×
Ad

ವೇಮುಲಾ ಆತ್ಮಹತ್ಯೆ: ಲಂಡನ್‌ನಲ್ಲಿ ಮೊಂಬತ್ತಿ ಬೆಳಗಿ ಪ್ರತಿಭಟನೆ

Update: 2016-01-26 23:40 IST


ಲಂಡನ್,ಜ.26: ಹೈದರಾಬಾದ್ ವಿವಿಯ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾನ ಆತ್ಮಹತ್ಯೆ ಘಟನೆಯನ್ನು ಪ್ರತಿಭಟಿಸಿ, ಇಲ್ಲಿನ ಅನೇಕ ದಕ್ಷಿಣ ಏಶ್ಯ ಸಂಘಟನೆಗಳು, ಭಾರತೀಯ ಹೈಕಮಿಶನ್ ಎದುರು ಮೊಂಬತ್ತಿ ಮೆರವಣಿಗೆ ನಡೆಸಿದವು.

   ದಕ್ಷಿಣ ಏಶ್ಯ ಸಾಲಿಡಾರಿಟಿ ಗ್ರೂಪ್, ಕಾಸ್ಟ್‌ವಾಚ್ ಯುಕೆ ಹಾಗೂ ಅಂಬೇಡ್ಕರ್‌ವಾದಿ ಮತ್ತು ಬೌದ್ಧ ಸಂಘಟನೆಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳು ಈ ಪ್ರತಿಭಟನೆಯನ್ನು ಆಯೋಜಿಸಿದ್ದವು. ವೇಮುಲಾ ಆತ್ಮಹತ್ಯೆಗೆ ಕಾರಣರಾದ ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸುವ ಪತ್ರವೊಂದನ್ನು ಈ ಸಂದರ್ಭದಲ್ಲಿ ಭಾರತೀಯ ಹೈಕಮಿಶನರ್ ಅವರಿಗೆ ಹಸ್ತಾಂತರಿಸಲಾಯಿತು.
   ‘‘ಹೈದರಾಬಾದ್ ವಿವಿಯಲ್ಲಿ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಸಾವಿನ ಸುದ್ದಿಯನ್ನು ಕೇಳಿ ನಮಗೆ ಆಘಾತವಾಗಿದೆ ಹಾಗೂ ವಿಷಾದವಾಗಿದೆ’’ಯೆಂದು ಪತ್ರವು ತಿಳಿಸಿದೆ. ರೋಹಿತ್ ಆತ್ಮಹತ್ಯೆಗೆ ಕಾರಣರಾದ ಮಾನವಸಂಪನ್ಮೂಲ ಸಚಿವೆ ಸ್ಮತಿ ಇರಾನಿ, ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದ್ದಾರೆ. ದಲಿತ ವಿರೋಧಿ ಕೃತ್ಯಗಳಿಗಾಗಿ ವಿವಿಯ ಉಪಕುಲಪತಿ ಅಪ್ಪಾರಾವ್ ಪೊಡಿಲಾ ಅವರ ರಾಜೀನಾಮೆಗೂ ಅವರು ಒತ್ತಾಯಿಸಿದ್ದಾರೆ. ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಲಿತರ ಮೇಲೆ ನಡೆಯುತ್ತಿರುವ ತಾರತಮ್ಯಗಳನ್ನು ಕೊನೆಗೊಳಿಸಲು ತುರ್ತು ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಪತ್ರವು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News