×
Ad

ತಾಲಿಬಾನ್ ಬೆಂಬಲಿಗನಿಂದ 10 ಅಫ್ಘಾನ್ ಪೊಲೀಸರ ಹತ್ಯೆ

Update: 2016-01-26 23:19 IST

ದಹಾರ್,ಜ.26: ತಾಲಿಬಾನ್ ಬೆಂಬಲಿಗನೆನ್ನಲಾದ ಅಫ್ಘಾನ್ ಪೊಲೀಸ್ ಒಬ್ಬಾತ ತನ್ನ 10 ಮಂದಿ ಸಹದ್ಯೋಗಿಗಳಿಗೆ ಮತ್ತು ಬರಿಸುವ ಔಷಧಿ ನೀಡಿ, ಆನಂತರ ಅವರನ್ನುಗುಂಡಿಕ್ಕಿ ಹತ್ಯೆಗೈದು, ಅವರ ಶಸ್ತ್ರಾಸ್ತ್ರಗಳೊಂದಿಗೆ ಪರಾರಿಯಾದ ಘಟನೆ ಅಫ್ಘಾನಿಸ್ತಾನದ ಪ್ರಕ್ಷುಬ್ಧ ಉರುಝ್‌ಗಾನ್ ಪ್ರಾಂತ್ಯದಲ್ಲಿ ಮಂಗಳವಾರ ನಡೆದಿದೆ.
 ಹಂತಕ ಪೊಲೀಸ್ ಉದ್ಯೋಗಿಗೆ, ತಾಲಿಬಾನ್ ಜೊತೆ ಸಂಪರ್ಕ ವಿರುವುದು ತನಿಖೆಯಿಂದ ತಿಳಿದುಬಂದಿದೆ. ಆತ ತನ್ನ ಸಹದ್ಯೋಗಿಗಳಿಗೆ ಮಾದಕದ್ರವ್ಯವನ್ನು ನೀಡಿ, ಅವರನ್ನು ಪ್ರಜ್ಞೆತಪ್ಪಿಸಿದ್ದನು. ಆನಂತರ ಅವರೆಲ್ಲರನ್ನೂ ಹತ್ಯೆಗೈದಿದ್ದಾನೆಂದು, ಉರುಝ್‌ಗಾನ್ ಪ್ರಾಂತ್ಯದ ಗವರ್ನರ್‌ರ ವಕ್ತಾರ ದೋಸ್ತ್ ಮುಹಮ್ಮದ್ ನಯಬ್ ತಿಳಿಸಿದ್ದಾರೆ. ಪರಾರಿಯಾಗಿರುವ ಹಂತಕ ಪೊಲೀಸ್‌ನನ್ನು ಪತ್ತೆ ಹಚ್ಚಲು ಪೊಲೀಸರು ಬೃಹತ್ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದ್ದಾರೆಂದು ಅವರು ಹೇಳಿದ್ದಾರೆ.
 ಆದರೆ ತಾಲಿಬಾನ್ ವಕ್ತಾರ, ಝಬಿಯುಲ್ಲಾ ಮುಹೈದ್ ಘಟನೆಯ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ್ದು, ಉರುಝುಗಾನ್ ಪ್ರಾಂತ್ಯದ ಚಿನಾರ್ತೊದ ಪೊಲೀಸ್ ಹೊರಠಾಣೆಯನ್ನು ಉಗ್ರರು ವಶಪಡಿಸಿಕೊಂಡ ಸಂದರ್ಭ ನಡೆದ ಘರ್ಷಣೆಯಲ್ಲಿ 9 ಮಂದಿ ಪೊಲೀಸರು ಹತರಾಗಿದ್ದಾರೆಂದು ತಿಳಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News