×
Ad

ಪತಂಜಲಿ ಫುಡ್ ಪಾರ್ಕ್‌ನಲ್ಲಿ ಪ್ರತಿಭಟನೆ: 25ಕ್ಕೂ ಹೆಚ್ಚು ಮಂದಿಗೆ ಗಾಯ

Update: 2016-01-28 23:36 IST

ಹರಿದ್ವಾರ, ಜ.28: ಕರ್ತವ್ಯದಲ್ಲಿದ್ದ ನೌಕರನೊಬ್ಬನ ಸಾವಿಗೆ ಸಂಬಂಧಿಸಿ ಪತಂಜಲಿ ಫುಡ್‌ಪಾರ್ಕ್‌ನ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಗುಂಪೊಂದನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಹಾಗೂ ಗಾಳಿಯಲ್ಲಿ ಗುಂಡು ಹಾರಾಟ ನಡೆಸಿದಾಗ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಹರಿದ್ವಾರದಿಂದ 19 ಕಿ.ಮೀ. ದೂರದ ಪದಾರ್ಥ ಪ್ರದೇಶದಲ್ಲಿ ಈ ಘಟನೆ ನಡೆದಿವೆ. ಪತಂಜಲಿ ಫುಡ್ ಪಾರ್ಕ್‌ನ ಘಟಕವೊಂದರಲ್ಲಿ ಕೆಲಸ ಮಾಡುತ್ತಿರುವಾಗಲೇ ಅಸು ನೀಗಿದ ನೌಕರನ ಕುಟುಂಬಕ್ಕೆ ಸಂಸ್ಥೆಯು ಯಾವುದೇ ಪರಿಹಾರ ಘೋಷಿಸಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಎಂಟು ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಅವರ ವಿಚಾರಣೆ ನಡೆಯುತ್ತಿದೆಯೆಂದು ಗ್ರಾಮಾಂತರ ಎಸ್ಪಿ ಪ್ರಮೇಂದ್ರ ದೋಭಲ್ ತಿಳಿಸಿದ್ದಾರೆ.
ಉದ್ರಿಕ್ತ ಗ್ರಾಮಸ್ಥರು ಪೊಲೀಸರತ್ತ ಕಲ್ಲುಗಳನ್ನೆಸೆದು ಕೆಲವರನ್ನು ಗಾಯಗೊಳಿಸಿದರು. ಅದರಿಂದಾಗಿ ಅವರನ್ನು ಚದುರಿಸಲು ಲಾಠಿಚಾರ್ಜ್ ಮಾಡಬೇಕಾಯಿತೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News