ಭರತನಾಟ್ಯ ಪರೀಕ್ಷೆಯಲ್ಲಿ ಸ್ವಾತಿ ಭಟ್ ಪಿ. ಉತ್ತಮ ಶ್ರೇಣಿಯಲ್ಲಿ ತೇರ್ಗಡೆ
Update: 2016-01-29 15:22 IST
ಕೊಣಾಜೆ: ಕರ್ನಾಟಕ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಪರೀಕ್ಷೆಯಲ್ಲಿ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಸೈಗೋಳಿ ತಿರುಮಲೇಶ್ವರ ಭಟ್ ಮತ್ತು ಉಷಾ ದಂಪತಿಯ ಪುತ್ರಿ ಸ್ವಾತಿ ಭಟ್ ಪಿ. ಇವರು ಭರತನಾಟ್ಯ ಸೀನಿಯರ್ ವಿಭಾಗದಲ್ಲಿ 519 ಅಂಕ ಗಳಿಸಿ ಮಂಗಳೂರು ತಾಲೂಕಿನಲ್ಲೇ ಅಧಿಕ ಅಂಕಗಳಿಸುವುದರೊಂದಿಗೆ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಇವರು ನೃತ್ಯ ಸೌರಭ ನಾಟ್ಯಾಲಯದ ವಿಧ್ವಾನ್ ಪ್ರಮೋದ್ ಕುಮಾರ್ ಉಳ್ಳಾಲ್ ರವರಲ್ಲಿ ತರಬೇತಿ ಪಡೆದಿರುತ್ತಾರೆ.