ಕಾಸರಗೋಡು : ಬೇಕಲ ಪಾಲಕುನ್ನು ಸಮೀಪ ವ್ಯಕ್ತಿಯ ಕೊಲೆ
ಕಾಸರಗೋಡು : ಬೇಕಲ ಪಾಲಕುನ್ನು ಸಮೀಪದ ಪಾಲಕುನ್ನುವಿನ ಬಾಡಿಗೆ ಕೊಟಡಿಯಲ್ಲಿ ವಾಸಿಸುತ್ತಿದ್ದ ತಮಿಳುನಾಡು ಮೂಲದ ವ್ಯಕ್ತಿಯನ್ನು ಕೊಲೆಗೈದ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ಕೊಲೆಗೀಡಾದವರನ್ನು ತಮಿಳುನಾಡಿನ ತಂಜಾವೂರಿನ ಅಶೋಕ್ ( ೫೪) ಎಂದು ಗುರುತಿಸಲಾಗಿದೆ. ಪಾಲಕುನ್ನು ರೈಲ್ವೆ ಗೇಟ್ ಸಮೀಪದ ಬಾಡಿಗೆ ಕೊಟಡಿ ಯಲ್ಲಿ ಮ್ರತದೇಹ ಪತ್ತೆಯಾಗಿದೆ. ಕುತ್ತಿಗೆ ಯಲ್ಲಿ ಗಂಭೀರ ಸ್ವರೂಪದ ಗಾಯ ಕಂಡುಬಂದಿದೆ. ಕೊಟಡಿಯಲ್ಲಿ ರಕ್ತದೋಕುಲಿ ಕಂಡುಬಂದಿದೆ. ಗೋಡೆಯಲ್ಲಿ ರಕ್ತದ ಕಲೆಗಳಿವೆ. ಅಶೋಕ್ ಹಲವು ವರ್ಷಗಳಿಂದ ಪಾಲಕುನ್ನು ವಿನಲ್ಲಿ ಇಸ್ತ್ರಿ ಅಂಗಡಿ ನಡೆಸುತ್ತಿದ್ದರು. ಮಂಗಳವಾರ ರಾತ್ರಿ ಪಾಲಕುನ್ನು ವಿನ ಬಾರ್ಬರ್ ಶಾಪ್ ಮಾಲಕ ಕಾರ್ತಿಕ್ ಜೊತೆ ಅಶೋಕ್ ಇದ್ದರೆನ್ನಲಾಗಿದೆ, ಇಂದು ಬೆಳಿಗ್ಗೆಯಿಂದ ಕಾರ್ತಿಕ್ ತಲೆಮರೆಸಿಕೊಂಡಿದ್ದಾನೆ. ಇದರಿಂದ ಕೃತ್ಯದ ಹಿಂದೆ ಕಾರ್ತಿಕ್ ನ ಕೈವಾಡ ಇದೆ ಎಂಬ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ. ಶ್ರೀನಿವಾಸ್ , ಡಿ ವೈ ಎಸ್ ಪಿ ಹರಿಶ್ಚಂದ್ರ ನಾಯಕ್ , ಬೇಕಲ ಟಾಣಾ ಸಬ್ ಇನ್ಸ್ ಪೆಕ್ಟರ್ ನಾರಾಯಣನ್ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಫಾರೆನ್ಸಿಕ್ , ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದೆ.