×
Ad

ಚುಟುಕು ಸುದ್ದಿಗಳು

Update: 2016-01-27 23:20 IST


ಮಂಬಾಡ್ ಸಖಾಫಿ ಮಂಗಳೂರಿಗೆ
ಮಂಗಳೂರು, ಜ.27: ಫೆಬ್ರವರಿ 12ರಿಂದ 14ರವರೆಗೆ ನಡೆಯಲಿರುವ ಜಾಮಿಅ ಸಅದಿಯ ಅರಬಿಯಾದ 46ನೆ ವಾರ್ಷಿಕ ಹಾಗೂ ಸನದುದಾನ ಮಹಾ ಸಮ್ಮೇಳನದ ಪ್ರಚಾರಾರ್ಥ ಫೆ.4ರಂದು ಪೂರ್ವಾಹ್ನ 10ಕ್ಕೆ ಮಂಗಳೂರು ಪುರಭವನದಲ್ಲಿ ನಡೆಯಲಿರುವ ಸಅದಿಯಾ ಪ್ರಚಾರ ಹಾಗೂ ಆದರ್ಶ ಸಂಗಮದಲ್ಲಿ ಅಬ್ದುಲ್ ವಹಾಬ್ ಸಖಾಫಿ ಮಂಬಾಡ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
  ಕರ್ನಾಟಕ ಸ್ವಾಗತ ಸಮಿತಿ ಚೇರ್‌ಮೆನ್ ಹಮೀದ್ ಹಾಜಿ ಕಂದಕ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಖಾಝಿ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಕಾರ್ಯಕ್ರಮ ಉದ್ಘಾಟಿಸುವರು ಎಂದು ಪ್ರಕಟನೆ ತಿಳಿಸಿದೆ.

ಫೆ.2: ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಜಾಥಾ
 ಕಾಸರಗೋಡು, ಜ.27: ಆಡಳಿತ ಭಾಷಾ ಮಸೂದೆ ರಾಜ್ಯದ ಭಾಷಾ ಅಲ್ಪಸಂಖ್ಯಾತರ ಸಂವಿಧಾನಬದ್ಧ ಮೂಲಭೂತ ಹಕ್ಕುಗಳು ಹಾಗೂ ಸವಲತ್ತುಗಳಿಗೆ ಮಾರಕವಾಗಿ ಪರಿಣಾಮ ಬೀರಲಿದ್ದು, ಈ ನಿಟ್ಟಿನಲ್ಲಿ ಕನ್ನಡ ಸಮುದಾಯಗಳ ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ನೇತೃತ್ವದಲ್ಲಿ ಭಾಷಾ ಅಲ್ಪಸಂಖ್ಯಾತ ಕನ್ನಡಿಗರು ಆಡಳಿತ ಭಾಷಾ ಮಸೂದೆಯ ವಿರುದ್ಧ ೆ.2ರಂದು ಜಿಲ್ಲಾಧಿಕಾರಿ ಕಚೇರಿಗೆ ಬೃಹತ್ ಮೆರವಣಿಗೆ ನಡೆಸಿ ಧರಣಿ ಹೂಡುವರು. ಬೆಳಗ್ಗೆ 9:30ಕ್ಕೆ ವಿದ್ಯಾನಗರ ಸರಕಾರಿ ಕಾಲೇಜು ಪರಿಸರದಿಂದ ಮೆರವಣಿಗೆ ಆರಂಭಗೊಂಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಯಲಿದೆಂದು ಪ್ರಕಟನೆ ತಿಳಿಸಿ

ಪೊಲೀಸ್ ಹುದ್ದೆಗೆ ನೇಮಕಾತಿ
ಮಂಗಳೂರು,ಜ.27:_ದ.ಕ.ಜಿಲ್ಲಾ ಪೊಲೀಸ್ ಘಟಕದಲ್ಲಿ ಖಾಲಿ ಇರುವ 162 ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ (ಪುರುಷ/ಮಹಿಳೆ) ಹಾಗೂ 24 ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಅಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಫೆ.5ರೊಳಗೆ ಅರ್ಜಿ ಸಲ್ಲಿಸಬೇಕು.
 ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ, ವಿದ್ಯಾರ್ಹತೆ, ವಯೋಮಿತಿ, ಸಹಿಷ್ಣುತೆ ಪರೀಕ್ಷೆ, ದೇಹದಾರ್ಢ್ಯತೆ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಹಾಗೂ ಖಾಲಿ ಹುದ್ದೆಗಳ ವರ್ಗೀಕರಣ ಮತ್ತು ಇತರ ಸಂಪೂರ್ಣ ಮಾಹಿತಿ ವಿವರಗಳನ್ನು ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್ ಡಿಡಿಡಿ..ಜಟ.ಜ್ಞಿನಿಂದ ಪಡೆಯಬಹುದು ಎಂದು ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರ ಪ್ರಕಟನೆ ತಿಳಿಸಿದೆ.

ಸೌದಿ ಅರೇಬಿಯಾ ‘ಅಸ್ಸುಫ್ಫ’ ತರಬೇತಿ ಆರಂಭ
ರಿಯಾದ್, ಜ.27: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್)ನ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಅಸ್ಸುಫ್ಫ’ ತರಬೇತಿ ಕಾರ್ಯಕ್ರಮವು ಸೌದಿ ಅರೇಬಿಯಾದ 35 ಕೇಂದ್ರಗಳಲ್ಲಿ ಏಕಕಾಲಕ್ಕೆ ಆರಂಭಗೊಂಡಿದೆ. ಇಸ್ಲಾಮಿನ ಆರಂಭದ ದಿನಗಳಲ್ಲಿ ಪ್ರವಾದಿ ಮುಹಮ್ಮದ್(ಸ)ರಿಂದ ಪವಿತ್ರ ಮಸೀದಿಯಲ್ಲಿ ಆರಂಭಗೊಂಡ ಈ ಶೈಕ್ಷಣಿಕ ಬೋಧನಾ ರೀತಿಯು ಇಸ್ಲಾಮಿನ ಗುರುಕುಲ ಪದ್ಧತಿ ಎನಿಸಿಕೊಂಡಿದೆ. ಜಿಸಿಸಿ ಸದಸ್ಯ ದೇಶಗಳಾದ ಯುಎಇ, ಕತರ್, ಬಹರೈನ್‌ಗಳಲ್ಲಿ ಈಗಾಗಲೇ ತರಗತಿಗಳಿಗೆ ಚಾಲನೆ ದೊರೆತಿದ್ದು, ಇದೀಗ ಸೌದಿ ಅರೇಬಿಯಾ ಕೂಡ ಆ ಸಾಲಿಗೆ ಸೇರ್ಪಡೆಗೊಂಡಿದೆ. ಮುಂದಿನ ದಿನಗಳಲ್ಲಿ ಕುವೈತ್, ಒಮನ್, ಮಲೇಶ್ಯಾ, ಲಂಡನ್‌ನಲ್ಲೂ ಬೋಧನಾ ತರಗತಿಗಳನ್ನು ಆರಂಭಿಸಲಾಗುವುದು.
  ಈ ಕುರಿತು ಕೆಸಿಎಫ್ ರಿಯಾದ್ ರೆನ್ ಅಧ್ಯಕ್ಷ ನಝೀರ್ ಕಾಶಿಪಟ್ಣ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಕೆಸಿಎಫ್ ಕೇಂದ್ರ ಕಚೇರಿಯಲ್ಲಿ ‘ಲೀಡರ್ಸ್ ಆ್ಯಂಡ್ ಟ್ಯೂಟರ್ಸ್ ಮೀಟ್’ ನಡೆಯಿತು. ಪ್ರಾಂತೀಯ ಸಮಿತಿ ಕೋಶಾಧಿಕಾರಿ ಹನೀಫ್ ಬೆಳ್ಳಾರೆ ಕಾರ್ಯಕ್ರಮ ಉದ್ಘಾಟಿಸಿದರು. ಕೆಸಿಎಫ್ ಅಂತಾರಾಷ್ಟ್ರೀಯ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ ಬಂಟ್ವಾಳ ವಿಷಯ ಮಂಡಿಸಿದರು.ರೆನಲ್ ಕಾರ್ಯದರ್ಶಿ ಫಾರೂಕ್ ಉಳ್ಳಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆಸಿಎಫ್ ಬತ್ತಾ ಸೆಕ್ಟರ್ ಕಾರ್ಯದರ್ಶಿ ಬಶೀರ್ ತಲಪಾಡಿ ಸ್ವಾಗತಿಸಿದರು. ಝೈನ್ ಸಖಾಫಿ ಭಟ್ಕಳ ವಂದಿಸಿದರು.

ಹೋರಾಟ ಮುಂದುವರಿಸುವೆ: ಮುಹಮ್ಮದಲಿ
ಪುತ್ತೂರು, ಜ.27: ತನ್ನದು ಭ್ರಷ್ಟಾಚಾರದ ವಿರುದ್ಧ ಹೋರಾಟವಾಗಿದ್ದು, ತಾನು ಮಹಿಳಾ ವಿರೋಧಿಯಲ್ಲ, ಮಹಿಳಾ ಅಧಿಕಾರಿಗಳು ತಪ್ಪುಮಾಡಿದರೆ ಪ್ರಶ್ನಿಸಬಾರದು ಎಂಬ ಕಾನೂನು ಇಲ್ಲ. ಅಧಿಕಾರಿಗಳು, ಸ್ವಪಕ್ಷೀಯ ನಾಯಕರೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾಗ ಹೋರಾಟ ನಡೆಸಿದ್ದೇನೆ. ಭ್ರಷ್ಟಾಚಾರದ ವಿರುದ್ಧ ಸಂವಿಧಾನಬದ್ಧ ಹೋರಾಟ ಇನ್ನೂ ಮುಂದುವರಿಸುತ್ತೇನೆ ಎಂದು ನಗರಸಭೆ ಸದಸ್ಯ ಎಚ್.ಮುಹಮ್ಮದಲಿ ತನ್ನ ವಿರುದ್ಧ ಕೇಳಿಬಂದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.ಒಂದು ತಿಂಗಳಲ್ಲಿ 300 ಜನನ-ಮರಣ ಪ್ರಮಾಣ ಪತ್ರದ ಅರ್ಜಿ ನಗರಸಭೆಗೆ ಬಂದಿತ್ತು. ಅದರಲ್ಲಿ 27 ಅರ್ಜಿಗೆ ವಿಶೇಷ ಆಸಕ್ತಿ ವಹಿಸಿ ಪೌರಾಯುಕ್ತೆ ತಿದ್ದುಪಡಿ ಮಾಡಿದ್ದರು. ಪೂರ್ಣ ಪ್ರಮಾಣದ ತಿದ್ದುಪಡಿ ಮಾಡುವುದು ಕಾನೂನು ಬಾಹಿರ. 27 ಅರ್ಜಿಗಳಿಗೆ ವಿಶೇಷ ಆಸಕ್ತಿ ಯಾಕೆ? ಉಳಿದ ಅರ್ಜಿಗಳಿಗೆ ಮಾನವೀಯತೆ ಯಾಕೆ ತೋರಿಸಿಲ್ಲ? ನಗರಸಭೆ ಮಹಿಳಾ ಆರೋಗ್ಯ ನಿರೀಕ್ಷಕಿಗೆ ರಜೆ ನೀಡಿಲ್ಲ, ಹೊರಗುತ್ತಿಗೆಯಲ್ಲಿ ದುಡಿಯುವ ಮಹಿಳಾ ಸಿಬ್ಬಂದಿಗೆ ಸಂಬಳ ನೀಡದೇ ಮನೆಗೆ ಕಳುಹಿಸಲಾದೆ. ಇದು ಮಹಿಳಾ ದೌರ್ಜನ್ಯವಲ್ಲವೇ ಎಂದು ಪ್ರಶ್ನಿಸಿದ ಅವರು, ತನ್ನ ವಿರುದ್ಧ ಮಾನಹಾನಿಕರ ಮಾತನಾಡಿದ ರೊಹರಾ ನಿಸಾರ್ ಮತ್ತು ಪದ್ಮಾಮಣಿ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ಅನ್ವರ್ ಖಾಸಿಮ್, ಮುಖೇಶ್ ಕೆಮ್ಮಿಂಜೆ, ಜಯಂತಿ ಬಲ್ನಾಡು, ಜೆಸಿಂತಾ ಮಸ್ಕರೇನಸ್, ಜಯಲಕ್ಷ್ಮೀ ಉಪಸ್ಥಿತರಿದ್ದರು.

ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕ್ಕೆ ದಸಂಸ ಆಗ್ರಹ
 ಉಡುಪಿ, ಜ.27: ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಆಗ್ರಹಿಸಿದ್ದಾರೆಪ್ರಕರಣದಲ್ಲಿ ಶಾಮೀಲಾಗಿರುವ ವಿವಿ ಕುಲಪತಿ, ಸಂಸದ ದತ್ತಾತ್ರೇಯ, ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ ಹಾಗೂ ಎಬಿವಿಪಿ ಸಂಘಟನೆ ಮೇಲೆ ಸೂಕ್ತ ಕ್ರಮ ಜರಗಿರುವಂತೆ ಒತ್ತಾಯಿಸಿದ್ದಾರೆ.

ಮೋಹಿತ್ ಸುವರ್ಣರಿಗೆ ಡಾಕ್ಟರೇಟ್
ಮಂಗಳೂರು, ಜ.27: ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಧ್ಯಾಪಕ ಮೋಹಿತ್ ಸುವರ್ಣ ಕುವೆಂಪು ವಿವಿ ಕುಲಪತಿ ಪ್ರೊ. ಜೋಗನ್ ಶಂಕರ್ ಮಾರ್ಗದರ್ಶನದಲ್ಲಿ ಮಂಡಿಸಿದ ‘ಸ್ಟಡಿ ಆಫ್ ಇಲೈಟ್ ಅಮಂಗ್ ಬಿಲ್ಲವಾಸ್ ಆಫ್ ದ.ಕ. ಡಿಸ್ಟ್ರಿಕ್’ ಎಂಬ ಪ್ರಬಂಧಕ್ಕೆ ಮಂಗಳೂರು ವಿವಿ ಡಾಕ್ಟರೇಟ್ ಪದವಿ ನೀಡಿದೆ.

ಎಸ್‌ಎಂಎ ಪದಾಧಿಕಾರಿಗಳ ಆಯ್ಕೆ
ಉಡುಪಿ, ಜ.27: ಸುನ್ನಿ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಉಡುಪಿ ರೇಂಜ್‌ನ ಮಹಾಸಭೆಯು ಎಸ್‌ಜಿಎಂ ಉಡುಪಿ ರೇಂಜ್ ಅಧ್ಯಕ್ಷ ಅಲ್ ಹಾಜ್ ಬಶೀರ್ ಮದನಿ ಕಟಪಾಡಿಯ ಅಧ್ಯಕ್ಷತೆಯಲ್ಲಿ ಉಡುಪಿ ಅಜ್ಜರಕಾಡು ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.ಸಭೆಯಲ್ಲಿ ಮುಫತ್ತಿಷ್ ಹಾಫಿಳ್ ಹನೀಫ್ ಮಿಸ್ಜಾಹಿ, ರೇಂಜ್ ಕಾರ್ಯದರ್ಶಿ ಅಲ್‌ಹಾಜ್ ಹನೀಫ್ ಮದನಿ, ಅಚ್ಚಡ ಹಕೀಂ ಸಖಾಫಿ, ಆತೂರು ಸಅದ್ ಮುಸ್ಲಿಯಾರ್ ಉಪಸ್ಥಿತರಿದ್ದರು.
 ನೂತನ ಅಧ್ಯಕ್ಷರಾಗಿ ಕೆ.ಪಿ. ಮೊಯ್ದಿನ್ ದೊಡ್ಡಣಗುಡ್ಡೆ, ಉಪಾಧ್ಯಕ್ಷರಾಗಿ ಆರಿಫ್ ಮಣಿಪಾಲ, ಖಾಸಿಮ್ ಬಾರ್ಕೂರು, ಉಸ್ಮಾನ್ ಮದನಿ ನೇಜಾರು, ಫೈಝಲ್ ಸಂತೋಷ ನಗರ, ಪ್ರಧಾನ ಕಾರ್ಯದರ್ಶಿಯಾಗಿ ಉಸ್ಮಾನ್ ಮಿಸ್ಬಾಹಿ ಹೂಡೆ, ಕಾರ್ಯದರ್ಶಿಗಳಾಗಿ ರಫೀಕ್ ಪುತ್ತಿಗೆ, ಹಬೀಬುಲ್ಲಾ ನೇಜಾರು, ಕೋಶಾಧಿಕಾರಿಯಾಗಿ ಉಮರಬ್ಬ ಪುತ್ತಿಗೆ ಹಾಗೂ ಮದ್ರಸಗಳ ಸದರ್ ಉಸ್ತಾದರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News