×
Ad

ಸಮಸ್ತ ಉಲಮಾ ಒಕ್ಕೂಟ: ಫೆ. 6ರಂದು ಸುಳ್ಯದಲ್ಲಿ ಪ್ರಚಾರ ಸಮ್ಮೇಳನ

Update: 2016-01-29 18:00 IST

ಸುಳ್ಯ: ಸಮಸ್ತ ಉಲಮಾ ಒಕ್ಕೂಟದ 90ನೇ ವಾರ್ಷಾಚರಣೆಯ ಫೆ.11ರಿಮದ 14ರವರೆಗೆ ಆಲಪ್ಪುರದಲ್ಲಿ ನಡೆಯಲಿದ್ದು, ಅದರ ಪ್ರಚಾರಾರ್ಥ ಫೆ6ರಂದು ಸುಳ್ಯ ಗಾಂಧಿನಗರದಲ್ಲಿ ಪ್ರಚಾರ ಸಮ್ಮೇಳನ ನಡೆಯಲಿದೆ ಎಂದು ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷ ಮಹಮ್ಮದ್ ಶಾಫಿ ದಾರಿಮಿ ಅಜ್ಜಾವರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.6ರ ಸಂಜೆ 5.30ಕ್ಕೆ ದುಗ್ಗಲಡ್ಕದ ಝೈನುಲ್ ಅಬಿದೀನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಯನಾಡಿನ ಮಹಮ್ಮದ್ ಕುಟ್ಟಿ ನಿಝಾಮಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು. ಕನಕಮಜಲಿನ ಸುಣ್ಣಮೂಲೆಯಲ್ಲಿ ಸಮಸ್ತ ಸಮ್ಮೇಳನ ಫೆ.5ರಂದು ನಡೆಯಲಿದ್ದು, ಆಲಿ ತಂಙಳ್ ಕುಂಭೋಳ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮೂಡಿಕೆರೆಯ ಖಾಝಿ ಎನ್‌ಪಿಎಂ ಝೈನುಲ್ ಅಬಿದೀನ್ ತಂಙಳ್ ದುಗ್ಗಲಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಆತೂರಿನ ಮಹಮ್ಮದ್ ಜುನೈದ್ ಜಿಫ್ರಿ ತಂಙಳ್, ಜಿಲ್ಲಾ ಎಸ್‌ಕೆಎಸ್‌ಎಸ್‌ಎಫ್ ಉಪಾಧ್ಯಕ್ಷ ಪಿ.ಎ.ಮರ್ದಾಳ, ಪುತ್ತೂರು ಕೇಂದ್ರ ಜುಮ್ಮಾ ಮಸೀದಿಯ ಮುದರ್ರೀಸ್ ಅಹಮ್ಮದ್ ಪೋಕೋಯ ತಂಙಳ್ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.

ಹನೀಫ್ ಮುಸ್ಲಿಯಾರ್, ಶಹೀದ್ ಪಾರೆ, ಎಂ.ಎಸ್.ಅಬೂಬಕರ್, ಶರೀಕ್, ಅಬ್ದುಲ್ ಸಮದ್, ಎಸ್.ಎ.ಸೈಫುದ್ದೀನ್, ಜಮಾಲುದ್ದೀನ್, ಫಝಲ್, ಅಧ್ಯಾಪಕರ ಒಕ್ಕೂಟದ ರೆಹಮಾನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News