×
Ad

ಫೆ.2 ರಿಂದ ಹಳೆಯಂಗಡಿ ಮುಹಿಯುದ್ದೀನ್ ಜುಮಾ ಮಸ್ಜಿದ್ ನಲ್ಲಿ ವಾರ್ಷಿಕೋತ್ಸವ

Update: 2016-01-29 15:38 IST

ಹಳೆಯಂಗಡಿ :  ಮುಹಿಯುದ್ದೀನ್ ಜುಮಾ ಮಸ್ಜಿದ್ ಲಿಯಾವುಲ್ ಇಸ್ಲಾಂ ದಫ್ ಕಮೀಟಿ ಬೊಳ್ಳೂರು ಹಳೆಯಂಗಡಿ ಇದರ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ 33ನೆ ವರ್ಷದ ರಿಫಾಯ್ಯಿ ದಫ್ ರಾತೀಬ್, ವಾರ್ಷಿಕೋತ್ಸವ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಬೊಳ್ಳೂರು ಜುಮಾ ಮಸೀದಿಯ ವಠಾರದಲ್ಲಿ ಫೆ.2 ರಿಂದ ಮೊದಲ್ಗೊಂಡು ಫೆ.6 ರಂದು ಸಮಾರೋಪಗೊಳ್ಳಲಿದೆ.


ಫೆ.2 ರಂದು ಬೊಳ್ಳೂರು ಜುಮಾ ಮಸೀದಿಯ ಖತೀಬ್ ಶೈಖುನಾ ಅಲ್ಹಾಜ್ ಮುಹಮ್ಮದ್ ಅಝ್ ಹರ್ ಫೈಝಿ ಉದ್ಘಾಟಿಸಲಿದ್ದಾರೆ. ಜಮಾತ್ ಅಧ್ಯಕ್ಷ ಹಾಜಿ ಬಿ.ಎಚ್. ಅಬ್ದುಲ್ ಖಾದರ್ ಎ.ಕೆ. ಜಿಲಾನಿ ಅಧ್ಯಕ್ಷತೆ ವಹಿಸಲಿದ್ದಾರೆ.


ಫೆ. 6 ರಂದು ನಡೆಯಲಿರುವ ಸಮಾರೋಪ ಸಮಾರಂಭವನ್ನು ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಟಿಸುವ ಕಾರ್ಯಕ್ರಮದಲ್ಲಿ ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರು ಕೇರಳ ಮುಖ್ಯ ಪ್ರಭಾಷಣಗೈಯಲಿದ್ದಾರೆ. ಅಲ್ಲದೆ, ಶೈಖುನಾ ಅಸ್ಸಯ್ಯದ್ ಹಮೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ದುವಾ ಆಶೀರ್ವಚನ ನಡೆಸಿ ಕೊಡಲಿದ್ದಾರೆ. ಅಲ್ಲದೆ ಹಲವು ಉಲಮಾಗಳು,  ಉಮರಾಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದಾರೆ ಎಂದು ಮುಹಿಯುದ್ದೀನ್ ಜುಮಾ ಮಸ್ಜಿದ್ ಲಿಯಾವುಲ್ ಇಸ್ಲಾಂ ದಫ್ ಕಮೀಟಿ ಬೊಳ್ಳೂರು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News