ಕೇಂದ್ರ ನಾಗರಿಕ ಸೇವೆಗೆ ಸುಳ್ಯದ ಯುವಕ ಬಾಳಿಲದ ಶ್ರೀಹರ್ಷ ನೆಟ್ಟಾರ್‌ಗೆ ಆರನೇ ರ್ಯಾಂಕ್
ಸುಳ್ಯ: ಕೇಂದ್ರ ನಾಗರಿಕ ಸೇವೆಗೆ ಸುಳ್ಯದ ಯುವಕನೋರ್ವ ಆಯ್ಕೆಯಾಗಿದ್ದು, ಈ ಅಪರೂಪದ ಸಾಧನೆ ಮಾಡಿದ ಸುಳ್ಯ ತಾಲೂಕಿನ 2ನೆಯವರಾಗಿದ್ದಾರೆ.
ಕೇಂದ್ರ ಸರಕಾರದ ವಿವಿಧ ಸೇವೆಗಳಿಗೆ ಹೆಚ್ಚುವರಿಯಾಗಿ 126 ಅಭ್ಯರ್ಥಿಗಳನ್ನು ನೇಮಿಸುವಂತೆ ಕೇಂದ್ರ ಲೋಕಸೇವಾ ಆಯೋಗವು ಶಿಫಾರಸ್ಸು ಮಾಡಿದ್ದು, ಈ ಅಭ್ಯರ್ಥಿಗಳು 2014ರ ಬ್ಯಾಚಿಗೆ ಯು.ಪಿ.ಎಸ್.ಸಿ. ಪರೀಕ್ಷೆ ಬರೆದವರಾಗಿದ್ದು, ಇದರಲ್ಲಿ ಸುಳ್ಯ ತಾಲೂಕಿನ ಬಾಳಿಲದ ಶ್ರೀಹರ್ಷ ನೆಟ್ಟಾರು 6ನೇ ಶ್ರೇಣಿ ಪಡೆದಿದ್ದಾರೆ.
2015ರ ಜುಲೈ 4ರಂದು ಫಲಿತಾಂಶ ಪ್ರಕಟವಾಗಿತ್ತು. ಆಗ ಈ ಅಭ್ಯರ್ಥಿಗಳನ್ನು ಕಾಯ್ದಿರಿಸುವ ಪಟ್ಟಿಗೆ ಸೇರಿಸಲಾಗಿತ್ತು. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಬೇಡಿಕೆಯ ಮೇರೆಗೆ ಆಯೋಗವು 2014ರ ಬ್ಯಾಚಿನ 126 ಮಂದಿಯನ್ನು ಶಿಫಾರಸ್ಸು ಮಾಡಿದೆ. ಇವರಲ್ಲಿ ಮೂವರು ಕನ್ನಡಿಗರು ಮಾತ್ರ ಇದ್ದು, ಅವರಲ್ಲಿ ಶ್ರೀಹರ್ಷ ಒಬ್ಬರು. ಬಾಳಿಲದ ಉದಯಗಿರಿಯಲ್ಲಿ ವಾಸ್ತವ್ಯ ಇರುವ ಕೃಷಿಕ ಹಾಗೂ ಸಾಮಾಜಿಕ ಧುರೀಣ ನೆಟ್ಟಾರು ಗೋಪಾಲಕೃಷ್ಣ ಭಟ್‌ರ ಪುತ್ರರಾದ ಶ್ರೀಹರ್ಷ ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ.