ಇರಾನ್ ಅಧ್ಯಕ್ಷರ ಭೇಟಿ ವೇಳೆ ನಗ್ನ ಪ್ರತಿಮೆಗಳನ್ನು ಮುಚ್ಚಿದ ಇಟಲಿ ಪ್ರಧಾನಿ ವಿರುದ್ಧ ಆಕ್ರೋಶ !

Update: 2016-01-27 08:15 GMT

ಇಟಲಿ: ಇರಾನ್ ಅಧ್ಯಕ್ಷ ಹಸ್ಸಾನ್ ರೊಹಾನಿಯವರ ಸಂದರ್ಶನ ಹಿನ್ನೆಲೆಯಲ್ಲಿ ರೋಮ್‌ನ ಕ್ಯಾಪಿಟಲಿಯನ್ ಮ್ಯೂಸಿಯಂನಲ್ಲಿ ಪ್ರಾಚೀನ ಸ್ತ್ರೀಯರ ನಗ್ನ ಪ್ರತಿಮೆಗಳನ್ನು ಮುಚ್ಚಿದ್ದಕ್ಕಾಗಿ ಪ್ರಧಾನ ಮಂತ್ರಿ ಮ್ಯಾಟಿಯೋ ರೆನ್ಸಿ ವಿರುದ್ಧ ದೇಶದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇರಾನಿನ ಅಧ್ಯಕ್ಷರಿಗೆ ಅಪಮಾನ ಹಾಗೂ ಬೇಸರ ಅನಿಸದಿರಲಿಕ್ಕಾಗಿ ಪ್ರಾಚೀನ ಪ್ರತಿಮೆಗಳನ್ನು ಮುಚ್ಚಿಡಲು ಆತಿಥೇಯರು ತೀರ್ಮಾನಿಸಿದ್ದರು.

ಸೋಮವಾರ ಇರಾನ್‌ನ ರಾಜತಾಂತ್ರಿಕ ಪ್ರಮುಖರು ಮತ್ತು ಅಧ್ಯಕ್ಷರು ಎರಡು ದಿವಸಗಳ ಸಂದರ್ಶನಕ್ಕಾಗಿ ರೋಮ್‌ಗೆ ಬಂದಿಳಿದಿದ್ದಾರೆ. ಅತಿಥಿಗಳನ್ನು ಓಲೈಸಲಿಕ್ಕಾಗಿ ಪ್ರಾಚೀನ ಸ್ಮಾರಕಗಳನ್ನು ಅಗೌರವಿಸಲಾಗಿದೆ ಎಂದು ಇಟಲಿ ಪ್ರಧಾನಿ ರೆನ್ಸಿ ಕ್ರಮ ಕಟುವಾಯಿತೆಂದು ಪ್ರತಿಪಕ್ಷಗಳು ಟೀಕಿಸಿವೆ.

ಇಟಲಿಮತ್ತು ಇರಾನ್ ಪರಸ್ಪರ 17 ಬಿಲಿಯನ್ (1700 ಕೋಟಿ)ಯುರೋದ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಲಿವೆ. ಇರಾನ್‌ನ ಮಾನವ ಹಕ್ಕು ಉಲ್ಲಂಘನೆ ಕುರಿತು ಜಂಟಿ ಸುದ್ದಿ ಗೋಷ್ಠಿಯಲ್ಲಿ ಯಾವ ಮಾತೂ ಆಡದಿರುವ ರೆನ್ಸಿ ನಿಲುವನ್ನು ಎಡ ಮತ್ತು ಬಲಪಂಥೀಯ ಸಂಘಟನೆಗಳು ಟೀಕಿಸಿ ರಂಗಪ್ರವೇಶಿಸಿವೆ.

ಪ್ರತಿಮೆ ಮುಚ್ಚಿ ಇಟಲಿಯ ಸಾಂಸ್ಕೃತಿಕ ವರ್ಚಸ್ಸಿಗೆ ಪ್ರಧಾನಿ ಕುಂದೊದಗಿಸಿದ್ದಾರೆ ಎಂದೂ ಇತರ ಸಂಸ್ಕೃತಿಗಳನ್ನು ಆದರಿಸಲಿಕ್ಕಾಗಿ ಸ್ವಂತ ಸಂಸ್ಕೃತಿಯನ್ನು ಕೆಳಸ್ತರಗೊಳಿಸಬೇಕಾಗಿತ್ತೇ ಎಂದು ಪ್ರಮುಖರು ಪ್ರಶ್ನಿಸಿದ್ದಾರೆ. ಮಾತ್ರವಲ್ಲ ಆಹಾರದ ಮೆನುವಿನಿಂದ ವೈನನ್ನು ತೆಗೆಯಬೇಕೆಂದು ಇರಾನ್ ಸೋಮವಾರವೇ ಇಟಲಿಯನ್ನು ಆಗ್ರಹಿಸಿರುವುದು ಕೂಡಾ ವಿವಾದಾಸ್ಪದವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News