ಸುಳ್ಯ: ಆದರ್ಶ ಗ್ರಾಮದಲ್ಲಿ ಕತ್ತಲೆ ಭಾಗ್ಯ ಗ್ರಾಮಸ್ಥರಿಂದ ಬೆಳ್ಳಾರೆ ಮೆಸ್ಕಾಂ ಕಚೇರಿಗೆ ಮುತ್ತಿಗೆ
Update: 2016-01-29 17:40 IST
ಸುಳ್ಯ: ಬಳ್ಪ ಪರಿಸರದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಬೆಳ್ಳಾರೆ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪ್ರಸಾದ್ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಲೋವೋಲ್ಟೇಜ್ ಸಮಸ್ಯೆಗೆ 11 ಕೆವಿ ಕೆಪಾಸಿಟಿರ್ ಅಳವಡಿಸಿ ವೋಲ್ಟೇಜ್ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಲಭ್ಯವಿರುವ ವಿದ್ಯುತ್‌ನ್ನು ಗುಣಮಟ್ಟದಲ್ಲಿ ನಿರಂತರಾಗಿ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು. ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಅವರು ಭರವಸೆ ನೀಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಮುಡ್ನೂರು, ಅಚ್ಚುತ ಅಲ್ಕಬೆ, ಚಂದ್ರಶೇಖರ ಪಂಡಿ, ಸುಬ್ರಹ್ಮಣ್ಯ ಕುಳ, ರಮಾನಂದ ಎಣ್ಣೆಮಜಲು, ಶ್ರೀಕೃಷ್ಣ ಭಟ್ ಪಠೋಳಿ, ಭಾಸ್ಕರ ಪಂಡಿ, ಲಿಂಗಪ್ಪ ಮಾಸ್ತರ್ ಕಟ್ಟ, ತಿಮ್ಮಪ್ಪ ಗೌಡ ಪಳ್ಳತ್ತಡ್ಕ, ಕಿಶೋರ್ ಶಿರಾಡಿ, ಕರುಣಾಕರ ಬರೆಮೇಲು ಮೊದಲಾದವರು ಉಪಸ್ಥಿತರಿದ್ದರು.