ಅಮೆರಿಕನ್ ಪ್ರಶಸ್ತಿಗಾಗಿ ಎರಡು ನಿಷೇಧಿತ ಚಿತ್ರಗಳಿಗೆ ರಸೂಲ್ ಪೂಕುಟ್ಟಿ ನಾಮಕರಣ

Update: 2016-01-27 15:19 GMT

ಮುಂಬೈ,ಜ.27: ಮೋಷನ್ ಪಿಕ್ಚರ್ ಸೌಂಡ್ ಎಡಿಟರ್ಸ್(ಎಂಪಿಎಸ್‌ಇ)ನ 63ನೇ ವಾರ್ಷಿಕ ಗೋಲ್ಡನ್ ರೀಲ್ ಪ್ರಶಸ್ತಿಗಳಿಗಾಗಿ ’ಅನ್‌ಫ್ರೀಡಂ’ ಮತ್ತು ‘ಇಂಡಿಯಾಸ್ ಡಾಟರ್’ಚಿತ್ರಗಳಿಗಾಗಿ ಆಸ್ಕರ್ ಪ್ರಶಸ್ತಿ ಪುರಸ್ಕೃತ ಸೌಂಡ್ ಇಂಜಿನಿಯರ್ ರೆಸೂಲ್ ಪೂಕುಟ್ಟಿ ಅವರು ಎರಡು ನಾಮಕರಣಗಳಿಗೆ ಭಾಜನರಾಗಿದ್ದಾರೆ. ಇವೆರಡೂ ಚಿತ್ರಗಳ ಪ್ರದರ್ಶನವನ್ನು ಭಾರತದಲ್ಲಿ ನಿಷೇಧಿಸಲಾಗಿದೆ.


ತನ್ನ ಸಂತಸವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪೂಕುಟ್ಟಿ, ಎಂಪಿಎಸ್‌ಇನಲ್ಲಿ ಎರಡು ನಾಮಕರಣಗಳು ಅಪರೂಪದ ವಿದ್ಯಮಾನವಾಗಿದೆ ಎಂದಿದ್ದಾರೆ. ಅವರು ತನ್ನ ನಾಮಕರಣಗಳನ್ನು ಡಿ.16ರ ದಿಲ್ಲಿ ಸಾಮೂಹಿಕ ಅತ್ಯಾಚಾರದ ಬಲಿಪಶುವಿಗೆ ಸಮರ್ಪಿಸಿದ್ದಾರೆ.


ಫ್ಲೋರಿಡಾದ ನಿರ್ದೇಶಕ ರಾಜ್ ಅಮಿತ ಕುಮಾರ್ ಅವರ ಚೊಚ್ಚಲ ಚಿತ್ರ ‘ಅನ್‌ಫ್ರೀಡಂ’ನಲ್ಲಿ ಆದಿಲ್ ಹುಸೇನ್ ಮತ್ತು ವಿಕ್ಟರ್ ಬ್ಯಾನರ್ಜಿಯವರು ಪ್ರಮುಖ ಪಾತ್ರಗಳಲ್ಲಿದ್ದು,ಮಹಿಳಾ ಸಲಿಂಗ ಕಾಮಿಗಳ ಪ್ರೇಮಕಥೆಯನ್ನು ನಿರೂಪಿಸಿದೆ.


ಲೆಸ್ಲಿ ಉಡ್ವಿನ್‌ರ ವಿವಾದಾತ್ಮಕ ಬಿಬಿಸಿ ಸಾಕ್ಷಚಿತ್ರ ‘ಇಂಡಿಯಾಸ್ ಡಾಟರ್’ ನಿರ್ಭಯಾ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ನಾಲ್ವರ ಪೈಕಿ ಓರ್ವನ ಸಂದರ್ಶನವನ್ನೊಳಗೊಂಡಿದೆ.


ಪ್ರಶಸ್ತಿ ಪ್ರದಾನ ಸಮಾರಂಭವು ಫೆ.27ರಂದು ಲಾಸ್ ಏಂಜೆಲ್ಸ್‌ನ ವೆಸ್ಟಿನ್ ಹೋಟೆಲ್‌ನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News