದಾ ಮಜ್ಲಿಸ್
ಉಳ್ಳಾಲ: ಎಸ್ಸೆಸೆಫ್ ಮರಿಕ್ಕಳ ಶಾಖೆ ಇದರ ಬೆಳ್ಳಿಮಹೋತ್ಸವದ ಪ್ರಯುಕ್ತ ಬುರ್ದಾ ಮಜ್ಲಿಸ್ ಮರಿಕ್ಕಳ ಜುಮಾ ಮಸೀದಿ ವಠಾರದಲ್ಲಿ ಭಾನುವಾರ ನಡೆಯಿತು. ಮುಹಮ್ಮದ್ ರಾಶಿದ್ ಕೊಲ್ಲಂ ಮತ್ತು ಬಳಗದವರಿಂದ ಬುರ್ದಾ ಆಲಾಪನೆ ನಡೆಯಿತು. ಮಾಸ್ಟರ್ ಮುಹೀನುದ್ದೀನ್ ಬೆಂಗಳೂರು ಮತ್ತು ಮಾಸ್ಟರ್ ಶಮ್ಮಾಸ್ ಉಳ್ಳಾಲ ಮಲಯಾಳಂ ಮತ್ತು ಉರ್ದುವಿನಲ್ಲಿ ನಅತ್ ಆಲಾಪನೆ ಮಾಡಿದರು. ನಿಝಾಮುದ್ದೀನ್ ಕೇರಳ ಶಮ್ಮಾಸ್ ಕಾಂತಪುರಂ, ಅಸ್ಕರ್ ತ್ರಿಶೂರು ಮಲಾಯಳಂನಲ್ಲಿ ಇಶಲ್ ವೀರುನ್ನು ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದ್ದರು. ಮುಹಮ್ಮದ್ ಆಶಿಕ್ ಕಾಜೂರು ಅರಬಿಯಲ್ಲಿ ಆಲಾಪನೆಗೈದರು
ವೇದಿಕೆಯಲ್ಲಿ ಮರಿಕ್ಕಳ ಜುಮಾ ಮಸೀದಿ ಖತೀಬ್ ಅಬ್ಬಾಸ್ ಸಖಾಫಿ ಮಡಿಕೇರಿ, ಸದ್‌ರ್ ಮುಅಲ್ಲಿಂ ಝೈನುಲ್ ಆಬಿದ್ ಸಖಾಫಿ ಮುಲಾರ್ ಪಟ್ಣ, ಮರಿಕ್ಕಳ ಮದ್ರಸದ ಮುಅಲ್ಲಿಂ ರಮಳಾನ್ ಮದನಿ ಕಂಬಳಬೆಟ್ಟು, ಮರಿಕ್ಕಳ ಜುಮಾ ಮಸೀದಿ ಉಪಾಧ್ಯಕ್ಷ ಅಬ್ಬಾಸ್ ಕೊಡೆಂಚಿಲ್, ಕಾರ್ಯದರ್ಶಿ ಎನ್.ಎಚ್. ಅಬ್ಬಾಸ್ ಚಂದಹಿತ್ಲು, ಕೋಶಾಧಿಕಾರಿ ಎನ್.ಎಚ್.ಹನೀಫ್ ಚಂದಹಿತ್ಲು, ಎಸ್‌ವೈಎಸ್ ಮರಿಕ್ಕಳ ಬ್ರಾಂಚ್ ಅಧ್ಯಕ್ಷ ಆಲಿಕುಂಞಿ ಅಗಲ್ತಬೆಟ್ಟು, ಅಶ್ರಫ್ ಸಅದಿ ಮಲ್ಲೂರು, ಎಸ್‌ವೈಎಸ್ ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹಿಂ ಅಹ್ಸನಿ, ಅಬ್ಬಾಸ್ ಸಖಾಫಿ ಕೊಡೆಂಚಿಲ್, ತೌಡುಗೋಳಿ ಜುಮಾ ಮಸೀದಿ ಖತೀಬ್ ಮಹ್ಮೂದ್ ಸಖಾಫಿ, ಮೊಂಟೆಪದವು ಜುಮಾ ಮಸೀದಿ ಖತೀಬ್ ಇಲ್ಯಾಸ್ ಅಮ್ಜದಿ, ಮೋಂಟುಗೋಳಿ ಜುಮಾ ಮಸೀದಿ ಖತೀಬ್ ಅಬ್ದುಲ್ ಹಮೀದ್ ಮುಸ್ಲಿಯಾರ್, ಲೆಕ್ಕಸಿರಿ ಜುಮಾ ಮಸೀದಿ ಖತೀಬ್ ಅಶ್ರಫ್ ಸಅದಿ, ಅಬ್ಬಾಸ್ ಮದನಿ, ಪೊಟ್ಟೊಳಿಕೆ ಮಸೀದಿಯ ಇಮಾಮ್ ಅಬೂಬಕರ್ ಅಮಾನಿ, ಅಬ್ದುಲ್ಲ ಮದನಿ ಕೆಂಪುಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.
ಮನ್ಸೂರು ಹಿಮಮಿ ಅತಿಥಿಗಳನ್ನು ಸ್ವಾಗತಿಸಿದರು. ಎಸ್ಸೆಸ್ಸೆಫ್ ಮರಿಕ್ಕಳ ಶಾಖೆ ಕಾರ್ಯದರ್ಶಿ ಅಝರುದ್ದೀನ್ ಧನ್ಯವಾದಗೈದರು.