×
Ad

ಬುಲೆಟ್ ನಲ್ಲಿ ಮದುವೆ ಮನೆಗೆ ಬಂದ ದಬಂಗ್ ವಧು !

Update: 2016-01-27 20:01 IST

ಮದುವೆ ಚಪ್ಪರಕ್ಕೆ ವಧು ನಾಚಿಕೊಂಡು ತನ್ನ ತಾಯಿ, ಅಕ್ಕ -ತಂಗಿಯರು, ಸ್ನೇಹಿತರೊಂದಿಗೆ ನಿಧಾನವಾಗಿ ನಡೆದುಕೊಂಡು ಬರುವುದು ಸರ್ವೇ ಸಾಮಾನ್ಯ. ಆದರೆ ಅಹ್ಮದಾಬಾದ್ ನ ಆಯಿಶಾ ಉಪಾಧ್ಯಾಯ್ ವ್ಯಾಸ್ ( ಅವರ ಫೇಸ್ ಬುಕ್ ಹೆಸರು "ರೈಡರ್ನಿ !) ಗೆ ಮಾತ್ರ ಹೀಗೆ ಬರುವುದು ಬೇಡವಾಗಿತ್ತು. ಹಾಗಾಗಿ ಆಕೆ ಬೇರೊಂದು ರೀತಿಯಲ್ಲಿ ಬಂದರು. ಅದು ಹೇಗೆ ಗೊತ್ತೇ ? ಅವರು ತನ್ನ ರಾಯಲ್ ಎನ್ಫೀಲ್ಡ್ ಬುಲೆಟ್ 350 ಯನ್ನು ಚಲಾಯಿಸಿಕೊಂಡು ತಮ್ಮ ಮದುವೆ ಮನೆಗೆ ಬಂದರು. ವಧುವಿನ ಉಡುಪು , ಶೃಂಗಾರಗಳ ಜೊತೆ ಬುಲೆಟ್ ಗೆ ಹೊಂದುವಂತೆ ಆಕರ್ಷಕ ದಬಂಗ್ ಶೈಲಿಯ ಕಪ್ಪು ಕನ್ನಡಕ ಇಟ್ಟುಕೊಂಡು ಗತ್ತಿನಿಂದ ಬಂದು ಇಳಿದರು ಈ ವಧು. ಈಕೆ ವೃತ್ತಿಯಿಂದ  ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್. 

ತನ್ನ 13 ನೆ ವಯಸ್ಸಿನಲ್ಲೇ ಬೈಕ್ ಬಿಡಲು ಪ್ರಾರಂಭಿಸಿದ ಈಕೆಗೆ ಈ ಬೈಕನ್ನು ರಾಕಿ ಹಬ್ಬದಂದು ಈಕೆಯ ಅಣ್ಣ ಉಡುಗೊರೆ ನೀಡಿದ್ದು. ಮದುವೆಗೆ ಏನಾದರೂ ವಿಶೇಷ ಮಾಡಬೇಕೆಂದು ಯೋಚಿಸಿದಾಗ ಈ ಬುಲೆಟ್ ಎಂಟ್ರಿಯ  ಐಡಿಯ ವನ್ನು ಆಯಿಶಾಳೆ ಕೊಟ್ಟಿದ್ದಾಳೆ. ಕೂಡಲೇ ಆಕೆಯ ತಂದೆ ಹಾಗು ಕುಟುಂಬದ ಎಲ್ಲರೂ ಒಪ್ಪಿದ್ದಾರೆ. 

ವಿಶೇಷವೇನೆಂದರೆ ಈಕೆಯ ವರ , ಕೆನಡಾದಲ್ಲಿ ಉದ್ಯೋಗಿಯಾಗಿರುವ ಲೌಕಿಕ್ ವ್ಯಾಸ್ ಈಕೆಯ ಹಿಂದೆ ಕುಳಿತು ಬೈಕ್ ನಲ್ಲಿ ಹೋಗಬೇಕು. ಯಾಕೆಂದರೆ ಅವರಿಗೆ ಬೈಕ್ ಬಿಡಲು ಬರುವುದಿಲ್ಲ !

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News