×
Ad

ವಿಟ್ಲ: ಮೌಲಿದ್‌ ಮಜ್ಲಿಸ್‌ ಮತ್ತು ಮತ ಪ್ರವಚನ ಕಾರ್ಯಕ್ರಮ

Update: 2016-01-27 22:23 IST

ವಿಟ್ಲ: ಬೋಳಂತೂರು ಎನ್‌ಸಿ ರೋಡ್‌ನ ತಾಜುಲ್‌ ಉಲಮಾ ಮೆಮೋರಿಯಲ್‌ ಸುನ್ನೀ ಸೆಂಟರ್‌ ಇದರ ವತಿಯಿಂದ ತಾಜುಲ್‌ ಉಲಮಾ, ಕಣ್ಣಿಯತ್‌ ಉಸ್ತಾದ್, ಸಂಶುಲ್‌ ಉಲಮಾ, ನೂರುಲ್‌ ಉಲಮಾ ಹಾಗೂ ಸುರಿಬೈಲ್‌ ಉಸ್ತಾದ್‌ರವರ ಅನುಸ್ಮರಣೆ, ಮೌಲಿದ್‌ ಮಜ್ಲಿಸ್‌ ಮತ್ತು ಮತ ಪ್ರವಚನ ಕಾರ್ಯಕ್ರಮವು ಜ 27 ರಂದು ಮಧ್ಯಾಹ್ನ ಎನ್.ಸಿ.ರೋಡ್‌ನ ಪೊಸೋಟ್‌ ತಂಙಳ್‌ ವೇದಿಕೆಯಲ್ಲಿ ನಡೆಯಲಿದೆ.

     ಸಯ್ಯಿದ್ ಮುಹ್ಸಿನ್ ಅಲವಿ ತಂಙಳ್ ಕಲ್ಲೇರಿ, ಶೈಖುನಾ ಮಂಚಿ ಉಸ್ತಾದ್, ಸಿ.ಎಚ್. ಮುಹಮ್ಮದ್ ಅಲಿ ಸಖಾಫಿ ಸುರಿಬೈಲು, ಶೈಖುನಾ ಪಿ.ಎ. ಉಸ್ತಾದ್ ಮೊದಲಾದವರು ಭಾಗವಹಿಸಲಿದ್ದು, ಶಾಕಿರ್ ಬಾಖವಿ ಮಂಬಾಡ್ ಮುಖ್ಯ ಭಾಷಣಗೈಯಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News