×
Ad

ಬಿಡುಗಡೆಯಾಗದ ಫೆಲೋಶಿಪ್ ; ನೆಹರೂ ವಿವಿಯ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಬೆದರಿಕೆ

Update: 2016-01-27 13:25 IST

ಹೊಸದಿಲ್ಲಿ, ಜ.27: ಫೆಲೋಶಿಪ್‌ನ್ನು ಬಿಡುಗಡೆ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಜವಾಹರ್‌ಲಾಲ್ ನೆಹರೂ ವಿವಿಯ ದಲಿತ  ಹಿರಿಯ ಸಂಶೋದನಾ ವಿದ್ಯಾರ್ಥಿಯೊಬ್ಬರು ವಿವಿಗೆ ಎಚ್ಚರಿಕೆ ನೀಡಿದ್ದಾರೆ.
ಜವಾಹರ್‌ ನೆಹರೂ ವಿವಿಯ ಸಿಐಪಿಒಡಿ ವಿಭಾಗದ  ಸಂಶೋಧನಾ ವಿದ್ಯಾರ್ಥಿ ಮದನ್‌ ಮೆಹೆರ‍್  ಒಂದು ವಾರದೊಳಗಾಗಿ ತಮಗೆ ಬಾಕಿ ಇರುವ ಫೆಲೋಶಿಪ್( ಶಿಷ್ಯವೇತನ )ಪಾವತಿಸದಿದ್ದರೆ ವಿವಿಯ ಆಡಳಿತ ಕಚೇರಿಯ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿವಿಗೆ ಪತ್ರ ಬರೆದಿದ್ದಾರೆ. 2010ರಲ್ಲಿ ಸಂಶೋಧನೆ ಆರಂಭಿಸಿದ್ದರು. 2014ರಲ್ಲಿ  ಸಂಶೋಧನೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆಗೆ ಕೇಳಿದ್ದರು.ಮೇ 2015ರಲ್ಲಿ ಅವರಿಗೆ ಸಂಶೋಧನಾ ಅವಧಿ ವಿಸ್ತರಣೆಗೊಂಡಿತ್ತು.  ಆದರೆ ಅವರಿಗೆ ಶಿಷ್ಯವೇತನ ಕಳೆದ ಒಂದು ವರ್ಷದಿಂದ  ಸಿಕ್ಕಿಲ್ಲ ಎನ್ನಲಾಗಿದೆ.
ಹಿಂದೆ ಇದೇ ರೀತಿ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್‌  ವಿ ಅವರು ಹೈದರಾಬಾದ್‌ ವಿವಿಗೆ ಪತ್ರ ಬರೆದು ತನ್ನ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡಿದ್ದರು. ಆದರೆ ವಿವಿ ಅವರ ಬೇಡಿಕೆಯನ್ನು ಈಡೇರಿಸಿರಲಿಲ್ಲ ಈ ಕಾರಣದಿಂದಾಗಿ ಮನನೊಂದ ರೋಹಿತ್‌ ಆತ್ಮಹತ್ಯೆ ಮಾಡಿಕೊಂಡಿದ್ದರೆಂದು ಹೇಳಲಾಗಿದೆ.
ಸಂಶೋಧನಾ ವಿದ್ಯಾರ್ಥಿ ಮದನ್‌ ಮೆಹೆರ‍್  ಬೆದರಿಕೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ವಿವಿಯ ಉಪಕುಲಪತಿ ಎಸ್‌ಕೆ ಸೋಪ್ರಿ  ಅವರು ಆತನ ಬಗ್ಗೆ ನಿಗಾ ಇರಿಸುವಂತೆ ಸಂಬಂಧಪಟ್ಟವರಿಗೆ  ಆದೇಶ ನೀಡಿದ್ದಾರೆ.   ಮದನ್ ಮೆಹೆರ್‌2013ರಲ್ಲಿ ಫೀಲ್ಡ್‌ ಟ್ರಿಪ್‌ಗಾಗಿ 66,000 ತೆಗೆದುಕೊಂಡಿದ್ದರು. ಆದರೆ ಅವರು ಫೀಲ್ಡ್‌ ಟ್ರಿಪ್ ಹೋಗಿಲ್ಲ. ಇದರಿಂದಾಗಿ ಅವರಿಗೆ ಸಮಸ್ಯೆ ಉಂಟಾಗಿದೆ ಎಂದು ವಿವಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News