×
Ad

ಮುಡಿಪು : ಸೂರಜ್ ಉತ್ಸವ - 'ವಿದ್ಯಾರ್ಥಿಗಳು ಬಲಿಷ್ಠರಾದಾಗ ದೇಶ ಬಲಿಷ್ಠವಾಗುತ್ತದೆ' : ಯು.ಟಿ.ಖಾದರ್

Update: 2016-01-29 21:50 IST

ಮುಡಿಪುವಿನಲ್ಲಿ ಶುಕ್ರವಾರ ನಡೆದ ಸೂರಜ್ ಉತ್ಸವವನ್ನು ಯು.ಟಿ.ಖಾದರ್ ಉದ್ಘಾಟಿಸಿದರು.

ಕೊಣಾಜೆ: ಮಕ್ಕಳು ಪ್ರಕಾಶಿಸಿದಲ್ಲಿ ಭವಿಷ್ಯದಲ್ಲಿ ಕುಟುಂಬಗಳು ಪ್ರಕಾಶಿಸುತ್ತದೆ. ಶಿಕ್ಷಕರ ಜತೆಗೆ ಹೆತ್ತವರು ಮಕ್ಕಳ ಬೆಳವಣಿಗೆಯಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಹೆತ್ತವರು ಅನಾವಶ್ಯಕ ಚರ್ಚೆಗಳನ್ನು ಬದಿಗಿರಿಸಿ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಸಮಯವನ್ನು ಮೀಸಲಾಗಿರಿಸುವುದರೊಂದಿಗೆ ಉತ್ತಮ ಶಿಕ್ಷಣವನ್ನು ನೀಡಿದಾಗ ಹೆತ್ತವರಿಗೆ ಮಾತ್ರವಲ್ಲ ಸಮಾಜಕ್ಕೆ ಆಸ್ತಿಯಾಗುತ್ತಾನೆ. ಸಾಹಿತ್ಯಕ್ಕೂ ಹೆಚ್ಚಿನ ಒಲವು ಶಾಲೆಗಳಿಂದ ಸಿಗಬೇಕಿದೆ. ಈ ಮೂಲಕ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳುತ್ತಾರೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.

    ಅವರು ಸೂರಜ್ ಎಜ್ಯುಕೇಷನಲ್ ಚಾರಿಟೇಬಲ್ ಟ್ರಸ್ಟ್ , ಸೂರಜ್ ಇಂಟರ್ ನ್ಯಾಷನಲ್ ಹೈಯರ್ ಪ್ರೈಮರಿ ಶಾಲೆ , ಜ್ಞಾನದೀಪ ಹೈಸ್ಕೂಲ್ ಮತ್ತು ಸೂರಜ್ ಪಿ.ಯು ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ‘ಸೂರಜ್ ಉತ್ಸವ್-2016 ನ್ನು ಮುಡಿಪು ಕುರ್ನಾಡಿನ ಶಾಲಾ ಮೈದಾನದಲ್ಲಿ ಶುಕ್ರವಾರ ಉದ್ಘಾಟಿಸಿದರು. ವಿದ್ಯಾರ್ಥಿಗಳೆಂದರೆ ನಮ್ಮ ದೇಶದ ಆಸ್ತಿ. ಗ್ರಾಮಿಣ ಮಟ್ಟದ ಶಾಲಾ ವಿದ್ಯಾರ್ಥಿಗಳು ಬಲಿಷ್ಠರಾದಾಗ ದೇಶ ಬಲಿಷ್ಠವಾಗಲು ಸಾಧ್ಯ. ನಗರದಲ್ಲಿರುವ ಶಿಕ್ಷಣವನ್ನು ಗ್ರಾಮೀಣ ಮಟ್ಟದಲ್ಲಿ ನೀಡುವಂತೆ ಶಿಕ್ಷಣ ಸಂಸ್ಥೆಗಳು ಪ್ರಯತ್ನಿಸಬೇಕು ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭ ಕರ್ಣಾಟಕ ಬ್ಯಾಂಕಿನ ಕಂಕನಾಡಿ ಬ್ರಾಂಚಿನ ಪ್ರಬಂಧಕಿ ರೇಣುಕಾ.ಎಂ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸಂತೋಷ್ ಕುಮಾರ್ ರೈ ಬೋಳಿಯಾರು ಅವರು ಶಾಲಾ ವಾಚನಾಲಯ ಕಟ್ಟಡವನ್ನು ಉದ್ಘಾಟಿಸಿದರು.

          ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ.ಡಿ.ಎಸ್.ಗಟ್ಟಿ ಹಾಗೂ ಕರ್ಣಾಟಕ ಬ್ಯಾಂಕಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀನಿವಾಸ್ ದೇಶಪಾಂಡೆ, ಶಾಲೆಯ ಚೇರ್‌ಮೆನ್ ಡಾ.ಮಂಜುನಾಥ ಯಸ್. ರೇವಣ್‌ಕರ್, ದೆಹಲಿ ಕೃಷಿಕ ಸಮಾಜದ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಪಜೀರು ಪಂಚಾಯಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಕರೆಸ್ಪಾಂಡೆಂಟ್ ಹೇಮಲತಾ.ಯಸ್ ರೇವಣ್‌ಕರ್, ಶಾಲಾ ಪ್ರಬಂಧಕ ಹರೀಶ್ ಶೆಟ್ಟಿ, ಶಾಲಾ ವಿದ್ಯಾರ್ಥಿ ನಿತೇಶ್ ಶೆಟ್ಟಿ ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕಿ ರೇಖಾ ರಾಜ್ ಅತಿಥಿಗಳ ಪರಿಚಯ ಮಾಡಿದರು. ಆಡಳಿತ ಅಧಿಕಾರಿ ಸಂಧ್ಯಾ ವಿ.ಜೆ ಸ್ವಾಗತಿಸಿದರು.

 ಅರ್ಚನಾ ಕೊಟ್ಟಾರಿ ಹಾಗೂ ಅಕ್ಷತಾ ಕಾರ್ಯಕ್ರಮ ನಿರ್ವಹಿಸಿದರು. ರೇಣುಕಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News