ಕಿಂಡಿ ಅಣೆಕಟ್ಟು ಉದ್ಘಾಟನೆ
Update: 2016-01-27 23:21 IST
ಮೂಡುಬಿದಿರೆ, ಜ.27: ಸಣ್ಣ ನೀರಾವರಿ ಇಲಾಖಾ ಯೋಜನೆಯಡಿ ಇರುವೈಲು ಗ್ರಾಮದ ದೊಡ್ಡಗುತ್ತು ಕಾಪಿಕಂಡದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಿಂಡಿ ಅಣೆಕಟ್ಟನ್ನು ಸಚಿವ ಕೆ.ಅಭಯಚಂದ್ರ ಜೈನ್ ಉದ್ಘಾಟಿಸಿದರು. ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭಾನಾಮ ನಿರ್ದೇಶಿತ ಸದಸ್ಯ ಇಕ್ಬಾಲ್ ಕರೀಂ, ಹೊಸಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಹಾಸ ಸನಿಲ್, ಇರುವೈಲ್ ಗ್ರಾಪಂ ಸದಸ್ಯ ಜಯರಾಮ್ ಪೂಜಾರಿ ಉಪಸ್ಥಿತರಿದ್ದರು.