ಉಪ್ಪಳ : ಮತ್ತೆ ಗೂಂಡಾ ಆಕ್ರಮಣ : ಇಬ್ಬರಿಗೆ ಚೂರಿ ಇರಿತ ; ಒರ್ವನಿಗೆ ಗಂಭೀರ
Update: 2016-01-29 09:13 IST
ತಳಂಗರೆಯ ಆರಿಫ್ ಉಪ್ಪಳ ಪ್ರತಾಪ್ ನಗರದ ಅಬ್ದುಲ್ಲ ಇರಿತಕ್ಕೊಳಗಾದವರು
ಮಂಜೇಶ್ವರ : ಉಪ್ಪಳ ಪೇಟೆಯಲ್ಲಿ ಮತ್ತೆ ಗೂಂಡಾ ಆಕ್ರಮಣ ಉಂಟಾಗಿದ್ದು ಇಬ್ಬರನ್ನು ಗೂಂಡಾ ತಂಡವೊಂದು ತಲವಾರಿನಿಂದ ಇರಿದ ಘಟನೆ ಕಳೆದ ರಾತ್ರಿ ಸಂಭವಿಸಿದೆ.
ಇರಿತದಿಂದ ಗಾಯಗೊಂಡ ತಳಂಗರೆಯ ಆರಿಫ್ ಉಪ್ಪಳ ಪ್ರತಾಪ್ ನಗರದ ಅಬ್ದುಲ್ಲ ಎಂದು ಗುರುತಿಸಲಾಗಿದೆ. ಇವರಿಬ್ಬರನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ರಾತ್ರಿ 9 ಘಂಟೆ ಸುಮಾರಿಗೆ ಇವರಿಬ್ಬರು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಉಪ್ಪಳದ ರಮ್ಭಿಝ್ , ಫಾರೂಕ್ ಎಂಬಿಬ್ಬರ ನೇತೃತ್ವದಲ್ಲಿ ತಲುಪಿದ ತಂಡ ತಲವಾರಿನಿಂದ ಇರಿದಿದೆ.
ಹಳೆ ವೈಷಮ್ಯವೇ ಇರಿತಕ್ಕೆ ಕಾರಣವೆಂದು ತಿಳಿದುಬಂದಿದೆ. ಘಟನೆ ತಿಳಿದು ಕುಂಬಳೆ ಸಿ.ಐ ಸುರೇಶ್ ಬಾಬು , ಮಂಜೇಶ್ವರ ಠಾಣಾಧಿಖಾರಿ ಪ್ರಮೋದ್ ನೇತೃತ್ವದ ಪೋಲೀಸ್ ತಂಡ ಸ್ಥಳಕ್ಕಾಗಮಿಸಿದೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.