ಜ.30 ರಂದು ಉಡುಪಿಯಲ್ಲಿ ಯತಿ ಸಂಗಮ

Update: 2016-01-27 16:45 GMT

ಉಡುಪಿ, ಜ.27: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರಚಾರಿ ತ್ರಿಕಪಂಚಮಪರ್ಯಾಯೋತ್ಸವದಲ್ಲಿ ಜ.30 ರಂದು ಸಂಜೆ 5:00 ಗಂಟೆಗೆ ಕರಾವಳಿ ಜಿಲ್ಲೆಗಳ ಅನೇಕ ಮಠಾಧೀಶರು, ಸ್ವಾಮೀಜಿಗಳು ಶ್ರೀಗಳ ಅಪೇಕ್ಷೆಯಂತೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿರುವರು.
ಬಾಳ್ಕುದ್ರುಶ್ರೀನೃಸಿಂಹಾಶ್ರಮ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ,ಕಟಪಾಡಿ ಆನೆಗೊಂದಿ ಶ್ರೀಕಾಳ ಹಸ್ತೇಂದ್ರ ಸರಸ್ವತೀ ಸ್ವಾಮೀಜಿ, ಗುರುಪುರ ವಜ್ರದೇಹಿ ಶ್ರೀರಾಜ ಶೇಖರಾನಂದ ಸ್ವಾಮೀಜಿ, ಮೂಡಬಿದ್ರೆ ಜೈನ  ಮಠದ ಶ್ರೀಚಾರು ಕೀರ್ತಿಭಟ್ಟಾರಕ ಸ್ವಾಮೀಜಿ, ಕಾರ್ಕಳ ಜೈನ ಮಠದ ಶ್ರೀಲಲಿತ ಕೀರ್ತಿಭಟ್ಟಾರಕ ಸ್ವಾಮೀಜಿ, ಕೊಲ್ಯ ಶ್ರೀರಮಾನಂದ ಸ್ವಾಮೀಜಿ, ಮಾಣಿಲ ಶ್ರೀಮೋಹನದಾಸ ಸ್ವಾಮೀಜಿ, ಹೊಸ್ಮಾರು ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ, ಕರಿಂಜ ಶ್ರೀಮುಕ್ತಾನಂದ ಸರಸ್ವತೀ ಸ್ವಾಮೀಜಿ, ಬಾರಕೂರಿನ ಶ್ರೀ ವಿಶ್ವಭಾರತಿ ಸಂತೋಷ್‌ಗುರೂಜಿ ಇವರುಗಳನ್ನು ಅಂದು ಉಪಸ್ಥಿತರಿರುವರು.
 ಇವರನ್ನು ಶನಿವಾರ ಸಂಜೆ 5:00 ಕ್ಕೆ ಸಂಸ್ಕೃತ ಕಾಲೇಜಿನಿಂದ ಮಠದ ಬಿರುದಾವಳಿ, ಚೆಂಡೆ, ವಾದ್ಯಘೋಷ, ಭಜನೆ ಸಹಿತ ಮೆರವಣಿಗೆಯಲ್ಲಿ ಮಠಕ್ಕೆ ಕರೆತರಲಾಗುವುದು. ರಾಜಾಂಗಣದಲ್ಲಿ ಎಲ್ಲಾ ಸ್ವಾಮೀಜಿಗಳಿಗೆ ಗೌರವಾರ್ಪಣೆ ನಡೆಯಲಿದೆ. ಅನಂತರದಯತಿಗಳುಧರ್ಮಸಂದೇಶನೀಡುವರು.
ಪರ್ಯಾಯ ಶ್ರೀ ವಿಶ್ವೇಶತೀರ್ಥರು ಅಧ್ಯಕ್ಷತೆ ವಹಿಸಲಿದ್ದು ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥರು ಉಪಸ್ಥಿತರಿರುವರು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News