ಪೇಜಾವರ ಪರ್ಯಾಯದ ಜ್ಞಾನಯಜ್ಞ ಮಾಲಿಕೆ ಉದ್ಘಾಟನೆ

Update: 2016-01-27 16:39 GMT

ಉಡುಪಿ, ಜ.27: ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ನಡೆಯುವ ನಿರಂತರ ಜ್ಞಾನಯಜ್ಞ ಕಾರ್ಯಕ್ರಮದ ಪ್ರವಚನ ಮಾಲಿಕೆಯನ್ನು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಇಂದು ಸಂಜೆ ರಾಜಾಂಗಣದಲ್ಲಿ ಉದ್ಘಾಟಿಸಿದರು. ಉಡುಪಿ, ಜ.27: ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ನಡೆಯುವ ನಿರಂತರ ಜ್ಞಾನಯಜ್ಞ ಕಾರ್ಯಕ್ರಮದ ಪ್ರವಚನ ಮಾಲಿಕೆಯನ್ನು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಇಂದು ಸಂಜೆ ರಾಜಾಂಗಣದಲ್ಲಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅನುಗ್ರಹ ಸಂದೇರ್ಶ ನೀಡಿದ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು ಮಾತನಾಡಿ, ಪೇಜಾವರರ ಪಂಚಮ ಪರ್ಯಾಯ ಪಂಚೋತ್ಸವಗಳ ಸಂಗಮವಾಗಿದೆ. ಪೇಜಾವರ ಶ್ರೀಗಳು ಸ್ವಯಂ ಬಹುಮುಖಿ ಸಾಧಕರು. ವಿಶೇಷ ಪ್ರವಚನ ಪಟುಗಳು. ಈಗಾಗಲೇ ಸಂಪನ್ನಗೊಂಡ ಶ್ರೀಗಳ ಪರ್ಯಾಯೋತ್ಸವದಲ್ಲಿ ನೇತ್ರೋತ್ಸವ, ಜಿಹ್ವೋತ್ಸವವೇ ಮೊದಲಾದ ವೈಭವ ವನ್ನು ಕಂಡಿದ್ದೇವೆ. ಕೃಷ್ಣನನ್ನು ಕೇಂದ್ರವಾಗಿಟ್ಟುಕೊಂಡು ಭಕ್ತರ ಪಂಚೇಂದ್ರಿಯ ಗಳಿಗೂ ಇಲ್ಲಿ ಉತ್ಸವ ನಡೆಯಲಿದೆ ಎಂದರು.

  
ಪೇಜಾವರ ಮಠದ ಕಿರಿಯ ಶ್ರೀಪಾದರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಬನ್ನಂಜೆ ಶ್ರೀಶನೀಶ್ವರ ದೇವಸ್ಥಾನದ ಶ್ರೀರಾಘವೇಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.  ಪೇಜಾವರ ಮಠದ ಕಿರಿಯ ಶ್ರೀಪಾದರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಬನ್ನಂಜೆ ಶ್ರೀಶನೀಶ್ವರ ದೇವಸ್ಥಾನದ ಶ್ರೀರಾಘವೇಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಮಠದ ದಿವಾನರಾದ ರಘುರಾಮಾಚಾರ್ಯರು ಸ್ವಾಗತಿಸಿದರು. ಗೋಪಾಲಾಚಾರ್ಯರು ಕಾರ್ಯಕ್ರಮ ನಿರ್ವಹಿಸಿದರು.ಮೊದಲ ಪ್ರವಚನ ಮಾಲಿಕೆಯಲ್ಲಿ ಬೆಂಗಳೂರಿನ ವಿದ್ವಾನ್ ತಿರುಮಲೆ ಕುಲಕರ್ಣಿ ಅವರು ವಿಶೇಷ ಉಪನ್ಯಾಸ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News