×
Ad

ಕಾಸರಗೋಡು : ಸೋಲಾರ್ ಹಗರಣ ಪ್ರಕರಣ - ಡಿ ವೈ ಎಫ್ ಐ ಮಂಜೇಶ್ವರ ನೇತ್ರತ್ವದಲ್ಲಿ ಪ್ರತಿಭಟನೆ

Update: 2016-01-28 21:50 IST

ಕಾಸರಗೋಡು :  ಸೋಲಾರ್ ಹಗರಣಕ್ಕೆ ಸಂಬಂಧಪಟ್ಟಂತೆ  ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು ವಿದ್ಯುತ್ ಸಚಿವ ಆರ್ಯಾಡನ್ ಮುಹಮ್ಮದ್  ರಾಜೀನಾಮೆ ನೀಡುವಂತೆ ಒತ್ತಾಯಿಸಿ  ಡಿ ವೈ ಎಫ್ ಐ ಮಂಜೇಶ್ವರ  ಬ್ಲಾಕ್ ಸಮಿತಿ  ನೇತ್ರತ್ವದಲ್ಲಿ ಹೊಸಂಗಡಿಯಲ್ಲಿ ಗುರುವಾರ  ಪ್ರತಿಭಟನಾ ಧರಣಿ  ನಡೆಯಿತು.

ಧರಣಿಯನ್ನು ಸಿಪಿಐ ಎಂ  ಜಿಲ್ಲಾ ಸಮಿತಿ  ಸದಸ್ಯ  ಕೆ. ಆರ್ ಜಯಾನಂದ ಉದ್ಘಾಟಿಸಿದರು.

ಪ್ರಶಾಂತ್  ಕನಿಲ ಅಧ್ಯಕ್ಷತೆ ವಹಿಸಿದ್ದರು. ಸಿದ್ದಿಕ್ ಪಾವೂರು , ಅಶ್ರಫ್ ಗುಡ್ಡೆಕೇರಿ, ನಿತಿನ್ ಕನಿಲ , ಸತ್ತಾರ್ ಬಳ್ಳೂರು,  ಇಬ್ರಾಹಿಂ ರಾಮತ್ತಮಜಲ್ , ಸಿದ್ದಿಕ್ ಚೆರುಗೋಳಿ  ನೇತ್ರತ್ವ ನೀಡಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News