×
Ad

ಮಂಗಳೂರು: ಆ್ಯಬುಲೆನ್ಸ್ ಸಿಬ್ಬಂದಿ ಮುಷ್ಕರ ಕೈ ಬಿಡಲು ಸೂಚನೆ

Update: 2016-01-29 11:54 IST

ಮಂಗಳೂರು: ಆರೋಗ್ಯ ಕವಚ ಯೋಜನೆಯ (108) ಆ್ಯಬುಲೆನ್ಸ್ ಸಿಬ್ಬಂದಿ ಕೈ ಗೊಂಡಿರುವ ಮುಷ್ಕರ ತಕ್ಷಣ ಕೈ ಬಿಡಬೇಕು ಇಲ್ಲದಿದ್ದರೆ ರಾಜ್ಯ ಜನ ಸಾಮಾನ್ಯರಿಗೆ ತುರ್ತು ಆರೋಗ್ಯ ಸೇವೆ ನೀಡಲು ತೊಂದರೆ ಆಗುತ್ತದೆ ಈ ನಿಟ್ಟಿನಲ್ಲಿ ಯಸ್ಮ ಜಾರಿ ಮಾಡಲು ಸರಕಾರ ಚಿಂತನೆ ನಡೆಸುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. 

ಆರೋಗ್ಯ ಕವಚ ಸಿಬ್ಬಂದಿಗಳ ಸಮಸ್ಯೆಗಳಿಗೆ ಪರಿಹಾರ ಕೊಡಲು ಸರಕಾರ ಸೂಕ್ತ ಕ್ರಮ ಕೈಗೊಂಡಿದೆ ಎಂದು ಅವರು ಈ ಸಂದರ್ಭ ತಿಳಿಸಿದರು. 

ಆದರೂ ಕೆಲವು ಸಂಘಟನೆಗಳು ಸಿಬ್ಬಂದಿ ನಡುವೆ ಗೊಂದಲ ಸೃಷ್ಟಿಸಿರುವುದರಿಂದ ಅವರು ಮುಷ್ಕರದಲ್ಲಿ ತೊಡಗಿಕೊಂಡಿದ್ದಾರೆ. ಸರಕಾರ ಈ ಒತ್ತಡಕ್ಕೆ ಮಣಿಯುವುದಿಲ್ಲ. ಇದು ಇನ್ನೂ ಒಂದು ತಿಂಗಳು ಮುಂದುವರಿದರೆ ಸರಕಾರ ಪರಿಯಾಯ ಕ್ರಮ ತೊಗೆದುಕೊಳ್ಳಲಿದೆ ಎಂದು ಮಂಗಳೂರು ನಗರದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ  ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News