×
Ad

ಕೊಣಾಜೆ : ಚರ್ಚ್‌ನಲ್ಲಿ ಕಳವು ಪ್ರಕರಣ - ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯ ಬಂಧನ

Update: 2016-01-29 22:11 IST

ಕೊಣಾಜೆ: ಪಜೀರು ಚರ್ಚ್‌ನಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಕೊಣಾಜೆ ಪೊಲೀಸರು ಗುರುವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಹರೇಕಳ ಗ್ರಾಮದ ರಾಜಗುಡ್ಡೆಯ ಸಾಹುಲ್ ಹಮೀದ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.

    ಪಜೀರುವಿನಲ್ಲಿರುವ ಚರ್ಚ್‌ನ ಬಾಗಿಲು ಮುರಿದು ಒಳಗೆ ನುಗ್ಗಿದ್ದ ಕಳ್ಳರ ತಂಡ ಚರ್ಚ್‌ನ ಪರಮ ಪ್ರಸಾದ, ಪಾತ್ರಗಳು ಸೇರಿದಂತೆ ಲ್ಯಾಪ್‌ಟಾಪ್‌ಗಳನ್ನು ಕಳವು ಗೈದು ಪರಾರಿಯಾಗಿತ್ತು. ಕಳ್ಳತನದ ದೃಶ್ಯ ಸಿಸಿ ಕ್ಯಾ,ಮರಾದಲ್ಲಿ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸರು ಕಳ್ಳತನದ ಇತರ ಆರೋಪಿಗಳನ್ನು ಬಂಧಿಸಿ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಆದರೆ ಪ್ರಕರಣದ ಪ್ರಮುಖ ಆರೋಪಿ ಸಾಹುಲ್ ಹಮೀದ್ ತಲೆಮರೆಸಿಕೊಂಡಿದ್ದ. ಅಲ್ಲದೆ ಈತ ದೇರಳಕಟ್ಟೆ ಮೊಬೈಲ್ ಅಂಗಡಿ ಹಾಗೂ ಫ್ಯಾನ್ಸಿ ಅಂಗಡಿಗಳಿಗೂ ನುಗ್ಗಿ ಕಳ್ಳತನ ನಡೆಸಿದ್ದ. ಉಳ್ಳಾಲ ಠಾಣೆಯಲ್ಲೂ ಈತನ ವಿರುದ್ದ ಕಳ್ಳತನ ಪ್ರಕರಣ ದಾಖಲಾಗಿತ್ತು. ಈತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು.

ಈತನನ್ನು ಗುರುವಾರ ಕೊಣಾಜೆ ಪೊಲೀಸ್ ಇನ್‌ಸ್ಪೆಕ್ಟರ್ ಅಶೋಕ್, ಪಿಎಸ್‌ಐ ಸುಧಾಕರ್. ಸಿಬ್ಬಂದಿಗಳಾದ ಸಂತೋಷ್ ಸಿ.ಜೆ, ಶಿವಪ್ರಸಾದ್, ಚಂದ್ರಶೇಖರ್, ರಾಜೇಶ್ ಮುಂತಾದವರ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News