ಭಯೋತ್ಪಾದಕರನ್ನು ಪ್ರೋತ್ಸಾಹಿಸುವ ವಿಶ್ವ ಸಂಸ್ಥೆ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್: ಇಸ್ರೇಲ್ ಪ್ರಧಾನಿ
Update: 2016-01-27 18:40 IST
ನ್ಯೂಯಾರ್ಕ್, ಜ.27: ವಿಶ್ವ ಸಂಸ್ಥೆಯ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು ಭಯೋತ್ಪಾದಕರನ್ನು ಪ್ರೋತ್ಸಾಹಿಸುತ್ತಿದ್ದಾರೆ.ಅವರಲ್ಲಿ ಭಯೋತ್ಪಾದನಗೆ ಯಾವುದೇ ಸಮರ್ಥನೆ ಇಲ್ಲ ಎಂದು ಇಸ್ರೇಲ್‌ನ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು.ಆರೋಪಿಸಿದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು ಬಾನ್ ಕಿ ಮೂನ್ ಹೇಳಿಕೆಗೆ ಸ್ಪಷ್ಟನೆ ನೀಡಿದರು.
ಸ್ವತಂತ್ರ ಫೆಲೆಸ್ತೇನ್ ರಾಷ್ಟ್ರವನ್ನು ಕಟ್ಟುವ ಇಸ್ರೇಲ್ ಬದ್ಧತೆ ಸಂಶಯಾಸ್ಪದವಾಗಿದೆ ಎಂದು ಬಾನ್ ಕಿ ಮೂನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬೆಂಜಮಿನ್ ನೇತನ್ಯಾಹು " ಫೆಲೆಸ್ತೇನ್ ನವರು ಕೊಲೆಗಡುಕರು" ಅವರಿಗೆ ಸ್ವತಂತ್ರ ರಾಷ್ಟ್ರ ನಿರ್ಮಾಣ ಬೇಕಾಗಿಲ್ಲ ಎಂದರು.