ವಿಜಿಲೆನ್ಸ್ ಕೋರ್ಟ್ ತೀರ್ಪಿಗೆ ಹೈಕೊರ್ಟ್ ತಡೆ: ಉಮ್ಮನ್ಚಾಂಡಿ , ಆರ್ಯಾಡನ್ ಮುಹಮ್ಮದ್ರಿಗೆ ತಾತ್ಕಾಲಿಕ ವಿಜಯ

Update: 2016-01-29 11:57 GMT

 ವಿಜಿಲೆನ್ಸ್ ಕೋರ್ಟ್ ನ್ಯಾಯಾಧೀಶರಿಗೆ ಹೈಕೋರ್ಟ್ ಛೀಮಾರಿ, ನ್ಯಾಯಾಧೀಶ ವಾಸನ್‌ರಿಂದ ಸ್ವಯಂ ನಿವೃತ್ತಿ ಅರ್ಜಿ ಸಲ್ಲಿಕೆ

 ತಿರುವನಂತಪುರ: ಸೋಲಾರ್ ಲಂಚ ಪ್ರಕರಣದಲ್ಲಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ತಾತ್ಕಾಲಿಕ ಸಾಂತ್ವನ ದೊರತಿದೆ. ಸರಿತಾ ಎಸ್. ನಾಯರ್ ವಿದ್ಯತ್ ಸಚಿವ ಆರ್ಯಾಡನ್ ಮುಹಮ್ಮದ್ ಮತ್ತು ಮುಖ್ಯಮಂತ್ರಿಯ ವಿರುದ್ಧ ಸೋಲಾರ್ ಆಯೋಗದ ಮುಂದೆ ನೀಡಿದ್ದ ಸಾಕ್ಷ್ಯದ ಹಿನ್ನೆಲೆಯಲ್ಲಿ ವಿಜಿಲೆನ್ಸ್ ಕೋರ್ಟ್ ನೀಡಿದ್ದ ತೀರ್ಪಿಗೆ ಹೈಕೋರ್ಟ್‌ತಡೆಯಾಜ್ಞೆ ನೀಡಿದೆ. ಮುಖ್ಯಮಂತ್ರಿ ಮತ್ತು ವಿದ್ಯುತ್‌ಸಚಿವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಎರಡು ತಿಂಗಳ ಅವಧಿಗೆ ವಿಜಿಲೆನ್ಸ್ ಕೋರ್ಟ್ ತೀರ್ಪನ್ನು ತಡೆ ಹಿಡಿದಿರುವುದಾಗಿ ಆದೇಶಿಸಿದೆ. ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸುತ್ತಾ ಉಮ್ಮನ್ ಚಾಂಡಿ ಸತ್ಯ ವಿಜಯಿಯಾಗಲಿದೆ ಎಂದಿದ್ದಾರೆ.

ತೃಶೂರ್ ವಿಜಿಲೆನ್ಸ್ ಕೋರ್ಟ್‌ನ ತೀರ್ಪನ್ನು ಕಟುವಾಗಿ ಟೀಕಿಸಿದ ಹೈಕೋರ್ಟ್ ಕಾನೂನು ಆಧಾರದಲ್ಲಿ ತೀರ್ಪು ನೀಡಬೇಕಾಗಿದೆಯೆಂದೂ ಸರಿತಾ ಬಹಿರಂಗ ಪಡಿಸಿದ ಸಾಕ್ಷ್ಯಗಳ ಆಧಾರದಲ್ಲಿ ತೀರ್ಪು ನೀಡಬಾರದೆಂದೂ ಹೇಳಿದೆ. ವಿಜಿಲೆನ್ಸ್ ಕೋರ್ಟ್ ತೀರ್ಪಿನ ಹಿಂದೆ ನಿಗೂಢತೆ ಅಡಗಿದೆ ಎಂದು ಪ್ರಹಾರ ಮಾಡಿರುವ ಹೈಕೋರ್ಟ್ ವಿಜಿಲೆನ್ಸ್ ಕೋರ್ಟ್ ತೀರ್ಪಿನಲ್ಲಿ ಪೋಸ್ಟ್‌ಮ್ಯಾನ್‌ನ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದಿತ್ತು. ವಿಜಿಲೆನ್ಸ್‌ಕೋರ್ಟು ನ್ಯಾಯಾಧೀಶರಿಗೆ ತನ್ನ ಜವಾಬ್ದಾರಿ ಏನೆಂದು ಸರಿಯಾಗಿ ತಿಳಿದಿಲ್ಲ. ಹೈಕೋರ್ಟ್ ಅಡ್ಮಿಸ್ಟ್ರೇಟಿವ್ ವಿಭಾಗ ಈ ವಿಷಯವನ್ನು ಪರಿಶೀಲಿಸಬೇಕಾಗಿದೆ. ಸರಿತಾ ಸೋಲಾರ್ ಆಯೋಗದ ಮುಂದೆ ನೀಡಿದ ಸಾಕ್ಷ್ಯಗಳು ವಿಜಿಲೆನ್ಸ್ ಕೋರ್ಟ್ ಕ್ರಮಕ್ಕೆ ಆಧಾರವಾಗಿದೆ ಪರಿಗಣಿಸಲು ಹೇಗೆ ಸಾಧ್ಯ ಎಂದು ಹೈಕೋರ್ಟ್ ಪ್ರಶ್ನಿಸಿದೆ.. ಇಂತಹ ಒಂದು ನ್ಯಾಯಾಧೀಶರನ್ನು ಮುಂದಿಟ್ಟು ಕೊಂಡು ಹೇಗೆ ಮುಂದೆಸಾಗಲು ಸಾಧ್ಯ? ಸ್ವಂತ ಅಧಿಕಾರ ಏನೆಂದು ಈ ನ್ಯಾಯಾಧೀಶರಿಗೆ ತಿಳಿದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಈ ಹೊಸ ಬೆಳವಣಿಗೆ ಹಿನ್ನೆಲೆಯಲ್ಲಿ ತೃಶೂರ್ ವಿಜಿಲೆನ್ಸ್ ನ್ಯಾಯಾಧೀಶರು ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್‌ನ ಕಟು ಟೀಕೆಗೆಗೊಳಗಾದ ಜಡ್ಜ್ ಎಸ್.ಎಸ್. ವಾಸನ್ ಸ್ವಯಂ ನಿವೃತ್ತಿಗಾಗಿ ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸೋಲಾರ್ ಆಯೋಗದ ಮುಂದೆ ಮುಖ್ಯಮಂತ್ರಿ ಹಾಗೂಇನ್ನೋರ್ವ ಸಚಿವರ ವಿರುದ್ಧ ಸರಿತಾನಾಯರ್ ಸಾಕ್ಷ್ಯ ನುಡಿಯುತ್ತಿದ್ದಾಗಲೇ ವಿಜಿಲೆನ್ಸ್ ಕೋರ್ಟು ಅವರಿಬ್ಬರ ವಿರುದ್ಧ ೂರು ದಾಖಲಿಸಿಕೊಳ್ಳಲು ಸೂಚಿಸಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News