ಪಾವೂರು: ಸ್ಕೌಟ್-ಗೈಡ್ಸ್, ಕಬ್ ಬುಲ್ ಬುಲ್ ಉತ್ಸವ
Update: 2016-01-27 23:38 IST
ಕೊಣಾಜೆ, ಜ.27: ಪಾವೂರು ಸರಕಾರಿ ಪ್ರೌಢಶಾಲೆಯಲ್ಲಿ ಸ್ಥಳೀಯ ಸಂಸ್ಥೆಯವತಿಯಿಂದ ಸ್ಕೌಟ್-ಗೈಡ್ಸ್, ಕಬ್ ಬುಲ್ ಬುಲ್ ಉತ್ಸವವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುಹಮ್ಮದ್ ಮೋನು ಉದ್ಘಾಟಿಸಿದರು. ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಂ.ಜಿ.ಕಜೆ ಅಧ್ಯಕ್ಷತೆ ವಹಿಸಿದ್ದರು. ಜನಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಶಂಕರಾನಂದ ಎನ್.ಇನವಳ್ಳಿ, ಉಪಾಧ್ಯಕ್ಷ ಅಹ್ಮದ್ ಅಬ್ಬಾಸ್, ಕೋಶಾಧಿಕಾರಿ ಜಗದೀಶ್ ಶೆಟ್ಟಿ, ನಿರ್ದೇಶಕಿ ಚಂದ್ರಕಲಾ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಾ.ಪ್ರಶಾಂತ್ ಕೆ.ಎಸ್, ಶಿಕ್ಷಕ ಕರುಣಾ, ಪಾವೂರು ಗ್ರಾಪಂ ಉಪಾಧ್ಯಕ್ಷೆ ಲೀಲಾವತಿ, ಸದಸ್ಯ ಐ.ಬಿ.ಸಾದಿಕ್, ಕಬ್ ಬುಲ್ ಬುಲ್ ನಾಯಕ ಪುಷ್ಪರಾಜ್ ಕೊಣಾಜೆ ಉಪಸ್ಥಿತರಿದ್ದರು.
ಮಜೀದ್ ಮಾಸ್ಟರ್ ಮಲಾರ್ ಸ್ವಾಗತಿಸಿದರು. ಸ್ಕೌಟ್-ಗೈಡ್ಸ್ ನಾಯಕ ನೆಲ್ಸನ್ ಕಾರ್ಯಕ್ರಮ ಮುನ್ನೋಟ ಓದಿದರು. ಸ್ಕೌಟ್ ಮಾಸ್ಟರ್ ಪ್ರತೀಪ್ ವಂದಿಸಿದರು. ಗೀತಾ ಜುಡಿತ್ ಸಲ್ದಾನ ಕಾರ್ಯಕ್ರಮ ನಿರೂಪಿಸಿದರು.