×
Ad

ಮಂಗಳೂರು : ವೈಟ್‌ಸ್ಟೋನ್ ವಾರಿಯರ್ಸ್‌ ತಂಡದ ಜರ್ಸಿ ಬಿಡುಗಡೆ

Update: 2016-01-29 22:50 IST

ಮಂಗಳೂರು, ಜ. 29: ಗ್ರಾಮೀಣ ಪ್ರದೇಶದ ಕ್ರಿಕೆಟ್ ಕ್ರೀಡಾಳುಗಳನ್ನು ಹೊಂದಿರುವ ವೈಟ್‌ಸ್ಟೋನ್ ವಾರಿಯರ್ಸ್‌ನ ಕ್ರಿಕೆಟ್ ತಂಡದ ಜರ್ಸಿ ಬಿಡುಗಡೆ ಸಮಾರಂಭ ಇಂದು ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆಯಿತು.

 ಆರೋಗ್ಯ ಸಚಿವ ಯು.ಟಿ.ಖಾದರ್ ತಂಡದ ಜರ್ಸಿಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಉದ್ಯಮಿ ಮುಮ್ತಾಝ್ ಅಲಿ , ಉದ್ಯಮಿ ನಝೀರ್ ಕಾಟಿಪಳ್ಳ, ತಂಡದ ಮಾಲಕ ವೈಟ್‌ಸ್ಟೋನ್ ಡೆವಲಪರ್ಸ್‌ನ ನಿರ್ದೇಶಕ ಬಿ.ಎಂ.ಶರೀಫ್‌ರ ಪುತ್ರ ಶೋಯೆಬ್, ಸಹ ಪ್ರಾಯೋಜಕರಾದ ಜುಬೈಲ್‌ನ ಫಸ್ಟ್ ಅರೇಬಿಯಾ ಸಂಸ್ಥೆಯ ಕೆ.ಎಚ್.ರಫೀಕ್, ದಮಾಮ್‌ನ ಅಡ್ವಾನ್ಸ್ಡ್‌ಟೀಂ ಲೀಝ್‌ನ ಅಧ್ಯಕ್ಷ ಮುಹಮ್ಮದ್ ಅಶ್ರಫ್, ಶಮಾ ಗೋಲ್ಡ್‌ನ ಮ್ಯಾನೇಜರ್ ಜಂಶಿದ್, ಫ್ಲೈಕಿಂಗ್‌ನ ಶಂಶುದ್ದೀನ್, ತಂಡದ ಸಹ ಮಾಲಕ ಜಾಬಿರ್ ಅರ್ಶದ್, ಪಂಜ ಬ್ರದರ್ಸ್‌-ಕೆ.ಎಂ.ಬ್ರದರ್ಸ್‌ ಸೂರಿಂಜೆ ಹಾಗೂ ಸೂರಿಂಜೆಯ ನ್ಯೂಸ್ಟಾರ್ ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು.

ಫೆಬ್ರವರಿ 3ರಿಂದ 7ವರೆಗೆ ಸುರತ್ಕಲ್ ಸಮೀಪದ ಕೃಷ್ಣಾಪುರದಲ್ಲಿ ಅಟ್ರಾಕ್ಸ್ ಪ್ರೀಮಿಯರ್ ಲೀಗ್ -2016 ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News