×
Ad

ಚುಟುಕು ಸುದ್ದಿಗಳು

Update: 2016-01-26 23:32 IST

‘ಪ್ರವಾದಿ ಸಂದೇಶ’ ಕಾರ್ಯಕ್ರಮ

ಉಳ್ಳಾಲ, ಜ.26: ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಶಾಖೆಯ ವತಿಯಿಂದ ಇತ್ತೀಚೆಗೆ ಉಳ್ಳಾಲ ಪೇಟೆಯ ಬೋರ್ಡ್ ಹೈಸ್ಕೂಲ್‌ಗೆ ಪ್ರವಾದಿ ಮುಹಮ್ಮದ್(ಸ) ರವರ ಜೀವನ ಮತ್ತು ಸಂದೇಶ ಪರಿಚಯದ ಪ್ರಯುಕ್ತ 2 ಗೋಡೆ ಗಡಿಯಾರಗಳನ್ನು ಹಾಗೂ ಶಾಲೆಯ ಶಿಕ್ಷಕ- ಶಿಕ್ಷಕಿಯರಿಗೆ ‘ಪ್ರವಾದಿ ಜೀವನ ಮತ್ತು ಸಂದೇಶ’ಎಂಬ ಪುಸ್ತಕವನ್ನು ನೀಡಲಾಯಿತು. ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಶಾಖೆಯ ಜೊತೆ ಕಾರ್ಯದರ್ಶಿ ಅಹ್ಮದ್ ಶರೀಫ್ ಪ್ರವಾದಿ ಮುಹಮ್ಮದ್(ಸ.)ರವರ ಜೀವನ ಮತ್ತು ಸಂದೇಶವನ್ನು ಪರಿಚಯ ಪಡಿಸಿದರು. ಶಾಲಾಡಳಿತ ಮಂಡಳಿ ಹಾಗೂ ಉಳ್ಳಾಲ ಮೇಲಂಗಡಿಯ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರಾದ ಮುಸ್ತಫ ಅಬ್ದುಲ್ಲ, ಶಾಲಾಡಳಿತ ಮಂಡಳಿಯ ಸದಸ್ಯರಾದ ಅಬ್ದುರ್ರಹ್ಮಾನ್, ಶಂಸುದ್ದೀನ್ ಬಿ.ಕೆ. ಉಪಸ್ಥಿತರಿದ್ದರು

ಚಿಕಿತ್ಸೆಯ ನೆರವಿಗೆ ಮನವಿ

ಕುಂದಾಪುರ, ಜ.26: ಮೂಳೆ ಕ್ಯಾನ್ಸರ್‌ಗೆ ತುತ್ತಾಗಿರುವ ಕುಂದಾಪುರ ಕೋಡಿಯ ಅಬ್ದುಲ್ ಖಾದರ್ ಜೀಲಾನಿಯ ಪುತ್ರ ಮುಹಮ್ಮದ್ ಮುಜೀಬ್ (15) ಎಂಬಾತನ ಚಿಕಿತ್ಸೆಗೆ ನೆರವಾಗುವಂತೆ ಕೋರಲಾಗಿದೆ. ಮಣಿಪಾಲ ಕೆಎಂಸಿಯ ಶಿರಡಿ ಸಾಯಿಬಾಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಜೀಬ್‌ನ ಚಿಕಿತ್ಸೆಗೆ 3 ಲಕ್ಷ ರೂ. ವೆಚ್ಚವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಈವರೆಗೆ ಮುಜೀಬ್‌ನ ಚಿಕಿತ್ಸೆಗಾಗಿ ಸಾಲ ಮಾಡಿ 2.50 ಲಕ್ಷ ರೂ. ಖರ್ಚು ಮಾಡಲಾಗಿದೆ. ಇನೂ-್ನ 6 ಲಕ್ಷ ರೂ. ಖರ್ಚು ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಮಗನ ಚಿಕಿತ್ಸೆಗಾಗಿ ಈಗಾಗಲೇ ಸಾಕಷ್ಟು ವ್ಯಯ ಮಾಡಿರುವ ಕುಟುಂಬ ಆರ್ಥಿಕ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾಗಿದೆ. ಆದುದರಿಂದ ದಾನಿಗಳು ಬಾಲಕನ ಚಿಕಿತ್ಸೆಗೆ ನೆರವು ನೀಡುವಂತೆ ಮನವಿ ಮಾಡಲಾಗಿದೆ. ವಿಳಾಸ: ಅಬ್ದುಲ್ ಖಾದರ್ ಜೀಲಾನಿ, ನಂ.42ಬಿ, 7ನೆ ವಾರ್ಡ್, ಎಂ. ಕೋಡಿ, ಕೋಡಿ ಅಂಚೆ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ. ಮೊ.- 9740070148. ಎಸ್‌ಬಿ ಖಾತೆ ಸಂಖ್ಯೆ - 1402500102063201, ಕರ್ಣಾಟಕ ಬ್ಯಾಂಕ್, ಕುಂದಾಪುರ ಶಾಖೆ..

 
ಇಂದು ಜೆಡಿಎಸ್ ಕಾರ್ಯಕರ್ತರ ಸಭೆ

ಬಂಟ್ವಾಳ, ಜ. 26: ವಿಧಾನಸಭಾ ಕ್ಷೇತ್ರ ಜೆಡಿಎಸ್ ಕಾರ್ಯಕರ್ತರ ಸಮಾವೇಶವು ಜ.27ರಂದು ಸಂಜೆ 4 ಗಂಟೆಗೆ ಬಿ.ಸಿ.ರೋಡಿನ ರಿಕ್ಷಾ ಭವನದಲ್ಲಿ ನಡೆಯಲಿದೆ. ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಮುಹಮ್ಮದ್ ಶಫಿ, ಪಕ್ಷದ ಪ್ರಮುಖರಾದ ಬಿ. ಮೋಹನ್, ಅಬೂಬಕರ್ ಅಮ್ಮುಂಜೆ, ಪಿ.ಎ. ರಹೀಂ, ಇಬ್ರಾಹೀಂ ಕೈಲಾರು ಭಾಗವಹಿಸಲಿದ್ದಾರೆ ಎಂದು ಜೆಡಿಎಸ್ ಅಧ್ಯಕ್ಷ ಹಾರೂನ್ ರಶೀದ್ ತಿಳಿಸಿದ್ದಾರೆ.

ಸರಕಾರಿ ನೌಕರರ ಕ್ರೀಡಾಕೂಟ

ಮಂಗಳೂರು, ಜ.26: ಕರ್ನಾಟಕ ರಾಜ್ಯ ಸರಕಾರಿ ನೌಕರರ 2015ನೆ ಸಾಲಿನ ದ.ಕ. ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು, ಜಿಲ್ಲಾಡಳಿತ, ಜಿಪಂ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮತ್ತು ದ.ಕ.ಜಿಲ್ಲಾ ರಾಜ್ಯ ಸರಕಾರಿ ನೌಕರರ ಸಂಘ ಸಂಯುಕ್ತಾಶ್ರಯಲ್ಲಿ ಜ.27 ಮಂಗಳಾ ಕ್ರೀಡಾಂಗಣದಲ್ಲಿ ಮತ್ತು ಜ.28ರಂದು ಬೆಳಗ್ಗೆ 10ಕ್ಕೆ ನಗರದ ಸರಕಾರಿ ನೌಕರರ ಭವನದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿರುತ್ತಾರೆ.


ಆಪರೇಶನ್ ಸ್ಮೈಲ್-2 ಕಾರ್ಯಾಗಾರ
ಉಡುಪಿ ಜ.26: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿ ಆಪರೇಶನ್ ಸ್ಮೈಲ್ -2 ಒಂದು ದಿನದ ಕಾರ್ಯಾಗಾರವನ್ನು ಸೋಮವಾರ ಆಯೋಜಿಸಲಾಗಿತ್ತು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಅಣ್ಣಾಮಲೈ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ವಿವಿಧ ಇಲಾಖೆಯ ಅಧಿಕಾರಿಯವರೊಂದಿಗೆ ಕಾಣೆಯಾದ ಮಕ್ಕಳ ಪತ್ತೆ, ಸರಕಾರಿ/ಸರಕಾರೇತರ ಸಂಸ್ಥೆಯಲ್ಲಿರುವ ಹಾಗೂ ಭಿಕ್ಷಾಟನೆ ಮಾಡುತ್ತಿರುವ ಅನಾಥ ಮಕ್ಕಳ ಹೆತ್ತವರನ್ನು ಪತ್ತೆ ಮಾಡುವ, ಬಾಲಕಾರ್ಮಿಕರು/ಮಕ್ಕಳ ಕಳ್ಳ ಸಾಗಾಣಿಕೆ, ಮಕ್ಕಳ ಕಾನೂನು, ರಕ್ಷಣೆ, ಪೋಷಣೆ, ಪುನರ್ವಸತಿ ಕುರಿತು ಚರ್ಚಿಸಲಾಯಿತು.
 
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ್, ಉಡುಪಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಟಿ.ಆರ್.ಜೈಶಂಕರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ಕೆ.ನಾರಾಯಣ, ಮಂಗಳೂರು ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಜಿಲ್ಲಾ ಕಾರ್ಮಿಕ ಅಧಿಕಾರಿ ಜ್ಞಾನೇಶ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್.ಶೇಷಪ್ಪ, ಕೆದೂರು ಸ್ಪೂರ್ತಿ ಸಂಸ್ಥೆಯ ಕೇಶವ ಕೊಟೇಶ್ವರ, ಕುಂದಾಪುರ ನಮ್ಮ ಭೂಮಿಯ ಸಹ ನಿರ್ದೇಶಕರಾದ ಶಿವಾನಂದ ಶೆಟ್ಟಿ ಹಾಗೂ ವೆಂಕಟೇಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಸುರೇಶ್ ಭಟ್, ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್ ಉಪನಿರೀಕ್ಷಕರು ಉಪಸ್ಥಿತರಿದ್ದರು. ಮನಮೋಹನ್ ಕಾರ್ಯಕ್ರಮ ನಿರೂಪಿಸಿದರು.

ಸ್ವತಂತ್ರ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ: ಜಬ್ಬಾರ್ ಸಮೋ
  ಕೊಣಾಜೆ, ಜ.26: ವಿದ್ಯಾರ್ಥಿಗಳು ಸ್ವತಂತ್ರ ವ್ಯಕ್ತಿತ್ವ, ಅಭಿವ್ಯಕ್ತಿ ಕೌಶಲ, ಭಾಷಾ ಪ್ರೌಢಿಮೆ ಹಾಗೂ ಸೌಹಾರ್ದ ಬೆಳೆಸಿಕೊಂಡಲ್ಲಿ ಭಾರತ ಜಗತ್ತಿನ ಎಲ್ಲ ದೇಶಗಳನ್ನೂ ಮೀರಿ ಬೆಳೆಯಲು ಸಾಧ್ಯ ಎಂದು ತಾಳಮದ್ದಲೆ ಅರ್ಥದಾರಿ ಜಬ್ಬಾರ್ ಸಮೋ ಅಭಿಪ್ರಾಯಪಟ್ಟರು.

 ನೆಹರೂ ಯುವ ಕೇಂದ್ರ ಸಹಯೋಗದಲ್ಲಿ ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಪ್ರಾಂಶುಪಾಲ ಡಾ. ಗಿರಿಧರ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಂಕರ್ ಭಟ್ ಕೊಳ್ತಮಜಲು ಅತಿಥಿಗಳಾಗಿದ್ದರು. ಸಾಂಸ್ಕೃತಿಕ ಸಂಘದ ಸಂಚಾಲಕ ನಂದಕಿಶೋರ್ ಎಸ್. ಸ್ವಾಗತಿಸಿದರು. ಲೋಕೇಶ್ ರೈ ನಿರೂಪಿಸಿದರು. ಮಾನಸಾ ವಂದಿಸಿದರು.

ಜಿಲ್ಲಾ ಮಟ್ಟದ ರಾಷ್ಟ್ರೀಯ ಮತದಾರರ ದಿನಾಚರಣೆ
ಪುತ್ತೂರು, ಜ.26: ಮತದಾನದ ಉದ್ದೇಶ, ಧ್ಯೇಯವನ್ನು ಅರ್ಥ ಮಾಡಿಕೊಳ್ಳುವ ಮೂಲಕ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ. ಆ ಜವಾಬ್ದಾರಿ ಅರಿತುಕೊಂಡು ಎಲ್ಲರೂ ಮತ ಚಲಾಯಿಸಬೇಕು ಎಂದು ಪುತ್ತೂರು ನ್ಯಾಯಾಲಯದ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ನಾಗರಾಜ್ ಹೇಳಿದರು.

ದರ್ಬೆ ಸಂತ ಫಿಲೋಮಿನಾ ಕಾಲೇಜಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಸವಣೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಬಿ.ವಿ.ಸೂರ್ಯನಾರಾಯಣ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಭಾರತದ ಸಂವಿಧಾನ ರಚನಾಕಾರರಾದ 600 ಮಂದಿಯಲ್ಲಿ ಐವರು ದ.ಕ. ಜಿಲ್ಲೆಯವರು. ಆದ್ದರಿಂದ ಮತದಾನದ ಪ್ರಕ್ರಿಯೆಯನ್ನು ಯಶಸ್ವಿಗೊಳಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.ಜಿಪಂ ಸಿಇಒ ಶ್ರೀವಿದ್ಯಾ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಎಎಸ್ಪಿರಿಷ್ಯಂತ್ ಸಿ.ಬಿ, ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಆ್ಯಂಟನಿ ಪ್ರಕಾಶ್ ಮೊಂತೆರೊ, ಅಪರ ಜಿಲ್ಲಾಧಿಕಾರಿ ಕುಮಾರ್ ಉಪಸ್ಥಿತರಿದ್ದರು. ಸಹಾಯಕ ಆಯುಕ್ತ ಡಾ.ರಾಜೇಂದ್ರ ಕೆ.ವಿ ಸ್ವಾಗತಿಸಿದರು. ತಹಶೀಲ್ದಾರ್ ಸಣ್ಣರಂಗಯ್ಯ ವಂದಿಸಿದರು. ಪ್ರೊ.ಬಿ.ಜೆ.ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

ಉಮನಗುಡ್ಡೆ: ಕಾಂಕ್ರಿಟ್ ರಸ್ತೆ ಉದ್ಘಾಟನೆ
 ಬಂಟ್ವಾಳ, ಜ.26: ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ಬ್ರಹ್ಮರಕೂಟ್ಲುವಿನ ದರಿಬಾಗಿಲು-ಉಮನಗುಡ್ಡೆ ನೂತನ ಕಾಂಕ್ರಿಟ್ ರಸ್ತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಳ್ಳಿಗೆ ಗ್ರಾಪಂ ಅಧ್ಯಕ್ಷೆ ರತ್ನಾ, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಮತಾ ಗಟ್ಟಿ, ಭೂನ್ಯಾಯ ಮಂಡಳಿ ಸದಸ್ಯ ದಿವಾಕರ ಪಂಬದಬೆಟ್ಟು, ಪುರಸಭಾ ಸದಸ್ಯರಾದ ರಾಮಕೃಷ್ಣ ಆಳ್ವ, ಜಗದೀಶ್ ಕುಂದರ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಅಲಿ ಮತ್ತಿತರರು ಉಪಸ್ಥಿತರಿದ್ದರು. ಪಕ್ಷಿಕೆರೆ: ಧಾರ್ಮಿಕ ಪ್ರವಚನ ಸಮಾಪನ

 ಮುಲ್ಕಿ, ಜ.26: ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿ ಹಾಗೂ ರಿಯಾಲುಲ್ ಇಸ್ಲಾಮ್ ಜಮಾಅತ್ ಕಮಿಟಿಗಳ ಆಶ್ರಯದಲ್ಲಿ 35ನೆ ವರ್ಷದ ರಿಫಾಯಿಯಾ ದಫ್ ರಾತೀಬ್ ಹಲ್ಕಾ, ಜಲಾಲಿಯಾ ರಾತೀಬ್ ಹಾಗೂ ಧಾರ್ಮಿಕ ಪ್ರವಚನ ಸಮಾಪನಗೊಂಡಿತು. ಬಿ.ಜೆ.ಎಂ. ಪಕ್ಷಿಕೆರೆಯ ಖತೀಬ್ ಅಲ್‌ಹಾಜ್ ಅಬ್ದುಲ್ ಖಾದರ್ ಮದನಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷ ಕೆ.ಯು. ಮುಹಮ್ಮದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಉಮರ್ ಫಾರೂಕ್ ಸಖಾಫಿ ಮುಖ್ಯ ಪ್ರಭಾಷಣಗೈದರು. ಅಲ್‌ಹಾಜ್ ಇಬ್ನ್ ಮೌಲಾನಾ ತಂಙಳ್ ದುಆ ಮಾಡಿದರು. ಅಬ್ದುಲ್ ಕರೀಂ ಸಖಾಫಿ, ಅಬ್ದುಲ್ ಲತೀಫ್ ಸಖಾಫಿ, ಡಿ.ಜೆ. ಮುಹ್ಮಮದ್ ಮುಸ್ಲಿಯಾರ್, ಶರೀಫ್ ಖಾಸಿಮಿ, ಅಶ್ರಫ್ ಅಂಜದಿ, ಮುಸ್ತಫಾ ಝೈನಿ, ಕಲಂದರ್ ಸಅದಿ, ಹಾಜಿ ಮೀರಾನ್ ತೌಫೀಕ್, ಅಬ್ದುಲ್ ಹಮೀದ್, ತೌಫೀಕ್ ಬಾವ, ಹಾಜಿ ಅಬ್ದುಲ್ ಲತೀಫ್ ಮತ್ತಿತರರು ಉಪಸ್ಥಿತರಿದ್ದರು.

ದುಬೈ: ತುಂಬೆ ಫಾರ್ಮಸಿ ಉದ್ಘಾಟನೆ ದುಬೈ (ರಾಸ್ ಅಲ್ ಖೈಮಾ), ಜ.26: ತುಂಬೆ ಸಮೂಹ ಸಂಸ್ಥೆಯ ಹೆಲ್ತ್ ಕೇರ್ ವಿಭಾಗದ ವತಿಯಿಂದ ರಾಸ್ ಅಲ್ ಖೈಮಾದಲ್ಲಿ ಸ್ಟೇಟ್ -ಆಫ್-ದಿ-ಆರ್ಟ್ ತುಂಬೆ ಕ್ಲಿನಿಕ್ ಹಾಗೂ ಫಾರ್ಮಸಿಯನ್ನು ರಾಸ್ ಅಲ್ ಖೈಮಾ ಫ್ರೀ ಟ್ರೇಡ್‌ನ ರೆನ್‌ನ ಅಧ್ಯಕ್ಷ ಶೇಖ್ ಅಹ್ಮದ್ ಬಿನ್ ಸಖ್ವಾರ್ ಅಲ್ ಖಾಸಿಮ್ ಉದ್ಘಾಟಿಸಿದರು.

   ತುಂಬೆ ಸಮೂಹ ಸಂಸ್ಥೆಯ ಸ್ಥಾಪಕಾಧ್ಯಕ್ಷ ತುಂಬೆ ಮೊಯ್ದಿನ್ ಉಪಸ್ಥಿತರಿದ್ದರು. ನೂತನ ಕ್ಲಿನಿಕ್ ಆಧುನಿಕ ಲ್ಯಾಬೋರೇಟರಿ, ವಿವಿಧ ವೈದ್ಯಕೀಯ ತಪಾಸಣಾ ಹಾಗೂ ಚಿಕಿತ್ಸಾ ವಿಭಾಗಗಳನ್ನು ಹೊಂದಿದೆ ಎಂದು ಹೆಲ್ತ್ ಕೇರ್ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ ತಿಳಿಸಿದರು.

ಒಮನ್: ಫನ್‌ಟೈಮ್ ಸ್ಪೋರ್ಟ್ಸ್ ಮೀಟ್
ಒಮನ್, ಜ.26: ಇಂಡಿಯನ್ ಪ್ರವಾಸಿ ಫೋರಂ ಸಲಾಲ-ಒಮನ್ ವತಿಯಿಂದ ಭಾರತೀಯ ಕುಟುಂಬಗಳ ಸಮ್ಮಿಲನ ‘ಫನ್ ಟೈಮ್ ಸ್ಪೋರ್ಟ್ಸ್ ಮೀಟ್ ಅಸ್ಸಾಧ ಪಬ್ಲಿಕ್ ಪಾರ್ಕ್‌ನಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ನಿರ್ದೇಶಕ ಶಮೀರ್ ಪುತ್ತೂರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಸುಹಾಝ್ ಅಳಕೆಮಜಲ್ ಸಮಾರೋಪ ಭಾಷಣ ಮಾಡಿದರು. ಫೈರೋಝ್ ಕಲ್ಲಡ್ಕ, ಫಾರೂಕ್ ಕನ್ನಂಗಾರ್, ನಾಸಿರ್ ನಂದಾವರ, ಮುಹಮ್ಮದ್ ಅಲಿ ಬಂಟ್ವಾಳ್, ಆಬಿದ್ ನಂದಾವರ ಮತ್ತಿತರರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ್ದರು.

ಸುದಾನ ವಸತಿಯುತ ಶಾಲಾ ಬೆಳ್ಳಿಹಬ್ಬ ಕಾರ್ಯಕ್ರಮ ಉದ್ಘಾಟನೆ

ಪುತ್ತೂರು, ಜ.26: : ಪುತ್ತೂರಿನ ಸುದಾನ ವಸತಿಯುತ ಶಾಲಾ ಬೆಳ್ಳಿಹಬ್ಬ ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಮಂಗಳವಾರ ಉದ್ಘಾಟಿಸಿದರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಶಾಸಕಿ ಶಕುಂತಳಾ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ಪುಲಸ್ತ್ಯಾ ರೈ, ದ.ಕ. ಜಿಲ್ಲಾ ಶಿಕ್ಷಣಾಧಿಕಾರಿ ವೈ. ಶಿವರಾಮಯ್ಯ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್, ಸುದಾನ ವಸತಿ ಶಾಲೆಯ ಸಂಚಾಲಕ ರೆ. ವಿಜಯ ಹಾರ್ವಿನ್, ಸುದ್ದಿ ಸಮೂಹ ಸಂಸ್ಥೆಯ ಡಾ. ಯು.ಪಿ. ಶಿವಾನಂದ್, ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಯ ಸಂಚಾಲಕ ಸೀತಾರಾಮ ರೈ, ಕೆ. ಶಿಕ್ಷಣ ತಜ್ಞ ಸುಕುಮಾರ ಗೌಡ, ಯಕ್ಷಗಾನ ಕಲಾವಿದ ಕೆ.ಎಚ್.ದಾಸಪ್ಪರೈ, ಕುದ್ಕಾಡಿ ವಿಶ್ವನಾಥ ರೈ, ಆಡಳಿತ ಮಂಡಳಿ ಕಾರ್ಯದರ್ಶಿ ಪೀಟರ್ ವಿಲ್ಸನ್ ಪ್ರಭಾಕರ್, ಬೆಳ್ಳಿ ಹಬ್ಬ ಸಮಿತಿಯ ಉಪಾಧ್ಯಕ್ಷ, ವಿವೇಕಾನಂದ ಕಾಲೇಜ್‌ನ ನಿವೃತ್ತ ಪ್ರಾಂಶುಪಾಲ ಡಾ. ಎಚ್. ಮಾಧವ ಭಟ್, ಸ್ವಾಗತ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಆಳ್ವ ಸಾಜ, ಆರ್ಥಿಕ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಸುದರ್ಶನ್ ವಿ., ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್ ಎಂ., ಮುಖ್ಯಶಿಕ್ಷಕ ಶೋಭಾ ನಾಗರಾಜ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ರಿಶಿತಾ ಗೇಥಿಯಾ ಮತ್ತಿತರರು ಉಪಸ್ಥಿತರಿದ್ದರು. ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಸ್ವಾಗತಿಸಿದರು.

ಕುಂಬೋಲ್ ಉರೂಸ್‌ಗೆ ಚಾಲನೆ
ಕಾಸರಗೋಡು, ಜ.26: ಕುಂಬೋಲ್ ಸೈಯದ್ ಹಸಲ್ ಪೂಕ್ಕೋಯ ತಂಳ್‌ರ ಉರೂಸ್, ಪಾಪಂಕೋಯ ತಂಳ್‌ರ 83ನೆ ಆಂಡ್ ನೇರ್ಚೆಗೆ ಆರಿಕ್ಕಾಡಿ ಪಿ.ಕೆ. ನಗರದಲ್ಲಿ ಚಾಲನೆ ದೊರೆಯಿತು.
ಸೈಯದ್ ಕೆ.ಎಸ್. ಉಮರ್ ಕುಂಞಿಕ್ಕೋಯ ತಂಳ್ ಧ್ವಜಾರೋಹಣಗೈದರು. ಸೈಯದ್ ಕುಂಞಿಕ್ಕೋಯ ತಂಳ್ ಮುಟ್ಟಂ ಮಖಾಂ ಝಿಯಾರತ್‌ಗೆ ನೇತೃತ್ವ ನೀಡಿದರು. ಕೆ.ಎಸ್. ಅಟ್ಟಕ್ಕೋಯ ತಂಳ್, ಸೈಯದ್ ಕೆ.ಎಸ್. ಅಲಿ ತಂಳ್, ಡಾ. ಸೈಯದ್ ಸಿರಾಜ್ ತಂಳ್, ಸೈಯದ್ ಜಅ್ರ್ ಸ್ವಾದಿಕ್ ತಂಳ್, ಎಂ. ಆಲಿಕುಂಞಿ ಮುಸ್ಲಿಯಾರ್ ಶಿರಿಯ, ಸಚಿವ ವಿನಯಕುಮಾರ್ ಸೊರಕೆ, ಶಾಸಕರಾದ ಪಿ.ಬಿ. ಅಬ್ದುರ್ರಝಾಕ್, ಎನ್.ಎ. ನೆಲ್ಲಿಕುನ್ನು, ಡಾ. ಶಾಂತರಾಮ್ ಶೆಟ್ಟಿ, ಯೆನಪೊಯ ವಿಶ್ವವಿದ್ಯಾನಿಲಯ ಉಪಕುಲಪತಿ ವೈ. ಅಬ್ದುಲ್ಲ ಕುಂಞಿ, ಡಾ. ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು. ಪಾಣಕ್ಕಾಡ್ ಸೈಯದ್ ಹೈದರಾಲಿ ಶಿಹಾಬ್ ತಂಳ್ ಉರೂಸ್ ಕಾರ್ಯಕ್ರಮ ಉದ್ಘಾಟಿಸಿದರು. ಕಾಸರಗೋಡು ಸಂಯುಕ್ತ ಖಾಝಿ ಪ್ರೊ.ಕೆ.ಅಲಿಕುಟ್ಟಿ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಪಳ್ಳಿಕ್ಕೆರೆ ಖಾಝಿ ಪಿ.ಕೆ. ಅಬ್ದುಲ್ ಖಾದರ್ ಮುಸ್ಲಿಯಾರ್ ಅತಿಥಿಯಾಗಿ ಭಾಗವಹಿಸಿದ್ದರು. ಮಾಲಿಕ್‌ದೀನಾರ್ ಜಮಾಅತ್ ಮಸೀದಿ ಖತೀಬ್ ಅಬ್ದುಲ್ ಮಜೀದ್ ಬಾಖವಿ ಮುಖ್ಯ ಭಾಷಣಗೈದರು. ಜ.31ರಂದು ಉರೂಸ್ ಸಮಾರೋಪಗೊಳ್ಳಲಿದೆ.

ಮುಲ್ಕಿ: ಯತೀಂ ಖಾನಾ ಕಟ್ಟಡಕ್ಕೆ ಶಿಲಾನ್ಯಾಸ
ಮುಲ್ಕಿ, ಜ. 26: ಮುಲ್ಕಿ ಶಾಫಿ ಜುಮಾ ಮಸೀದಿಯ ಆಶ್ರಯದಲ್ಲಿ ನೂತನ ವಸತಿ ಸಮುಚ್ಚಯ, ಹಿಫ್ಲುಲ್ ಕುರ್‌ಆನ್, ಯತೀಂಖಾನಾ ಕಟ್ಟಡಕ್ಕೆ ಕಾರ್ನಾಡ್ ಮಸ್ಜಿದುನ್ನೂರ್ ಮಸೀದಿಯ ಬಳಿ ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಶಿಲಾನ್ಯಾಸಗೈದರು.
ಸಮಾರಂಭವನ್ನು ಸಮಸ್ತ ಕೇಂದ್ರ ಮುಶಾವರದ ಸದಸ್ಯ ಶೈಖುನಾ ಅಲ್ಹಾಜ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಉದ್ಘಾಟಿಸಿ ದುಆ ಆಶೀರ್ವಚನಗೈದರು. ಕರ್ನಾಟಕ ಇಸ್ಲಾಮಿಕ್ ಅಕಾಡಮಿಯ ಸಂಚಾಲಕ ಹುಸೈನ್ ದಾರಿಮಿ ರೆಂಜಲಾಡಿ ಮುಖ್ಯ ಭಾಷಣ ಮಾಡಿದರು. ಮುಲ್ಕಿಯ ಶಾಫಿ ಜುಮಾ ಮಸೀದಿಯ ಅಧ್ಯಕ್ಷ ಇಕ್ಬಾಲ್ ಮುಲ್ಕಿ ಅಧ್ಯಕ್ಷತೆ ವಹಿಸಿದ್ದರು.


ಮುಲ್ಕಿ ಶಾಫಿ ಜುಮಾ ಮಸೀದಿಯ ಖತೀಬ್ ಅಲ್‌ಹಾಜ್ ಇಬ್ರಾಹೀಂ ದಾರಿಮಿ, ಲಿಯಾಕತ್ ಅಲಿ, ಹಾಜಿ ವೈ. ಮುಹಮ್ಮದ್ ಕುಂಞಿ, ಹಾಜಿ ಸೈಯದ್ ಕರ್ನಿರೆ, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಇನಾಯತ್ ಅಲಿ ಮುಲ್ಕಿ, ಮುಹಮ್ಮದ್ ಆಸೀಫ್, ರಿಝ್‌ಬಾವಾ, ಹನೀಫ್ ಕೊಳಚೆ ಕಂಬ್ಳ, ಅಬ್ದುಲ್ ಹಕೀಮ್ ಅಶ್ರಫ್, ಕೆ.ಎಂ. ಬಾವಾ ಕೋಡಿಕೆರೆ, ನಾಲೂರು ಬಾವುಞ್ಞೆ ಮತ್ತಿತರರು ಉಪಸ್ಥಿತರಿದ್ದರು.

ಕೋಡಿ ಬ್ಯಾರೀಸ್: ಉಚಿತ ದಂತ ಚಿಕಿತ್ಸಾ ಶಿಬಿರ

ಕುಂದಾಪುರ, ಜ.26: ಪರಿಪೂರ್ಣ ಆರೋಗ್ಯವಂತ ವ್ಯಕ್ತಿಯಾಗಬೇಕಾದರೆ ಹಲ್ಲುಗಳ ಸಂರಕ್ಷಣೆ ಬಹುಮುಖ್ಯ. ಆರೋಗ್ಯವಂತ ದೇಹಕ್ಕೆ ಮತ್ತು ದೇಹದ ಆವಶ್ಯಕ ಆಹಾರ ಮಿಶ್ರಣಕ್ಕೆ ಹಲ್ಲುಗಳು ಅತ್ಯವಶ್ಯಕ ಎಂದು ಕೋಡಿ ಕುಂದಾಪುರದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮೂದ್ ಹೇಳಿದರು.


             
 ರಾಷ್ಟ್ರೀಯ ಸೇವಾ ಯೋಜನೆ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ ಕುಂದಾಪುರ ಮತ್ತು ಲಯನ್ಸ್ ಕ್ಲಬ್ ಬ್ರಹ್ಮಾವರ, ಬಾರ್ಕೂರು ಇದರ ಸಹಯೋಗದೊಂದಿಗೆ ನಡೆದ ಉಚಿತ ದಂತ ಚಿಕಿತ್ಸಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಲಯನ್ಸ್ ಕ್ಲಬ್‌ನ ಅಧ್ಯಕ್ಷ ಪ್ರತಾಪ್ ಚಂದ್ರ ಶೆಟ್ಟಿ, ಎ.ಎಸ್. ಹೆಗ್ಡೆ ಕುಂದಾಪುರ, ಡಾ. ರಾಹುಲ್ ಹೆಗ್ಡೆ, ಡಾ. ಅಕ್ಷಿತ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಪವನ್ ಕುಮಾರ್ ಸ್ವಾಗತಿಸಿದರು. ಯೋಜನಾಧಿಕಾರಿ ವಿದ್ಯಾಧರ್‌ಪೂಜಾರಿ ವಂದಿಸಿದರು. ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು.

ಪುತ್ತೂರು: ಸಾಧಕರಿಗೆ ‘ಅಣಿಲೆ ವೆಂಕಪ್ಪರೈ’ ಪ್ರಶಸ್ತಿ ಪ್ರದಾನ

ಪುತ್ತೂರು, ಜ.26: ಸಮಾಜದಲ್ಲಿನ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ರೋಯಲ್ ಟ್ರಸ್ಟ್ ಹಾಗೂ ಪಿ.ಬಿ.ರೈ ಪ್ರತಿಷ್ಠಾನ ಮಾದರಿ ಕೆಲಸ ಮಾಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಪುತ್ತೂರಿನ ರೋಟರಿ ಜಿ.ಎಲ್. ಸಭಾಭವನದಲ್ಲಿ ನಡೆದ ರೋಯಲ್ ಟ್ರಸ್ಟ್ ಹಾಗೂ ಕೆಯ್ಯೂರು ನೂಜಿ ಡಾ.ಪಿ.ಬಿ. ರೈ ಪ್ರತಿಷ್ಠಾನದ ವತಿಯಿಂದ ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಹಿರಿಯ ಸಾಮಾಜಿಕ ಕಾರ್ಯಕರ್ತ ಕೆಯ್ಯೂರು ನಾರಾಯಣ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ರೋಯಲ್ ಟ್ರಸ್ಟ್‌ನ ಗೌರವ ಅಧ್ಯಕ್ಷ ದಂಬೆಕಾನ ಸದಾಶಿವ ರೈ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸೀತಾರಾಮ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭ ನಿವೃತ್ತ ತಹಶೀಲ್ದಾರ್ ಕೋಚಣ್ಣ ರೈ ದಂಪತಿ, ರಂಗಕಲಾವಿದ ಚಿದಾನಂದ ಕಾಮತ್ ಕಾಸರಗೋಡು ದಂಪತಿ ಹಾಗೂ ಮಧುಕರ್‌ಗೆ ಅಣಿಲೆ ವೆಂಕಪ್ಪ ಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಕೃತಿಕಾ ಆರ್. ಐತಾಳ್, ನೀಮಾ ಎಚ್. ಮತ್ತು ನಿರೀಕ್ಷಾ ಜೆ.ರೈಗೆ ಪುರಸ್ಕಾರ ನೀಡಲಾಯಿತು. ಮದ್ಯವರ್ಜನ ವ್ಯಕ್ತಿ ಮಾಡಾವು ಕೃಷ್ಣ ಭಂಡಾರಿಯನ್ನು ಗೌರವಿಸಲಾಯಿತು. ರೋಯಲ್ ಟ್ರಸ್ಟ್ ಅಧ್ಯಕ್ಷ ಲೋಕೇಶ್ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಜೈನ್ ವಂದಿಸಿದರು.
 


 
ಆನಂದ ರೈ ಪ್ರಾಸ್ತಾವಿಕ ಮಾತನಾಡಿದರು. ಹೇಮಲತಾ ಕಜೆಗದ್ದೆ ನಿರೂಪಿಸಿದರು. ಲೀಗ್ ಕ್ರಿಕೆಟ್ ಟ್ರೋಫಿ ಗೆದ್ದ ಬಂದರು ಮಂಡಳಿ ಮಣಿಪಾಲ, ಜ.26: ಮಣಿಪಾಲ ವಿವಿ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ನಡೆದ ಕೆಆರ್‌ಸಿಎ ಕಾರ್ಪೊರೇಟ್ ಲೀಗ್ ಲೆದರ್‌ಬಾಲ್‌ಕ್ರಿಕೆಟ್ ಟೂರ್ನಿಯನ್ನು ಪೋರ್ಟ್ ಟ್ರಸ್ಟ್ ಆಫ್ ಇಂಡಿಯಾ (ಬಂದರು ಮಂಡಳಿ) ಗೆದ್ದುಕೊಂಡಿತು. ಮಣಿಪಾಲದ ವಿವಿ ಕ್ರಿಕೆಟ್ ಮೈದಾನದಲ್ಲಿ ನಡೆದ ಟೂರ್ನಿಯ ಅಂತಿಮ ಪಂದ್ಯದಲ್ಲಿ ಬೆಂಗಳೂರಿನ ಯೂನಿಸಿಸ್ ತಂಡವನ್ನು 56 ರನ್‌ಗಳ ಅಂತರದಿಂದ ಸುಲಭವಾಗಿ ಸೋಲಿಸಿದ ಭಾರತ ಮಂಡಳಿ ತಂಡ ಟ್ರೋಫಿಯೊಂದಿಗೆ ಒಂದು ಲಕ್ಷ ರೂ. ನಗದು ಬಹುಮಾನ ಗೆದ್ದುಕೊಂಡಿತು. ಪರಾಜಿತ ಯೂನಿಸಿಸ್ ತಂಡ ಪ್ರಶಸ್ತಿಯೊಂದಿಗೆ 50,000ರೂ. ನಗದು ಬಹುಮಾನ ಪಡೆಯಿತು. ಮೊದಲು ಬ್ಯಾಟಿಂಗ್ ನಡೆಸಿದ ಬಂದರು ಮಂಡಳಿ ತಂಡ 17.2 ಓವರುಗಳಲ್ಲಿ 119 ರನ್ ಗಳಿಸಿ ಆಲೌಟಾಯಿತು.ಬಳಿಕ ಅತ್ಯುತ್ತಮ ಬೌಲಿಂಗ್ ಮತ್ತು ಪೀಲ್ಡಿಂಗ್ ಪ್ರದರ್ಶನ ನೀಡಿದ ಬಂದರು ಮಂಡಲಿ 17ನೆ ಓವರಿನಲ್ಲಿ 63 ರನ್‌ಗಳಿಗೆ ಯುನಿಸಿಸ್‌ನ್ನು ಆಲೌಟ್ ಮಾಡಿತು. ಸರಣಿಯುದ್ದಕ್ಕೂ ಅತ್ಯುತ್ತಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News