ಗಣರಾಜ್ಯೋತ್ಸವ ಪರೇಡ್‌ಗೆ ಮಾಜಿ ಯೋಧರ ಬಹಿಷ್ಕಾರ,, ಗಮನ ಸೆಳೆದ ಯೋಧರ ಸ್ತಬ್ದ ಚಿತ್ರ.,,...!
ಹೊಸದಿಲ್ಲಿ,ಜ.27: ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಮೊದಲ ಬಾರಿಗೆ ಮಂಗಳವಾರ ಮಾಜಿ ಯೋಧರ ಅನುಪಸ್ಥಿತಿ ಕಂಡು ಬಂದಿದೆ. ಈ ಕಾರ್ಯಕ್ರಮಕ್ಕೆ ಮಾಜಿ ಯೋಧರ ಬದಲಿಗೆ ಯೋಧರ ಸ್ತಬ್ದ ಚಿತ್ರ ಹಾಕಲಾಗಿತ್ತು.. ತಮ್ಮ ಬೇಡಿಕೆಯನ್ನು ಈಡೇರಿಸದ ಹಿನ್ನೆಲೆಯಲ್ಲಿ ನಿವೃತ್ತ ಯೋಧರು ಪರೇಡ್‌ನ್ನು ಬಹಿಷ್ಕರಿಸಿದ್ದರು.
ಕಳೆದ ನಲುವತ್ತು ವರ್ಷಗಳಿಂದಲೂ ಬಗೆಹರಿಯದ ಬೇಡಿಕೆಯಾಗಿರುವ "ಒಂದು ಶ್ರೇಣಿ– ಒಂದು ಪಿಂಚಣಿ "ಯೋಜನೆಯನ್ನು ಇನ್ನೂ ಜಾರಿಗೊಳಿಸದಿರುವುದನ್ನು ಪ್ರತಿಭಟಿಸಿ ಮಾಜಿ ಸೈನಿಕರು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲಿಲ್ಲ.
ಜಂತರ್ ಮಂತರ್ ನಲ್ಲಿ ನಿವೃತ್ತ ಯೋಧರು ತಮ್ಮ ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.
1965ರ ಯುದ್ಧ ಸ್ಮರಣಾರ್ಥ ಏರ್ಪಡಿಸಲಾದ ಸಮಾರಂಭವನ್ನು ಕಳೆದ ವರ್ಷ ನಿವೃತ್ತ ಯೋಧರು ಬಹಿಷ್ಕರಿಸಿದ್ದರು.
ಸಮಸ್ಯೆ ಬಗೆಹರಿಯುವ ತನಕ ಸರಕಾರಿ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದಾಗಿ ನಿವೃತ್ತ ಯೋಧರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.