×
Ad

ಕಾಸರಗೋಡು : ಕಳಪೆ ರಸ್ತೆ ಕಾಮಗಾರಿ - ಕಾಮಗಾರಿಗೆ ನಾಗರಿಕರಿಂದ ತಡೆ

Update: 2016-01-27 16:57 IST

ಕಾಸರಗೋಡು :  ರಾಜ್ಯ ಹೆದ್ದಾರಿಯ  ಚಂದ್ರಗಿರಿ ಸೇತುವೆಯಿಂದ  ಪಿಲಿಕುಂಜೆ ಜಂಕ್ಷನ್ ತನಕ  ಕಳಪೆ ರಸ್ತೆ ಕಾಮಗಾರಿ ನಡೆಯುತ್ತಿದೆ  ಎಂದು  ಆರೋಪಿಸಿ   ನಾಗರಿಕರು ಕಾಮಗಾರಿ ತಡೆದ ಘಟನೆ  ಬುಧವಾರ   ನಡೆದಿದೆ.

ಕಾನ್ಚಾನ್ಗಾಡ್ ನಿಂದ  ಕಾಸರಗೋಡು ತನಕದ  ರಾಜ್ಯ ಹೆದ್ದಾರಿ ಸುಮಾರು ೧೪೨ ಕೋಟಿ ರೂ. ವೆಚ್ಚದಲ್ಲಿ   ಅಭಿವ್ರದ್ದಿಗೊಳಿಸಲಾಗುತ್ತಿದ್ದು,  ಚೆಮ್ನಾಡ್ ನಿಂದ  ಕಾನ್ಚಾನ್ಗಾಡ್ ತನಕದ ರಸ್ತೆಯ  ಕಾಮಗಾರಿ  ಉತ್ತಮ ಸ್ಥಿತಿಯಲ್ಲಿ ನಡೆಯುತ್ತಿದ್ದರೂ  ಚಂದ್ರಗಿರಿ ಸೇತುವೆಯಿಂದ  ಪಿಲಿಕುಂಜೆ ತನಕದ ರಸ್ತೆ  ಕಾಮಗಾರಿ  ಮಂಗಳವಾರ ದಿಂದ  ಆರಂಭಿಸಲಾಗಿದ್ದು , ಎರಡು ದಿನಗಳಲ್ಲಿ  ಕಾಮಗಾರಿ ಪೂರ್ಣಗೊಳಿಸುವ ತೀರ್ಮಾನಕ್ಕೆ  ಬರಲಾಗಿತ್ತು . ಇದಕ್ಕಾಗಿ  ಎರಡು ದಿನಗಳಿಗೆ ರಸ್ತೆಯನ್ನು  ಸಂಚಾರಕ್ಕೆ ಸ್ಥಗಿತಗೊಳಿಸ ಲಾಗಿತ್ತು. 

ಆದರೆ ಈ ಹಿಂದಿನ ಟಾರಿ೦ಗನ್ನು ತೆರವುಗೊಳಿಸದೆ  ಅದರ ಮೇಲೆಯೇ ಟಾರಿಂಗ್ ನಡೆಸಿದ್ದನ್ನು ಸ್ಥಳೀಯರು ತಡೆದರು.  ಹಳೆ ಟಾರಿ೦ಗ್ ತೆರವುಗೊಳಿಸಿ ಅಗೆದ ಬಳಿಕವಷ್ಟೇ ಕಾಮಗಾರಿ ನಡೆಸಬೇಕಿದೆ. ಆದರೆ ಈಗ ಇರುವ ರಸ್ತೆಗೆ ಟಾರಿ೦ಗ್ ನಡೆಸುವುದನ್ನು ನಾಗರಿಕರು ಕಾಮಗಾರಿಗೆ ತಡೆಯೊಡ್ಡಿ , ಕಾಮಗಾರಿ ಉಸ್ತುವಾರಿ  ಹೊಂದಿರುವ ಕೆ ಎಸ್ ಟಿ ಪಿ  ಅಧಿಕಾರಿಗಳನ್ನು  ತರಾಟೆಗೆ ತೆಗೆದುಕೊಂಡರು.  ಕೋಟ್ಯಾಂತರ ರೂ . ವೆಚ್ಚದಲ್ಲಿ ರಸ್ತೆ ಅಭಿವ್ರದ್ದಿ ನಡೆಯುತ್ತಿದ್ದು, ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ನಾಗರಿಕರು ಆರೋಪಿಸಿದರು.

ಚುನಾವಣೆ ಹತ್ತಿರಬರುತ್ತಿರುವುದರಿಂದ   ಶೀಘ್ರ ಉದ್ಘಾಟನೆ ನಡೆಸಲು ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಪ್ರತಿಭಟನೆ ಹಿನ್ನಲೆಯಲ್ಲಿ  ರಸ್ತೆ ಕಾಮಗಾರಿ ಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News