×
Ad

ಅಲೋಶಿಯಸ್ ಕಾಲೇಜ್‌ನಲ್ಲಿ ಭ್ರಷ್ಟಾಚಾರ ವಿರೋಧಿ ಕಾರ್ಯಾಗಾರ

Update: 2016-01-28 23:13 IST


ಮಂಗಳೂರು, ಜ.28: ನಗರದ ಸಂತ ಅಲೋಶಿಯಸ್ ಕಾಲೇಜ್‌ನ ರಾಜಕೀಯ ಶಾಸ್ತ್ರ ವಿಭಾಗವು ಭ್ರಷ್ಟಾಚಾರ ವಿರೋಧಿ ಕಾರ್ಯಾಗಾರವನ್ನು ಇತ್ತೀಚೆಗೆ ಹಮ್ಮಿಕೊಂಡಿತ್ತು.
 ಮುಖ್ಯ ಅತಿಥಿ ಭಾಷಣ ಮಾಡಿದ ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್, ಭ್ರಷ್ಟಾಚಾರ ಭಾರತದಲ್ಲಿ ಸಾಮಾನ್ಯ ಎಂಬಂತಾಗಿದೆ. ಆದರೆ ಯುವಜನತೆಯು ವ್ಯವಸ್ಥೆಯನ್ನು ಪ್ರಶ್ನಿಸತೊಡಗಿದರೆ ಭ್ರಷ್ಟಾಚಾರ ನಿರ್ಮೂಲನೆ ಕಷ್ಟ ಸಾಧ್ಯವೇನಲ್ಲ ಎಂದು ಅಭಿಪ್ರಾಯಪಟ್ಟರು.
ಇಸಿಎಚ್‌ಎಸ್ ಅಧಿಕಾರಿ ಲೆ.ಕ. ಜಾನ್ ನೋಯಲ್ ಸೆರಾವೊ, ಆರೋಗ್ಯ ಮತ್ತು ಅಭಿವೃದ್ಧಿ ಕೇಂದ್ರದ ಸಿಇಒ ಎಡ್ಮಂಡ್ ಫೆರ್ನಾಂಡಿಸ್ ಮಾತನಾಡಿದರು.
 ಈ ಸಂದರ್ಭ ಡಾ. ಸುರೇಶ್ ಪೂಜಾರಿ, ಡಾ. ಆಲ್ವಿನ್ ಡೇಸಾ, ಜೆನಿಸ್ ಗೋವಿಸ್, ಡಾ. ರೋಸ್‌ವೀರಾ ಡಿಸೋಜ, ರೆ.ಫಾ. ಫ್ರಾನ್ಸಿಸ್ ಅಲ್ಮೇಡಾ, ಡಾ. ವೆರೋನಿಕಾ ಜುಡಿತ್ ಕಾರ್ಲೊ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News