ಕರಾವಳಿ ಉತ್ಸವಕ್ಕೆ ಸಚಿವ ರಮಾನಾಥ ರೈ ಭೇಟಿ
Update: 2016-01-27 21:44 IST
ಮಂಗಳೂರು , ಜ. 27: ಕರಾವಳಿ ಉತ್ಸವ ಮೈದಾನದಲ್ಲಿ ಜನವರಿ 23ರಿಂದ ಆರಂಭಗೊಂಡು ಮಾರ್ಚ್ 7ರವರೆಗೆ ನಡೆಯುವ ದ.ಕ. ಜಿಲ್ಲಾ ಕರಾವಳಿ ಉತ್ಸವಕ್ಕೆ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ರೋಯಲ್ ಕಾರ್ನಿವಲ್ ಎಕ್ಸಿಬ್ಯೂಟ್‌ನ ಮುಷ್ತಾಕ್ ಖತೀಬ್ ಹಾಗೂ ಮುಹಮ್ಮದ್ ಹಫೀಝ್, ನಿಸರ್ಗ ಪಬ್ಲಿಸಿಟಿಯ ಮಂಜುನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಚಂದ್ರಹಾಸ ರೈ, ಶ್ರೀಧರ ಹೊಳ್ಳ ಉಪಸ್ಥಿತರಿದ್ದರು.
ಸಚಿವರು ಕರಾವಳಿ ಉತ್ಸವದ ವಿವಿಧ ಮಳಿಗೆಗಳಿಗೆ ಭೇಟಿ ನೀಡಿದರು. ಅತೀ ಕಡಿಮೆ ಅವಧಿಯಲ್ಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ ಮುಷ್ತಾಕ್ ಖತೀಬ್ ಹಾಗೂ ಮುಹಮ್ಮದ್ ಹಫೀಝ್ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.