ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಆಯ್ಕೆಯಲ್ಲಿ ಗೊಂದಲ ;ಕೆಪಿಸಿಸಿ ಮುಖಂಡರಿಗೆ ದೂರು
ಮಂಗಳೂರು,ಜ.27:ಮಂಗಳೂರು ದಕ್ಷಿಣ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಲ್ಲಿ ಗೊಂದಲ ಸೃಷ್ಟಿಯಾಗಿದೆ.ಪ್ರಸಕ್ತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹುದ್ದೆಯಲ್ಲಿ ಒಬ್ಬರು ಕಾರ್ಯನಿರ್ವಹಿಸುತ್ತಿರುವಾಗ(ನಾಗೇಂದ್ರ ಕುಮಾರ್) ಅವರ ಗಮನಕ್ಕೆ ತಾರದೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಗಮನಕ್ಕೂ ಮಾಹಿತಿ ನೀಡದೆ ಹೊಸದಾಗಿ ಬಾಲಕೃಷ್ಣ ಶೆಟ್ಟಿ ಎಂಬವರನ್ನು ಅಧ್ಯಕ್ಷರನ್ನು ನೇಮಕ ಮಾಡಿರುವುದಾಗಿ ಮಾಧ್ಯಮ ಗಳಿಗೆ ಪ್ರಕಟಣೆ ನೀಡಿರುವುದು ಸರಿಯಲ್ಲ ಇದರಿಂದ ನನಗೆ ಅನ್ಯಾಯವಾಗಿದೆ.ಈ ಬಗ್ಗೆ ಕೆಪಿಸಿಸಿ ವರಿಷ್ಠರಿಗೆ ದೂರು ನೀಡುವುದಾಗಿ ಹಾಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ನಾಗೇಂದ್ರ ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಮ್ಮ ಅಳನ್ನು ತೋಡಿ ಕೊಂಡ ರು. ಸುದ್ದಿ ಗೋಷ್ಠಿಯಲ್ಲಿ ಬ್ಲಾಕ್ ಪದಾಧಿಕಾರಿಗಳಾದ ಶಫಿ ಅಹಮ್ಮದ್ ಬೋಳಾರ, ಅಬೂಬಕ್ಕರ್‌ಬಜಾಲ್, ಜನಾರ್ದನ ಸುವರ್ಣ, ಹರೀಶ್ ಕುಂದರ್,ವಾಲ್ಟರ್ ಲೊಬೊ, ಜಾನ್ ಸುರೇಶ್, ಇಮ್ತಿಯಾಝ್, ಶಶಿಧರ ಶೆಟ್ಟಿ,ಹೇಮಂತ ಗರೋಡಿ, ಹರಿಶ್ ಕುಂಬ್ಳೆ ಮೊದಲಾದವರು ಉಪಸ್ಥಿತರಿದ್ದರು.