×
Ad

ಸುಳ್ಯ: ಫೆಬ್ರವರಿ 7 ಹಾಗೂ 8ರಂದು ಬುರ್ದಾ ಮಜ್ಲಿಸ್ ಹಾಗೂ ತಾಜುಲ್ ಹಾಗೂ ನೂರಲ್ ಉಲಮಾ ಅನುಸ್ಮರಣೆ

Update: 2016-01-29 17:45 IST

ಸುಳ್ಯ: ಎಸ್‌ಎಸ್‌ಎಫ್ ಮತ್ತು ಸುನ್ನಿ ಯುವಜನ ಸಂಘದ ಪಳ್ಳಿಮಜಲು ಘಟಕದ ವತಿಯಿಂದ ಫೆಬ್ರವರಿ 7 ಹಾಗೂ 8ರಂದು ಬುರ್ದಾ ಮಜ್ಲಿಸ್ ಹಾಗೂ ತಾಜುಲ್ ಹಾಗೂ ನೂರಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮ ಪಳ್ಳಿಮಜಲು ಮಸೀದಿಯ ವಠಾರದಲ್ಲಿ ನಡೆಯಲಿದೆ ಎಂದು ಕೊಂಬಾಳಿ ಕೆ.ಎಂ.ಎಚ್.ಝಹರಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.7ರಂದು ಸಂಜೆ 6 ಗಂಟೆಗೆ ಬುರ್ದಾ ಮಜ್ಲಿಸ್ ನಡಯಲಿದೆ. ಎವೈಎಸ್ ಬೆಳ್ಳಾರೆ ಘಟಕದ ಅಧ್ಯಕ್ಷ ಹಸನ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎಂ.ಜಮೀದ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಸರಗೋಡಿನ ಮಿಶ್ಕಾತುಲ್ ಮದೀನಾ ತಂಡದ ಅಮೀರ್ ಜಾಫರ್ ಪಳ್ಳತ್ತೂರು ಬುರ್ದಾ ಮಜ್ಲಿಸ್‌ಗೆ ನೇತೃತ್ವ ನೀಡಲಿದ್ದಾರೆ. ಬೆಂಗಳುರಿನ ಮುನಿದ್ದೀನ್ ವಿಶೇಷ ನಾತ್ ಶೆರೀಫ್ ಆಲಾಪನೆ ಮಾಡಲಿದ್ದು, ಮಾಸ್ಟರ್ ಸಲೀಂ ಖಾದ್ರಿ, ಮಾಸ್ಟರ್ ಆಶಿಖ್ ಉಜಿರೆ ನಾತ್ ಶರೀಫ್ ಹಾಗೂ ಮದ್‌ಹ್ ಗೀತೆ ಆಲಾಪನೆ ಮಾಡಲಿದ್ದಾರೆ ಎಂದರು.
ಫೆ.8ರಂದು ಸಂಜೆ 6 ಗಂಟೆಗೆ ಸುನ್ನಿ ಜಂಯಿತ್ತಲ್ ಉಲಮಾ ರಾಜ್ಯ ಉಪಾಧ್ಯಕ್ಷ ಝೈನುಲ್ ಉಲಮಾ ಶೈಖುನಾ ಮಾಣಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಮಾಅತ್ ಅಧ್ಯಕ್ಷ ಮಹಮ್ಮದ್ ಬೀಡು ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಜಿಲ್ಲಾ ಖಾಝಿ ಕೂರತ್ ತಂಙಳ್, ಕೇರಳದ ಮಂಬಾಡ್‌ನ ಶಾಕಿರ್ ಬಾಖವಿ ಮುಖ್ಯ ಭಾಷಣ ಮಾಡಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದವರು ಹೇಳಿದರು.
ಶರೀಫ್ ಕಾವಿನಮೂಲೆ, ಆಸಿಫ್ ಪಳ್ಳಿಮಜಲು, ದಾವುದ್, ಮಜೀದ್ ನೇಲ್ಯಮಜಲು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News