×
Ad

ರೋಹಿತ್ ಆತ್ಮಹತ್ಯೆ ಪ್ರಕರಣ:ಜಾತಿ ತಾರತಮ್ಯ ವಿರುದ್ಧದ ರಾಷ್ಟ್ರೀಯ ಚಳವಳಿಯಾದ ಪ್ರತಿಭಟನೆ

Update: 2016-01-27 15:14 IST

ಹೈದರಾಬಾದ್‌, ಜ.27: ಹೈದರಾಬಾದ್  ವಿವಿಯ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್  ವೆಮೂಲ ಆತ್ಮಹತ್ಯೆ ಹಿನ್ನೆಲೆಯಲ್ಲಿ ದೇಶದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಇದೊಂದು ಜಾತಿ ತಾರತಮ್ಯ ವಿರುದ್ಧದ ರಾಷ್ಟ್ರೀಯ ಚಳವಳಿಯಾಗಿ ಹೊಸ ರೂಪ ಪಡೆದಿದೆ.
ಬುಧವಾರ ರೋಹಿತ್  ವೆಮೂಲ ಆತ್ಮಹತ್ಯೆ ಪ್ರಕಣರಣವನ್ನು ಖಂಡಿಸಿ  ದಿಲ್ಲಿಯ ಜವಾಹರ‍್ಲಾಲ್‌ ನೆಹರೂ ವಿವಿ ಸೇರಿದಂತೆ ದೇಶದ ವಿವಿಧ ವಿವಿಗಳಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ವಿದ್ಯಾರ್ಥಿಗಳ ಮುಷ್ಕರ ಜಾತಿ ತಾರತಮ್ಯ ವಿರುದ್ಧದ ಚಳುವಳಿಯಾಗಿ ಬದಲಾಗಿರುವುದು ಒಂದಡೆಯಾದರೆ, ರಾಜಕಾರಣಿಗಳು ಸಖತ್‌ ಲಾಭ ಪಡೆಯುವ ಪ್ರಯತ್ನದಲ್ಲಿದ್ದಾರೆ. ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಮಣಿಸಲು    ಕಾಂಗ್ರೆಸ್‌  ನೇತೃತ್ವದ ಪ್ರತಿಪಕ್ಷಗಳು ರೋಹಿತ್‌ ಆತ್ಮಹತ್ಯೆ ಪ್ರಕರಣವನ್ನು ಅಸ್ತ್ರವಾಗಿ ಬಳಿಸಿಕೊಂಡಿದೆ.
ಜವಾಹರ‍್ಲಾಲ್‌ ನೆಹರೂ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಮತ್ತು ಬಂಡಾರು ದತ್ತಾತ್ರೇಯ , ವಿವಿ ಉಪಕುಲಪತಿ ರಾಜೀನಾಮೆಗೆ ಒತ್ತಾಯಿಸಿದರು. ರೋಹಿತ್ ಆತ್ಮಹತ್ಯೆ ಪ್ರಕರಣದಲ್ಲಿ ಇವರ ಕುಮ್ಮಕ್ಕು ಇದೆ ಆರೋಪಿಸಿದರು.
" ರೋಹಿತ್‌ ಆತ್ಮಹತ್ಯೆ ಪ್ರಕರಣ ನಡೆದ ಬಳಿಕ  ಎಂಎಚ್ಆರ‍್ಡಿ ತನ್ನನ್ನು ರಕ್ಷಿಸಲು ನೋಡುತ್ತಿದೆ. ರೋಹಿತ್‌ ಸೇರಿದಂತೆ ಇತರ ಐವರ ಅಮಾನತಿಗ ಕೇಂದ್ರ ಮಾನವ ಸಂಪೂರ್ಣ ಕಾರಣವಾಗಿದ್ದರೂ, ತನಗೇನು ಗೊತ್ತಿಲ್ಲವೆಂದು ಹೇಳುತ್ತಿದೆ ಎಂದು  ಆಲ್‌ ಇಂಡಿಯಾ ಸ್ಟೂಡೆಂಟ್ಸ್‌ ಅಸೋಸಿಯೆಶನ್ ಅಭಿಪ್ರಾಯಪಟ್ಟಿದೆ.
ನ್ಯಾಶನಲ್‌ ಸ್ಟೂಡೆಂಟ್ಸ್‌ ಯೂನಿಯನ್‌ ಆಫ್ ಇಂಡಿಯಾ(ಎನ್‌ಎಸ್ ಯುಐ)  ಸದಸ್ಯರು ಸಚಿವೆ ಸ್ಮೃತಿ ಇರಾನಿಯ ಮನೆಯ ಮುಂದೆ ಧರಣಿ ನಡೆಸಿ ರೋಹಿತ್  ವೆಮುಲಾ ಪ್ರಕರಣದಲ್ಲಿ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
 ಬಿಜೆಪಿಯನ್ನು ಈ ಪ್ರಕರಣದಿಂದ ಬಚವಾಗಲುಬಿಡುವುದಿಲ್ಲ " ಎಂದು ಎನ್‌ಎಸ್‌ ಯುಐ  ತಿಳಿಸಿದೆ.
ರಾಂಚಿಯಲ್ಲಿ ಎನ್‌ಎಸ್‌ ಯುಐ ರಾಂಚಿ ವಿವಿಯ ಗೇಟ್‌ನ ಮುಂದೆ ಸಚಿವ ದತ್ತಾತ್ರೇಯ ಅವರ ಪ್ರತಿಕೃತಿಯನ್ನು ದಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News