×
Ad

ಮೊಂಟೆಪದವು: ಅನುಸ್ಮರಣೆ

Update: 2016-01-28 23:20 IST


ಉಳ್ಳಾಲ, ಜ.28: ಎಸ್‌ವೈಎಸ್ ಮತ್ತು ಎಸ್ಸೆಸ್ಸೆಫ್ ಮೊಂಟೆಪದವು ಇದರ ಜಂಟಿ ಆಶ್ರಯದಲ್ಲಿ  ‘ಜೀಲಾನಿ ಮತ್ತು ತಾಜುಲ್ ಉಲಮಾ’ ಅನುಸ್ಮರಣೆ ಕಾರ್ಯಕ್ರಮ ಮೊಂಟೆಪದವಿನಲ್ಲಿ ಇತ್ತೀಚೆಗೆ ನಡೆಯಿತು. ಸೈಯದ್ ಶಿಹಾಬುದ್ದೀನ್ ಅಲ್ ಮಶ್‌ಹೂರ್ ತಂಙಳ್ ತಲಕ್ಕಿ ದುಆ ಆಶೀರ್ವಚನ ನೀಡಿದರು. ಎಸ್‌ವೈಎಸ್ ಮಂಜನಾಡಿ ಸೆಂಟರ್‌ನ ಗೌರವಾಧ್ಯಕ್ಷ ಅಬ್ದುಲ್ ಕರೀಂ ಫೈಝಿ ಅಧ್ಯಕ್ಷತೆ ವಹಿಸಿದ್ದರು. ಮರಿಕ್ಕಳ ಜುಮಾ ಮಸೀದಿಯ ಖತೀಬ್ ಅಬ್ಬಾಸ್ ಸಖಾಫಿ ಮಡಿಕೇರಿ ಕಾರ್ಯಕ್ರಮ ಉದ್ಘಾಟಿಸಿದರು. ಮೋಂಟುಗೋಳಿ ಜುಮಾ ಮಸೀದಿ ಖತೀಬ್ ಅಬ್ದುಲ್ ಹಮೀದ್ ಸಖಾಫಿ, ರಫೀಕ್ ಸಅದಿ ದೇಲಂಪಾಡಿ, ಹಯಾತ್ ನಗರ ಜುಮಾ ಮಸೀದಿ ಖತೀಬ್ ಅಬೂಬಕರ್ ಸಅದಿ, ಮೊಂಟೆಪದವು ಜುಮಾ ಮಸೀದಿ ಖತೀಬ್ ಇಲ್ಯಾಸ್ ಅಂಜದಿ, ಮೊಂಟೆಪದವು ಜುಮಾ ಮಸೀದಿ ಅಧ್ಯಕ್ಷ ಜಿ.ಎಂ. ಹಸನ್‌ಕುಂಞಿ ಹಾಜಿ, ಕಾರ್ಯದರ್ಶಿ ಅಬ್ದುಲ್ ಖಾದರ್, ಎಸ್ಸೆಸ್ಸೆಫ್ ಉಳ್ಳಾಲ ಡಿವಿಜನ್ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್, ಪಿ.ಎಚ್. ಅಬ್ದುಲ್ಲ ಹಾಜಿ, ಎಸ್‌ವೈಎಸ್ ಮೊಂಟೆಪದವು ಶಾಖೆಯ ಅಧ್ಯಕ್ಷ ಸುಲೈಮಾನ್ ಹಾಜಿ, ಮರಿಕ್ಕಳ ಎಸ್‌ವೈಎಸ್ ಅಧ್ಯಕ್ಷ ಅಲಿಕುಂಞಿ, ಎಸ್ಸೆಸ್ಸೆಫ್ ಮೊಂಟೆಪದವು ಶಾಖೆಯ ಅಧ್ಯಕ್ಷ ಮೊಹಿದ್ದಿನ್ ಕುಂಞಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News