ದ.ಕ.,ಉಡುಪಿ ಜಿಲ್ಲೆಗಳಲ್ಲಿ ಗಣರಾಜ್ಯೋತ್ಸವ
ಮಂಗಳೂರು/ಉಡುಪಿ, ಜ.27: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 67ನೆ ಗಣರಾಜ್ಯೊತ್ಸವವನ್ನು ವಿಜೃಂಭಣೆಯಿಂದ ಅಚರಿಸಲಾಯಿತು.
ಕಣ್ಣೂರು: ಇಲ್ಲಿನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಹಾಜಿ ಅಬ್ದುರ್ರಹ್ಮಾನ್ ಕೆ.ಬಿ. ಧ್ವಜಾರೋಹಣ ನೆರವೇರಿಸಿದರು. ಜೊತೆ ಕಾರ್ಯದರ್ಶಿ ಸಿತಾರ್ ಮಜೀದ್ ಹಾಜಿ, ಮುಖ್ಯ ಶಿಕ್ಷಕ ಎಂಎಸ್‌ಎಂ ಅಬ್ದುರ್ರಹೀಂ, ಸಹಾಯಕಿ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ, ಶಿಕ್ಷಕಿ ಸುಕೇತಾ, ದೈಹಿಕ ಶಿಕ್ಷಕ ಇಮ್ತಿಯಾಝ್ ಉಪಸ್ಥಿತರಿದ್ದರು.
ಉಳ್ಳಾಲ ಕೋಟೆಪುರ: ಇಲ್ಲಿನ ಅನುದಾನಿತ ಟಿಪ್ಪುಸುಲ್ತಾನ್ ಶಿಕ್ಷಣ ಸಂಸ್ಥೆಯಲ್ಲಿ ಸಂಚಾಲಕ ಹಾಜಿ ಎ.ಕೆ. ಮೊಹಿಯ್ಯುದ್ದೀನ್ ಧ್ವಜಾರೋಹಣಗೈದರು.ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಹಾಜಿ ಯು.ಕೆ ಅಬ್ಬಾಸ್, ಅಹ್ಮದ್ ಅಬ್ಬಾಸ್, ಟಿಪ್ಪುಸುಲ್ತಾನ್ ಶಿಕ್ಷಣ ಸಂಸ್ಥೆಯ ಮುಖ್ಯಶಿಕ್ಷಕ ಎಂ.ಎಚ್. ಮಲಾರ್, ಪ್ರೌಢ ಶಾಲಾ ವಿಭಾಗದ ಪ್ರಭಾರ ಮುಖ್ಯ ಶಿಕ್ಷಕಿ ಗೀತಾ.ಡಿ., ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಎಲ್.ಸಿ ಡಿಸೋಜ, ಚಿತ್ರಕಲಾ ಶಿಕ್ಷಕ ಬಿ.ಎಂ ರಫೀಕ್ ತುಂಬೆ, ಉಪಸ್ಥಿತರಿದ್ದರು.
ಉಳ್ಳಾಲ ಮೇಲಂಗಡಿ :ಇಲ್ಲಿನ ಸರಕಾರಿ ಉರ್ದು ಪ್ರೌಢಶಾಲೆಯಲ್ಲಿ ಶಾಲಾ ಸಂಚಾಲಕ ಅನ್ವರ್ ಹುಸೈನ್ ಧ್ವಜಾರೋಹಣಗೈದರು. ಶಾಲಾ ಸಮಿತಿ ಅಧ್ಯಕ್ಷ ಅಬ್ಬಾಸ್ ಎಚ್.ಎಸ್. ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಧ್ವಜಸ್ತಂಭವನ್ನು ಈ ಸಂದರ್ಭ ಉದ್ಘಾಟಿಸಿದರು. ಮುಹಮ್ಮದ್ ಬಾವ ತ್ವಾಹ, ಯು.ಕೆ. ಮುಸ್ತಫಾ ಎವರೆಸ್ಟ್, ಉಳ್ಳಾಲ ನಗರಸಭಾ ಸದಸ್ಯರಾದ ಮುಸ್ತಫಾ ಅಬ್ದುಲ್ಲಾ , ಪೊಡಿಮೋನು ಇಸ್ಮಾಯೀಲ್, ಯು.ಕೆ. ಇಲಿಯಾಸ್, ನಝೀರ್ ಬಾರ್ಲಿ, ಯು.ಕೆ. ಅಬ್ದುಲ್ಲಾ, ಶಾಲಾ ಶಿಕ್ಷಕಿ ಮೇವಿಷ್ ಆಶಾಲತಾ ಕಾರಟ್, ಸುಷ್ಮಾ ಕಿಣಿ, ಕವಿತಾ ಕೆ., ಶಾಹಿನಾ ಬಾನು, ಸಹಾಯಕ ಶಶಿಕುಮಾರ್, ಎಸ್‌ಡಿಎಂಸಿ ಸದಸ್ಯ ಖಾಲಿದ್ ಅಬ್ಬಾಸ್, ಅಬ್ದುಲ್ ರಹ್ಮಾನ್, ಅಹ್ಮದ್ ಬಾವಾ ಕೊಟ್ಟಾರ, ಯು.ಬಿ. ಅಯ್ಯೂಬ್ ಉಪಸ್ಥಿತರಿದ್ದರು. ಮೂಡುಬಿದಿರೆ: ಇಲ್ಲಿನ ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಆಶ್ರಿತ ಸಂಸ್ಥೆಗಳಿಂದ ಬೆಟ್ಕೇರಿ ಮೈದಾನದಲ್ಲಿ ಸಂಘದ ಕಾರ್ಯದರ್ಶಿ ಅಭಿಜಿತ್ ಎಂ. ಧ್ವಜಾರೋಹಣಗೈದರು. ಶ್ರೀ ಧವಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ರವೀಶ್ ಕುಮಾರ್, ಜೈನ ಪ.ಪೂ. ಕಾಲೇಜಿನ ಪ್ರಾಂಶುಪಾಲ ಮಧುಕರ ಸಾಲಿನ್ಸ್, ಜೈನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮೋಹನರಾಜ್ ಚೌಟ, ಡಿ.ಜೆ.ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಶಶಿಕಾಂತ್ ವೈ. ಜೈನ್, ಆಂಗ್ಲ ಮಾಧ್ಯಮ ಶಾಲೆಯ ಡಾ.ಗುರು ಬಾಗೇವಾಡಿ ಮತ್ತಿತರರು ಭಾಗವಹಿಸಿದ್ದರು. ಪಡುಬಿದ್ರೆ: ಇಲ್ಲಿನ ಇನ್ನಾ ಸರಕಾರಿ ಉರ್ದು ಕಿರಿಯ ಪ್ರಾರ್ಥಮಿಕ ಶಾಲೆ, ಶಂಸುಲ್ ಉಲಮಾ ಪೂರ್ವ ಪ್ರಾರ್ಥಮಿಕ ಶಾಲೆ, ಎಸ್ಕೆಎಸ್ಸೆಸ್ಸೆಫ್‌ನ ಸಂಯುಕ್ತ ಆಶ್ರಯದಲ್ಲಿ ಇನ್ನಾ ಜುಮಾ ಮಸೀದಿ ವಠಾರದಲ್ಲಿ ಆಚರಿಸಲಾಯಿತು. ಮಸೀದಿಯ ಅಧ್ಯಕ್ಷ ಹಾಗೂ ಶಂಸುಲ್ ಉಲಮಾ ಅಕಾಡಮಿಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಮೊಯ್ದಿನಬ್ಬ ಧ್ವಜಾರೋಹಣಗೈದರು. ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಮುಹಮ್ಮದ್ ರಫೀಕ್ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಉರ್ದು ಶಾಲೆಯ ಶಿಕ್ಷಕ ಹಾರಿಸ್ ಹುದವಿ, ಇರ್ಷಾದ್ ಹುದವಿ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಇಬ್ರಾಹೀಂ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸೆಲಿನಾ ಸ್ವಾಗತಿಸಿ, ವಂದಿಸಿದರು.
ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಕಾಲೇಜಿನ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಸತೀಶ್ ಅಂಸಾಡಿ ಧ್ವಜಾರೋಹಣಗೈದರು. ಈ ಸಂದರ್ಭ ಕಾಲೇಜಿನ ಎಲ್ಲಾ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು. ಉಡುಪಿ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧ್ಯಕ್ಷ ಅನ್ವರ್ ಅಲಿ ಕಾಪು ಅಧ್ಯಕ್ಷತೆಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಅಝೀಝ್ ಉದ್ಯಾವರ, ಕೋಶಾಧಿಕಾರಿ ರಿಯಾಝ್ ಅಹ್ಮದ್ ಕುಕ್ಕಿಕಟ್ಟೆ ಕೆಮ್ಮಣ್ಣು ಗ್ರಾಪಂ ಸದಸ್ಯ ಮುಹಮ್ಮದ್ ಇದ್ರೀಸ್ ಉಪಸ್ಥಿತರಿದ್ದರು
ಉಡುಪಿ: ಇಲ್ಲಿನ ಒಳಕಾಡು ಸರಕಾರಿ ಪ್ರೌಢ ಶಾಲೆಯಲ್ಲಿ ನಗರಸಭೆ ಸದಸ್ಯ ಗೀತಾ ರವಿ ಶೇಟ್ ಧ್ವಜಾರೋಹಣಗೈದರು. ವಿದ್ಯಾರ್ಥಿ ನಚಿಕೇತ ಪ್ರಜಾಪ್ರಭುತ್ವದ ಮಹತ್ವದ ಕುರಿತು ಮಾತನಾಡಿದರು. ಈ ಸಂದರ್ಭ ಎಸ್‌ಡಿಎಂಸಿ ಅಧ್ಯಕ್ಷ ನಾಗಭೂಷಣ ಶೇಟ್, ಸದಸ್ಯರಾದ ರವಿರಾಜ್ ನಾಯಕ್, ಉಮೇಶ್ ನಾಯಕ್, ಮಾಧವ ಆಚಾರ್ಯ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ನಿರ್ಮಲಾ ಬಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಕುಸುಮಾ ಉಪಸ್ಥಿತರಿದ್ದರು.
ಉಡುಪಿ: ಬೈಲೂರಿನ ವಾಸುದೇವ ಕೃಪಾ ಆಂಗ್ಲಮಾಧ್ಯಮ ಶಾಲೆಯಲ್ಲಿ ಮಾಜಿ ಯೋಧ ಜಗ್ನನಾಥ ಬಂಗೇರ ಧ್ವಜಾರೋಹಣಗೈದರು. ಶಾಲಾ ಸಂಚಾಲಕ ಕೆ. ಅಣ್ಣಪ್ಪಶೆಣೈ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಕ ಕಿಶೋರ್‌ರಾಜ್, ಶಾಲಾ ಸಮನ್ವಯಾಧಿಕಾರಿ ಯು.ಕಲ್ಯಾಣಿ ಪೈ, ಮುಖ್ಯ ಶಿಕ್ಷಕಿ ಅಮಿತಾಂಜಲಿ ಕೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಪ್ರಿಯಾ ಎ ನಾಯಕ್, ಶಾಲಾ ನಾಯಕ ಸನತ್ ಉಪಸ್ಥಿತರಿದ್ದರು. ಸಿಂಡ್ ಬ್ಯಾಂಕ್-ಮಣಿಪಾಲ: ರಾಷ್ಟ್ರೀಕೃತ ಸಿಂಡಿಕೇಟ್ ಬ್ಯಾಂಕ್‌ನ ಮಣಿಪಾಲದ ಪ್ರಧಾನ ಕಛೇರಿಯಲ್ಲಿ ಹಿರಿಯ ಜನರಲ್ ಮ್ಯಾನೇಜರ್ ಕೆ.ಟಿ.ರೈ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಬೆಳ್ಮಣ್: ಇಲ್ಲಿನ ಸಂತ ಜೋಸೆಫ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸಂಚಾಲಕ ವಂ. ಲಾರೆನ್ಸ್ ಬಿ. ಡಿಸೋಜ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಸಹಾಯಕ ಧರ್ಮಗುರು ವಂ. ಜೆ.ಬಿ.ಮೊರಾಸ್, ಕಾನ್ವೆಂಟ್‌ನ ಮುಖ್ಯಸ್ಥೆ ಸಿಸ್ಟರ್ ಉಷಾಸ್ಟೆಲ್ಲಾ, ಹಿರಿಯ ಪ್ರಾ.ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಲೂಸಿ ಪಿರೇರಾ, ಪ್ರೌಢಶಾಲಾ ಪ್ರಭಾರ ಮುಖ್ಯಶಿಕ್ಷಕಿ ಅನಿತಾ ಕಮಲಿನಿ ಉಪಸ್ಥಿತರಿದ್ದರು.
ಸುಳ್ಯ: ಇಲ್ಲಿನ ತೆಕ್ಕಿಲ್ ಹಿರಿಯ ಪ್ರಾ.ಶಾಲೆ ಹಾಗೂ ಗೂನಡ್ಕದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಯು.ಕೆ.ತೀರ್ಥರಾಮ ಉಳುವಾರು ಧ್ವಜಾರೋಹಣಗೈದರು. ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷ ಟಿ.ಎಂ. ಶಹೀದ್ ಸಭಾಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮುಖ್ಯ ಶಿಕ್ಷಕ ದಾಮೋದರ ಮಾಸ್ಟರ್, ಮುಖ್ಯ ಶಿಕ್ಷಕಿ ಹರಿಣಾಕ್ಷಿ, ಶಿಕ್ಷಕಿ ವಾಣಿ, ಗ್ರಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಕುಂಞಿ ಕೊಯ್ನಾಡು, ರಾಮಕೃಷ್ಣ ಸಂಪಾಜೆ, ಕಿಶೋರ್ ಬಿ.ಎಸ್.ಕಲ್ಲುಗುಂಡಿ, ಕಾಂತಿ, ಗೋಪಾಲಕೃಷ್ಣ ಬಿಳಿಯಾರು, ಕಾರ್ಯದರ್ಶಿ ಅಶ್ರಫ್ ಗುಂಡಿ, ಸಹಶಿಕ್ಷಕಿ ದಿವ್ಯಾ, ಶಿಕ್ಷಕಿ ಸುಜಾತಾ ಮತ್ತು ಶಿಕ್ಷಕಿ ರೇಖಾ ಉಪಸ್ಥಿತರಿದ್ದರು. ಬೆಳ್ತಂಗಡಿ: ಧರ್ಮಸ್ಥಳ ಶಾಂತಿವನದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಕೂಡಲ ಸಂಗಮದ ಮಹಾಜಗದ್ಗುರು ಡಾ. ಮಾತೆ ಮಾಹಾದೇವಿ, ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಡಿತ್ತಾಯ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಪ್ರಾಚಾರ್ಯ ಡಾ. ಪ್ರಶಾಂತ್ ಶೆಟ್ಟಿ, ಡಾ. ಮೇಘಾ ಮೂರ್ತಿ ಉಪಸ್ಥಿತರಿದ್ದರು.
ಫರಂಗಿಪೇಟೆ: ಗಣರಾಜ್ಯೋತ್ಸವದ ಅಂಗವಾಗಿ ಪಿಎಫ್‌ಐ ಬಂಟ್ವಾಳ ವಲಯದ ವತಿಯಿಂದ ಗೂಡಿನ ಬಳಿ ಸಮುದಾಯ ಭವನದಲ್ಲಿ ಮಾಹಿತಿ ಹಕ್ಕು ಹಾಗೂ ಕಾನೂನು ಮಾಹಿತಿ ಶಿಬಿರ ಹಮ್ಮಿಕೊಳ್ಳಲಾಯಿತು. ನ್ಯಾಯವಾದಿ ಅಶ್ರಫ್ ಅಗ್ನಾಡಿ ಕಾನೂನಿನ ಬಗ್ಗೆ, ಸೈಫುದ್ದೀನ್ ಮಾಹಿತಿ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಪಿಎಫ್‌ಐ ತಾಲೂಕು ಜೊತೆ ಕಾರ್ಯದರ್ಶಿ ಇಜಾಝ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಇಸಾಕ್ ಶಾಂತಿ ಅಂಗಡಿ ಉಪಸ್ಥಿತರಿದ್ದರು. ಶಬೀರ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು.
ಸುಳ್ಯ: ಸುಳ್ಯದ ಮಾಜಿ ಸೈನಿಕರ ಸಂಘ ಹಾಗೂ ಲಯನೆಸ್ ಕ್ಲಬ್‌ಗಳ ಸಹಯೋಗದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಹಸಿವು ನಿವಾರಿಸುವಿಕೆ ಸಪ್ತಾಹ ಕಾರ್ಯಕ್ರಮ ಸುಳ್ಯದ ಲಯನ್ಸ್ ಕ್ಲಬ್ ವತಿಯಿಂದ ನಡೆಯಿತು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ, ಲಯನ್ಸ್ ಕ್ಲಬ್ ಅಧ್ಯಕ್ಷ ಜಯರಾಮ ದೇರಪ್ಪಜ್ಜನಮನೆ, ಲಯನ್ಸ್ ವಲಯ ಅಧ್ಯಕ್ಷ ಜಾಕೆ ಮಾಧವ ಗೌಡ ವೈದ್ಯಾಧಿಕಾರಿ ಡಾ.ಕರುಣಾಕರ, ಲಯನ್ಸ್ ಕಾರ್ಯದರ್ಶಿ ಎಂ.ಎಸ್.ಪ್ರಸಾದ್, ಸುಲೈಮಾನ್, ಪಿ.ಎಂ.ರಂಗನಾಥ್, ನಳಿನ್‌ಕುಮಾರ್ ಕೋಡ್ತುಗುಳಿ, ಕರುಂಬಯ್ಯ, ಶಶಿಧರ ಪಡ್ಪು, ಲಯನೆಸ್ ಕ್ಲಬ್ ಅಧ್ಯಕ್ಷೆ ಪುಷ್ಪಾವಿಶ್ವನಾಥ್, ಕಾರ್ಯದರ್ಶಿ ಬಿ.ಜಿ.ರಾಧಾಮಣಿ, ನೇತ್ರಾವತಿ ಪಡ್ಡಂಬೈಲು ಉಪಸ್ಥಿತರಿದ್ದರು.