×
Ad

ಲಕ್ಷ್ಮೀ ಪ್ರಸಾದ್ ಆಚಾರ್‌ಗೆ ರಾಷ್ಟ್ರಪತಿ ಪುರಸ್ಕಾರ

Update: 2016-01-28 23:48 IST

ಪುತ್ತೂರು, ಜ.28: ಕೇಂದ್ರ ಸರಕಾರದ ‘ಬಾಲಶ್ರೀ’ ಪ್ರಶಸ್ತಿಗೆ ಪುತ್ತೂರು ವಿವೇಕಾನಂದ ಕಾಲೇಜ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿ ಲಕ್ಷ್ಮೀಪ್ರಸಾದ್ ಆಚಾರ್ಯ ಆಯ್ಕೆಯಾಗಿದ್ದು, ಫೆ.3ರಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯವರು ಪ್ರಶಸ್ತಿ ಪುರಸ್ಕಾರ ಮಾಡಲಿದ್ದಾರೆ.

ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಷ್ಟ್ರೀಯ ಬಾಲಭವನ ಸೊಸೈಟಿ ಹೊಸದಿಲ್ಲಿ ಜಂಟಿಯಾಗಿ ನಡೆಸಿದ ರಾಜ್ಯ, ಅಂತಾರಾಜ್ಯ ಹಾಗೂ ರಾಷ್ಟ್ರ ಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಲಕ್ಷ್ಮೀ ಪ್ರಸಾದ್ ಆಚಾರ್ ಅವರ ಸಾಧನೆ ಯನ್ನು ಗುರುತಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News