×
Ad

``ಶಿಡ್ಲಘಟ್ಟ ದಲ್ಲಿ "ಯೂನಿಟಿ ಸಿಲ್ ಸಿಲಾ ಫೌಂಡೇಶನ್" ವತಿಯಿಂದ ಗಣರಾಜ್ಯೂತ್ಸವ ದಿನದ ಸಂಭ್ರಮಾಚರಣೆ´´

Update: 2016-01-29 17:07 IST

ಶಿಡ್ಲಘಟ್ಟ 26 ಜನವರಿ 2016 ಮಂಗಳವಾರ :ಶಿಡ್ಲಘಟ್ಟ ನಗರದ ಅತೀ ಸಹಾಯಕರ ಮತ್ತು ಪ್ರಸಿದ್ದ ಜನಸೇವೆ ಸಂಸ್ಥೆಯಾದ ಯೂನಿಟಿ ಸಿಲ್ ಸಿಲಾ ಫೌಂಡೇಶನ್ ವತಿಯಿಂದ  ನಗರದ ಗಣ್ಯವ್ಯಕ್ತಿಗಳೊಂದಿಗೆ ಗಣರಾಜ್ಯೂತ್ಸವ ದಿನದ ಸಂಭ್ರಮಾಚರಣೆಯನ್ನು ಅತೀ ವಿಭಿನ್ನವಾಗಿ ಮತ್ತು ವಿಜೃಂಬಣೆಯಿಂದ ಮಾಡಿದರು,

ನಗರದ ಕೋಟೆ ವೃತ್ತದಲ್ಲಿ ಯೂನಿಟಿ ಸಿಲ್ ಸಿಲಾ ಸಂಸ್ಥೆಯಿಂದ ಸುಮಾರು 2000 ಕ್ಕು ಹೆಚ್ಚು ಶಾಲಾ ಮಕ್ಕಳಿಗೆ ಕುಡಿಯುವ ನೀರು ಮತ್ತು ಬಿಸ್ಕೆಟ್ ಪ್ಯಾಕೆಟ್ ನೀಡಿ ಸಾರ್ವಜನಿಕರಿಗೆ ಸಿಹಿ ತಿನ್ನಿಸಿ ಕೋಟೆ ವೃತದಲ್ಲಿದ್ದ ಧ್ವಜಸ್ತಂಬದಲ್ಲಿ ಧ್ವಜಾರೋಹಣ ಮಾಡಿ ಗಣರಾಜ್ಯೋತ್ಸವವನ್ನು ಸಂಭ್ರಮಿಸಿದರು,

ಶಿಡ್ಲಘಟ್ಟದಲ್ಲಿ ಸುಮಾರು ಎರಡು ವರ್ಷಗಳಿಂದ ಅನೇಕ ಜನಸೇವೆ ಕಾರ್ಯಗಳನ್ನು "ಯೂನಿಟಿ ಸಿಲ್ ಸಿಲಾ ಫೌಂಡೇಶನ್" ಸಂಸ್ಥೆಯಿಂದ ಮಾಡುತ್ತಿದ್ದು ತಾಲ್ಲೊಕಿನಲ್ಲಿ  ಚಿಕನ್ ಗುನಿಯಾ-ಡೆಂಗ್ಯೋ ಮುಂತಾದ ಜ್ವರಗಳಿಂದ ಬಡವರು ಮತ್ತು ಹೆರಿಗೆಯ ತುರ್ತು ಸಂಧರ್ಬಗಳಲ್ಲಿ ಗರ್ಭಿಣಿ ತಾಯಂದಿರು ರಕ್ತಕ್ಕಾಗಿ ಪರದಾಡುತ್ತಿದ್ದ ಹಿನ್ನಲೆಯಲ್ಲಿ ಯೊಜನೆಯನ್ನು ರೊಪಿಸಿ ಕಳೆದ 2015 ನೆ ಸಾಲಿನಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಜನ್ಮದಿನವಾದ ಈದ್ ಮಿಲಾದ್ ಹಬ್ಬದ ಅಂಗವಾಗಿ ಎರಡು ಬಾರಿ ಬೃಹತ್ ರಕ್ತದಾನ ಶಿಬಿರಗಳನ್ನು ಆಯೋಜಿಸಿ 717 ಯುನಿಟ್ ರಕ್ತವನ್ನು ಸಂಗ್ರಹಿಸುವುದರ ಮೂಲಕ ಶಿಡ್ಲಘಟ್ಟ ತಾಲ್ಲೂಕಿನಲ್ಲಿಯೇ ಇತಿಹಾಸ ನಿರ್ಮಿಸಿ ಜನರ ಪ್ರಾಣ ಉಳಿಸಲು ಮಾನವಿಯತೆ ಮೆರೆದ ಮೊದಲ ಸಂಸ್ಥೆಯಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಮತ್ತು ನಗರದಲ್ಲಿ ಈ ಯುವಕರು ಮಾನವಿಯತೆಗೆ ಭಾವೈಕ್ಯತೆಗೆ ಮಾರ್ಗದರ್ಶನವಾಗಿದ್ದಾರೆ ಎಂದು ನಿವೃತ ಪ್ರಾಂಶುಪಾಲರಾದ ಮುಹಮ್ಮದ್ ಖಾಸಿಂ ರವರು ತಿಳಿಸಿದರು,

ಯಾವುದೆ ಒಂದು ಒಳ್ಳೆಯ ಕಾರ್ಯವನ್ನು ಎಲ್ಲರು ತಮ್ಮ ಧರ್ಮ,ಜಾತಿ,ಕುಲ ಎಂಬ ಭೇದವನ್ನು ಬಿಟ್ಟು ಮನುಷ್ಯತ್ವಕ್ಕಾಗಿ ಸೇವೆ ಮಾಡಿದರೆ ಮಾತ್ರವೆ ನಾವು ಸಂವಿಧಾನದ ಪಾಲನೆ ಮಾಡಿ ಜನ್ಮಕೊಟ್ಟ ದೇಶಮಾತೆಗೆ ಖೃಣ ತೀರಿಸಿದಂತಾಗುವುದು ಒಳ್ಳೆಯ ಕಾರ್ಯಗಳನ್ನು ಒಗ್ಗಟ್ಟಾಗಿ ಮಾಡಿದರೆ ಮಾತ್ರ ಯಶಸ್ವಿಯಾಗುವುದೆಂಬ ಫಲಿತಾಂಶವು ನಮ್ಮ ಸಂಸ್ಥೆಯಿಂದ ಮಾಡಿದ ಬೃಹತ್ ರಕ್ತದಾನ ಶಿಬಿರಗಳೆ ಸಾಕ್ಷಿ, ಇಂತಹ ಒಳ್ಳೆಯ ಕಾರ್ಯಗಳನ್ನು ಎಲ್ಲರಿಗು ಒಗ್ಗೊಡಿಸಿ ಎಂದಿಗೊ ಮುಂದುವರಿಸುತ್ತೆವೆಂದು ಯೂನಿಟಿ ಸಿಲ್ ಸಿಲಾ ಫೌಂಡೇಶನ್ ನ ಅಧ್ಯಕ್ಷರಾದ ಮುಹಮ್ಮದ್ ಅಸದ್ ರವರು ಹೇಳಿದರು
ಈ ಕಾರ್ಯಕ್ರಮದಲ್ಲಿ ತಹಸಿಲ್ದಾರ್ ರಾದ ಶ್ರೀಮತಿ ಕೆ.ಎಂ ಮನೋರಮ ಧ್ವಜಾರೋಹಣವನ್ನು ಮಾಡಿದರು ಸರ್ಕಾರಿ ಬಾಲಕಿಯರ ಶಾಲೆಯ ಮಕ್ಕಳು ರಾಷ್ಟ್ರಗೀತೆಯನ್ನು ಹಾಡಿದರು, ಜಾಮಿಯಾ ಮಸೀದಿ ಉಪಾಧ್ಯಕ್ಷರಾದ ಅಮೀರ್ ಜಾನ್, ಕಾರ್ಯದರ್ಶಿ ಹೈದರ್ ಅಲಿ, ಖಜಾಂಚಿ ರಫೀಖ್ ಪಾಷಾ,ಮದೀನ ಮಸೀದಿ ಅಧ್ಯಕ್ಷರಾದ ಎಚ್.ಎಸ್ ಫಯಾಜ್ ಸಾಬ್,ಕಾರ್ಯದರ್ಶಿ ನಿಸಾರ್ ಅಹ್ಮದ್,ಯೂನಿಟಿ ಸಿಲ್ ಸಿಲಾ ಫೌಂಡೇಶನ್ ನ ಕಾರ್ಯದರ್ಶಿ ಇಂತಿಯಾಜ್ ಪಾಷ,ಸಯ್ಯದ್ ತೌಫೀಖ್, ಮೊಹಮ್ಮದ್ ಫಾರೋಖ್,ಮಾನವ ಹಕ್ಕುಗಳ ಜನಜಾಗೃತಿ ಸಮಿತಿ ಅಧ್ಯಕ್ಷ ಮನಿಕೃಷ್ಣ, ಶಂಶೀರ್, ಡಾಕ್ಟರ್ ಸತ್ಯ ನಾರಾಯಣ ರಾವ್, ಕೃಷಿ ಶೀಲ ಪ್ರಶಸ್ತಿ ಪುರಸ್ಕೃತರು ಹಿತ್ತಲಹಳ್ಳಿ ಸುರೇಶ್, ರೈತ ಸಂಘದ ತಾಲೋಕು ಅಧ್ಯಕ್ಷ ಎಸ್.ಎಂ ರವಿಪ್ರಕಾಶ್,ಸಮಾನ ಮನಸ್ಕರ ಸಮೀತಿಯ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್,
ದಾರುಲ್ ಉಲುಮ್ ಸಬೀಲುಲ್ ಹುದಾ ಮದರಸಾದ ಹಿರಿಯರು ಹಾಗು
ವಿಧ್ಯಾರ್ಥಿಗಳು ಮತ್ತು ಇತರೆ ಗಣ್ಯರು ಉಪಸ್ಥಿತರಿದ್ದರು.

ದಯವಿಟ್ಟು ಈ ಉಪಯುಕ್ತ ವರದಿಯನ್ನು ನಿಮ್ಮ ಪತ್ರಿಕೆ ಮತ್ತು ನಿಮ್ಮ ಅಂತರ್ಜಾಲ ಸುದ್ದಿತಾಣದ ಸಂಚಿಕೆಗಳಲ್ಲಿ ಪ್ರಕಟಿಸಲು ವಿನಂತಿಸುತ್ತೇವೆ

ಇಂತಿ
"ಯೂನಿಟಿ ಸಿಲ್ ಸಿಲಾ ಫೌಂಡೇಶನ್"
ಶಿಡ್ಲಘಟ್ಟ ನಗರ,ಚಿಕ್ಕಬಳ್ಳಾಪುರ ಜಿಲ್ಲೆ.

ಮುಹಮ್ಮದ್ ಅಸದ್
9342488006
ಇಂತಿಯಾಜ್ ಪಾಷ
9945340888

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News