ಮಲೇರಿಯ ತಡೆಗಟ್ಟಲು ಕ್ರಮ: ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ
ಮಂಗಳೂರು ನಗರದಲ್ಲಿ ಮಲೇರಿಯ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಲೇರಿಯ ತಡೆಗಟ್ಟಲು ಮಂಗಳೂರು ಮಹಾನಗರಪಾಲಿಕೆಯ 60ವಾರ್ಡ್ ಗಳಲ್ಲಿ ತಂಡಗಳನ್ನು ರಚಿಸಿ ದಾಳಿ ನಡೆಸುವಂತೆ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಮ್ ಸೂಚಿಸಿದರು.
ಅವರು ದ.ಕ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಲೇರಿಯ ನಿಯಂತ್ರಣ ಸಭೆಯಲ್ಲಿ ಮಾತನಾಡಿದರು.
ನಗರದಲ್ಲಿ ಕಟ್ಟಡ ನಿರ್ಮಾಣ ಕಾಮಾಗಾರಿ ನಡೆಯುವಲ್ಲಿ ಮಲೇರಿಯ ತಡೆಗಟ್ಟುವ ನಿಟ್ಟಿನಲ್ಲಿ ನಿರ್ಲಕ್ಷ್ಯ. ವಹಿಸುತ್ತಿರುವುದರಿಂದ ಶೀಘ್ರ ದಾಳಿ ನಡೆಸಲು ಸೂಚಿಸಿದ್ದಾರೆ. ನಗರದಲ್ಲಿ ಶೇಕಡ 20ರಷ್ಟು ಮಲೇರಿಯ ಪ್ರಕರಣ ಹೆಚ್ಚಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಅಗತ್ಯ. ಈ ಬಗ್ಗೆ ಹದಿನೈದು ದಿನದಲ್ಲಿ ಮತ್ತೊಮ್ಮೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್,ದ.ಕ.ಜಿ.ಪಂ.ಸಿಇಓ ಪಿ.ಐ.ಶ್ರೀವಿದ್ಯಾ,, ಮನಪಾ ಉಪ ಆಯುಕ್ತ ಗೋಕುಲ್ ದಾಸ್ ನಾಯಕ್, ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಉಪಸ್ಥಿತರಿದ್ದರು.