ಕೊಣಾಜೆ : ಟ್ಯಾಲೆಂಟ್ ಹಂಟ್’ ಸ್ಪರ್ಧೆಯಲ್ಲಿ ರೋಶನ್ ಶರೀಫ್ ದ್ವಿತೀಯ
Update: 2016-01-28 21:30 IST
ಕೊಣಾಜೆ: ಮಂಗಳೂರಿನ ಟ್ಯಾಲೆಂಟ್ ರಿಸರ್ಚ್ ಫೌಂಡೇಷನ್ ವತಿಯಿಂದ ಇತ್ತೀಚೆಗೆ ಮಂಗಳೂರಿನ ಟೌನ್ ಹಾಲ್‌ನಲ್ಲಿ ದಶಮಾನೋತ್ಸವ ಪ್ರಯುಕ್ತ 1 ರಿಂದ 10ನೇ ತರಗತಿ ಒಳಗಿನ ಮಕ್ಕಳಿಗೆ ನಡೆದ ’ಟ್ಯಾಲೆಂಟ್ ಹಂಟ್ ಸ್ಟೇಜ್ ಶೋ’ ಜೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ಕಲಾ ಸೃಷ್ಟಿ ತಂಡದ ಕಿರಿಯ ಸದಸ್ಯ, ಅಂಬಿಕಾ ಬಾಲ ವಿದ್ಯಾಲಯದ 1ನೇ ತರಗತಿಯ ಪುಟಾಣಿ ರೋಶನ್ ದ್ವಿತೀಯ ಬಹುಮಾನ ಪಡೆದಿರುತ್ತಾರೆ. ಇವರನ್ನು ಭಾರತದ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ,ವಿಕೆಟ್ ಕೀಪರ್ ಸೈಯದ್ ಮುಜ್ತಾಬ ಹುಸೇನ್ ಕಿರ್ಮಾನಿ ಇವರು ಬಹುಮಾನ ನೀಡಿ ಗೌರವಿಸಿದರು.