×
Ad

ಕಾಸರಗೋಡು : ಕೇರಳದಲ್ಲಿ ಮದ್ಯ ನಿಷೇಧ ಅಲ್ಲ, ಮದ್ಯ ವ್ಯರ್ಜನ ಅಗತ್ಯ -ಕಾನಂ ರಾಜೇಂದ್ರನ್

Update: 2016-01-27 20:29 IST

ಕಾಸರಗೋಡು : ಕೇರಳದಲ್ಲಿ  ಮದ್ಯ ನಿಷೇಧ  ಅಲ್ಲ,   ಮದ್ಯ ವ್ಯರ್ಜನ  ಅಗತ್ಯ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ  ರಾಜೇಂದ್ರನ್ ಹೇಳಿದರು.
ಅವರು ಬುಧವಾರ  ಕಾಸರಗೋಡು ಪ್ರೆಸ್ ಕ್ಲಬ್ ನಲ್ಲಿ  ಮುಖಾಮುಖಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು,
ಕೇರಳದಲ್ಲಿ ಮದ್ಯ ನಿಷೇಧ ಹಾಗೂ ಬಾರ್ ಗಳು ಮುಚ್ಚಿದ ಪರಿಣಾಮ ಮದ್ಯ ಬಳಕೆ ಕಡಿಮೆಯಾಗಿಲ್ಲ. ದಾಖಲೆ ಪ್ರಮಾಣದ  ಮದ್ಯ  ಬಳಕೆಯಾಗುತ್ತಿರುವುದು ಅಂಕಿ ಅಂಶಗಳು ತಿಳಿಸುತ್ತಿದೆ.  ಬಾರ್ ಗಳು ಮುಚ್ಚಿರುವುದರಿಂದ  ಕುಡುಕರ ಸಂಖ್ಯೆ ಕಡಿಮೆಯಾಗಿಲ್ಲ . ಬಿಯರ್ , ವೈನ್  ಮಾರಾಟ  ದಾಖಲೆ ಹಂತಕ್ಕೆ  ತಲುಪಿದೆ ಎಂದು ಅಭಿಪ್ರಾಯಪಟ್ಟರು.
ಕೇರಳದಲ್ಲಿ ಸಂಪೂರ್ಣ ಮದ್ಯ ನಿಷೇಧದ  ಬಗ್ಗೆ  ಹೇಳಿಕೆ ನೀಡುತ್ತಿರುವ ಕೆ ಪಿ ಸಿ ಸಿ ಅಧ್ಯಕ್ಷ ವಿ. ಎಂ ಸುಧೀರನ್ ನೆರೆಯ ಕರ್ನಾಟಕ ರಾಜ್ಯದ ಬಗ್ಗೆ ಗಮನ ಹರಿಸಲಿ. ತನ್ನದೇ ಪಕ್ಷದ  ಆಡಳಿತ ಇರುವ   ಕರ್ನಾಟಕದಲ್ಲಿ  ೧೫೦೦ ಹೊಸ  ಬಾರ್ ಗಳಿಗೆ ಅನುಮತಿ ನೀಡಿದೆ. ಆದರೆ ಇಲ್ಲಿ ಕಾಂಗ್ರೆಸ್ ಪಕ್ಷ  ಮದ್ಯ ನಿಷೇಧದ ಬಗ್ಗೆ ನಾಟಕವಾಡುತ್ತಿದೆ ಎಂದು ಹೇಳಿದರು.
ಎಡರಂಗ ಅಧಿಕಾರಕ್ಕೆ ಬಂದಲ್ಲಿ  ಮದ್ಯ ನೀತಿಯಲ್ಲಿ ಬದಲಾವಣೆ ತರಲಾಗುವುದು. ಐಕ್ಯ ರಂಗ ಸರಕಾರ ಹಗರಣಗಳಿಂದ ಕೂಡಿದೆ. ಮುಖ್ಯಮಂತ್ರಿ ಉಮ್ಮನ್ ಚಾಂಡಿ ನೇತ್ರತ್ವದ ಸರಕಾರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಹೇಳಿದರು.
ಶಾಸಕ ಇ . ಚಂದ್ರಶೇಖರನ್ , ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ಪಲ್ಲಿಕಾಪಿಲ್  ಮೊದಲಾದವರು ಉಪಸ್ಥಿತರಿದ್ದರು
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News