ರಾಬರ್ಟ್‌ವಾದ್ರರಿಗೆ ಕ್ಲೀನ್ ಚಿಟ್ ನೀಡಿಲ್ಲ ಎಂದ ರಾಜಸ್ಥಾನ ಸರಕಾರ
Update: 2016-01-27 16:04 IST
ಜೈಪುರ: ರಾಬರ್ಟ್‌ವಾದ್ರರಿಗೆ ಕ್ಲೀನ್ ಚಿಟ್ ನೀಡಲಾಗಿ ಎಂದು ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ರಾಜಸ್ತಾನ ಸರಕಾರ ನಿರಾಕರಿಸಿದೆ. ಅವರ ವಿರುದ್ಧ ತನಿಖೆ ಮುಂದುವರಿಯುತ್ತಿದೆಯೆಂದೂ ಕ್ಲೀನ್ ಚಿಟ್ ನೀಡಲಾದ ವರದಿ ಆಧಾರ ರಹಿತವೆಂದು ಬಿಕನೇರ್ ಪೊಲೀಸರು ಹೇಳಿದ್ದಾರೆ. ವಾದ್ರರ ನೇತೃತ್ವದಲ್ಲಿರುವ ಹೈಲೈಟ್ ಹಾಸ್ಪಿಟಲಿಟಿ ಬಿಕಾನೇರ್‌ನಲ್ಲಿ 69.55 ಎಕರೆ ಭೂಮಿ ವಂಚಿಸಿದೆ ಎಂಬ ಕೇಸಿನಲ್ಲಿ ವಾದ್ರರಿಗೆ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ಹೊಸ ಸ್ಪಷ್ಟನೆ ಸರಕಾರದ ವತಿಯಿಂದ ಹೊರಬಂದಿದೆ. ಗೃಹ ಸಚಿವ ಗುಲಾಬ್ ಚಂದ್ ತನಿಖೆ ಮುಂದುವರಿಯುತ್ತಿದೆ. ಆರೋಪ ಪತ್ರವನ್ನು ಸಮರ್ಪಿಸಲಾಗಿಲ್ಲ ಆದುದರಿಂದ ಹೇಗೆ ಕ್ಲೀನ್ ಚಿಟ್ ನೀಡಲು ಸಾಧ್ಯವೆಂದ ಪ್ರಶ್ನಿಸಿದ್ದಾರೆ.