×
Ad

ಕಾಸರಗೋಡು : ಎಂಡೋಸಲ್ಫಾನ್ ಸಂತ್ರಸ್ಥರ ಉಪವಾಸ ಸತ್ಯಾಗ್ರಹ ಕೊನೆಗೊಳಿಸುವ ಬಗ್ಗೆ ನಡೆಸಿದ ಮಾತುಕತೆ ವಿಫ಼ಲ

Update: 2016-01-29 19:36 IST

ಕಾಸರಗೋಡು : ಎಂಡೋಸಲ್ಫಾನ್ ಸಂತ್ರಸ್ಥರು ತಿರುವನಂತಪುರ  ಸಚಿವಾಲಯದ  ಮುಂಭಾಗದಲ್ಲಿ ನಡೆಸುತ್ತಿರುವ  ಅನಿರ್ಧಿಷ್ಟಾವಧಿ  ಉಪವಾಸ ಸತ್ಯಾಗ್ರಹ ಕೊನೆಗೊಳಿಸುವ ಬಗ್ಗೆ ಶುಕ್ರವಾರ   ಸರಕಾರ    ಎಂಡೋಸಲ್ಫಾನ್ ಸಂತ್ರಸ್ಥ ಹೋರಾಟ ಸಮಿತಿ ಮುಖಂಡರ ಜೊತೆ ನಡೆಸಿದ  ಮಾತುಕತೆ ವಿಫ಼ಲ ಗೊಂಡಿದೆ. ಫೆಬ್ರವರಿ ಮೂರರಂದು ಮತ್ತೆ ಸಭೆ ನಡೆಯಲಿದೆ. ಮುಖ್ಯಮಂತ್ರಿ ಉಮ್ಮನ್ ಚಾಂಡಿ  ಜೊತೆ

ಪ್ರತಿಪಕ್ಷ ನಾಯಕ ವಿ . ಎಸ್ ಅಚ್ಯುತಾನಂದನ್  ನೇತ್ರತ್ವದಲ್ಲಿ   ಸಂತ್ರಸ್ಥರು ಮಾತುಕತೆಯಲ್ಲಿ  ಪಾಲ್ಗೊಂಡಿದ್ದರು.

ಸಭೆಯಲ್ಲಿ ಕೃಷಿ ಸಚಿವ ಕೆ. ಪಿ ಮೋಹನನ್ ಹಾಗೂ ಅಧಿಕಾರಿಗಳು   ಪಾಲ್ಗೊಂಡಿದ್ದರು.

ಸವಲತ್ತು ನೀಡಬೇಕಾದ ಎಂಡೋಸಲ್ಫಾನ್ ಸಂತ್ರಸ್ತರ ಅಂಕಿ - ಅಂಶ ದಲ್ಲಿನ  ಗೊಂದಲ ಸಭೆ ಇತ್ಯರ್ಥಗೊಳ್ಳದೆ  ವಿಫ಼ಲಗೊಳ್ಳಲು ಕಾರಣ  ಎನ್ನಲಾಗಿದೆ.   ಸಂತ್ರಸ್ತರ ಕುರಿತು   ನಿಖರ ಮಾಹಿತಿ ನೀಡದಿರುವುದು  ಸಭೆಯಲ್ಲಿ ಸ್ಪಷ್ಟ  ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.

ಸಭೆಯಲ್ಲಿ  ಸಂತ್ರಸ್ತರ  ಪರವಾಗಿ  ಡಾ. ಅಂಬಿಕಾಸುತನ್ ಮಾಂಗಾಡ್, ಅಂಬಲತ್ತರ ಕುನ್ಚಿ ಕೃಷ್ಣನ್ , ನಳಿನಿ , ಜಮೀಲಾ  ಮೊದಲಾದವರು ಪಾಲ್ಗೊಂಡಿದ್ದರು. 

ಮಾತುಕತೆ ವಿಫ಼ಲಗೊಂಡ  ಹಿನ್ನಲೆಯಲ್ಲಿ   ಉಪವಾಸ ಸತ್ಯಾಗ್ರಹ ತೀವ್ರಗೊಳಿಸಲಾಗುವುದು ಎಂದು ಪ್ರತಿಪಕ್ಷ ನಾಯಕ  ವಿ. ಎಸ್ ಅಚ್ಯುತಾನಂದನ್  ಸಭೆ ಬಳಿಕ ಮುನ್ನೆಚ್ಚರಿಕೆ  ನೀಡಿದರು.

ಸತ್ಯಾಗ್ರಹ  ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ,   ಕಾಸರಗೋಡು ಸಂಸದ  ಪಿ. ಕರುಣಾಕರನ್ , ಶಾಸಕ ಇ. ಚಂದ್ರಶೇಖರನ್ , ಮಾಜಿ ಸಚಿವ ಪಿ. ದಿವಾಕರನ್  ಮೊದಲಾದವರು ಭೇಟಿ ನೀಡಿ ಬೆಂಬಲ ಸೂಚಿಸಿದರು

ಜನವರಿ ೨೬ ರಂದು ಉಪವಾಸ ಸತ್ಯಾಗ್ರಹ ಆರಂಭಗೊಂಡಿತ್ತು, ಪ್ರತಿಪಕ್ಷ  ನಾಯಕ ವಿ . ಎಸ್ ಅಚ್ಯುತಾನಂದನ್  ಉದ್ಘಾಟಿಸಿದ್ದರು. ಮುಷ್ಕರ  ಮೂರನೇ ದಿನ ಕಳೆದ ಹಿನ್ನಲೆಯಲ್ಲಿ  ಅಚ್ಯುತಾನಂದನ್  ಮಧ್ಯಸ್ಥಿಕೆ  ವಹಿಸಿ  ಮುಖ್ಯಮಂತ್ರಿ   ಜೊತೆ ಮಾತುಕತೆ ನಡೆಸಿದರೂ  ವಿಫ಼ಲಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News