ಚಿತ್ರದುರ್ಗ: ಅಪಘಾತದಲ್ಲಿ ಕಿನ್ನಿಮುಲ್ಕಿ ನಿವಾಸಿ ಮೃತ್ಯು
Update: 2016-01-28 23:52 IST
ಕುಂದಾಪುರ, ಜ.28: ಉಡುಪಿಯ ಯುನೈಟೆಡ್ ರೈಡರ್ಸ್‌ನ ಸ್ಥಾಪಕ, ಉಡುಪಿ ಕಿನ್ನಿಮುಲ್ಕಿಯ ನಿವಾಸಿ ಮುಹಮ್ಮದ್ ಸುಹೈಲ್ ಮುನೀರ್(40) ಜ.27ರಂದು ರಾತ್ರಿ ಚಿತ್ರದುರ್ಗದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ನಾಗ್ಪುರದಲ್ಲಿ ನಡೆದ ಬುಲೆಟ್ ಫೆಸ್ಟಿವಲ್ ರೈಡರ್ ಮೇನಿಯಾದಲ್ಲಿ ಪಾಲ್ಗೊಂಡು ಚಿತ್ರದುರ್ಗ ಮಾರ್ಗವಾಗಿ ಉಡುಪಿಗೆ ಬರುತ್ತಿದ್ದ ವೇಳೆ ಇವರ ಬುಲೆಟ್‌ಗೆ ಬಸ್ಸೊಂದು ಢಿಕ್ಕಿ ಹೊಡೆಯಿತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು.
ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಗುರುವಾರ ರಾತ್ರಿ ವೇಳೆ ಮೃತರ ಊರಾದ ಉಡುಪಿಗೆ ತರಲಾಯಿತು. ಮೃತರು ಬುಲೆಟ್ ತಂಡವನ್ನು ಕಟ್ಟಿಕೊಂಡು ಉತ್ತರ ಭಾರತ ಸೇರಿದಂತೆ ಹಲವು ಕಡೆ ಪ್ರವಾಸ ನಡೆಸಿದ್ದರು. ಗಲ್ಫ್ ದೇಶದಲ್ಲಿ ಉದ್ಯೋಗದಲ್ಲಿದ್ದ ಇವರು ಪ್ರಸ್ತುತ ಉಡುಪಿಯಲ್ಲಿ ಉದ್ಯಮ ನಡೆಸುತ್ತಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.