ಚುಟುಕು ಸುದ್ದಿಗಳು
ನಾಳೆ ಲೋಕಾರ್ಪಣೆ
ಸುಬ್ರಹ್ಮಣ್ಯ, ಜ.29: ವಿಕಲಚೇತನ ಮಕ್ಕಳ ಆರೋಗ್ಯ ಮತ್ತು ಶೈಕ್ಷಣಿಕ ಪ್ರಗತಿಗಾಗಿ ರಚನೆಗೊಂಡ ಯೇನೆಕಲ್ಲು ಶಶಾಂಕ ಚಾರಿಟೇಬಲ್ ಟ್ರಸ್ಟ್ ಸೊಸೈಟಿಯ ಅಧಿಕೃತ ಲೋಕಾರ್ಪಣೆ ಕಾರ್ಯಕ್ರಮ ಜ.31ರಂದು ಸುಬ್ರಹ್ಮಣ್ಯೇಶ್ವರ ಪ.ಪೂ. ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ನಡೆಯಲಿದೆ ಎಂದು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುತ್ತಪ್ಪಎಂ.ಎಂ. ತಿಳಿಸಿದ್ದಾರೆ.
ಹುಟ್ಟಿನಿಂದ ವಿಕಲಚೇತನರಾಗಿರುವ ಮಕ್ಕಳ ಶಿಕ್ಷಣ ಸೇರಿದಂತೆ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುವುದು. ಆರಂಭದಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಅಂತಹ ಮಕ್ಕಳನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರಲಾಗುವುದು. ಬಳಿಕ ಪ್ರತಿ ತಿಂಗಳ ಎರಡು ರವಿವಾರ ವಿಕಲಚೇತನರ ಶಿಬಿರ, ಸ್ಕಾಲರ್‌ಶಿಪ್ ನೀಡುವ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು. ಟ್ರಸ್ಟ್ ಪ್ರಧಾನ ಕೋಶಾಧಿಕಾರಿ ಕಿಶೋರ್ ಕುಮಾರ್ ಕೂಜುಗೋಡು, ನಿರ್ದೇಶಕರಾದ ದಿನೇಶ್ ಬಿ.ಎನ್., ದಿನೇಶ್ ಎಂ.ಪಿ., ನೇಮಿರಾಜ ಪಲ್ಲೋಡಿ, ಶಿವಪ್ರಸಾದ ಮಾದನಮನೆ ಉಪಸ್ಥಿತರಿದ್ದರು.
ಲಾವಣ್ಯರಿಗೆ ದ್ವಿತೀಯ ರ್ಯಾಂಕ್
ಉಡುಪಿ, ಜ.29:ಉಡುಪಿ ಪೂರ್ಣಪ್ರಜ್ಞ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಗಣಿತ ಶಾಸ್ತ್ರ ಉಪನ್ಯಾಸಕಿ ಲಾವಣ್ಯಾ ವಿ. ಸಾಲಿಯಾನ್ ಗಣಿತ ಶಾಸ್ತ್ರದ ಸ್ನಾತಕೋತ್ತರ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್‌ನೊಂದಿಗೆ ತೇರ್ಗಡೆಯಾಗಿದ್ದಾರೆ.
ಕರಾಟೆ: ದ್ವಿತೀಯ ಸ್ಥಾನ
ಮೂಡುಬಿದಿರೆ, ಜ.29: ಮೂಡುಬಿದಿರೆಯ ದಿಗಂಬರ ಆಂಗ್ಲಮಾಧ್ಯಮ ಶಾಲೆಯ 7ನೆ ತರಗತಿಯ ವಿದ್ಯಾರ್ಥಿನಿ ಪ್ರತೀಕಾ ಇತ್ತೀಚೆಗೆ ಮಹಾವೀರ ಕಾಲೇಜಿನಲ್ಲಿ ನಡೆದ ರಾಷ್ಟ್ರಮಟ್ಟದ ಶೊರಿನ್ ರಿಯೂ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಕಟಪಾಡಿಯಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿಯ ಪದಕ ಗಳಿಸಿರುತ್ತಾರೆ. ಈಕೆ ಮೂಡುಬಿದಿರೆ ಬೊಗ್ರುಗುಡ್ಡೆಯ ದುರ್ಗಾನಿಲಯದ ರೇಖಾ ಮತ್ತು ಪ್ರಭಾಕರ ಮಡಿವಾಳರ ಪುತ್ರಿ.
ಆಯುಷ್‌ಗೆ ಚಿನ್ನದ ಪದಕ
ಕಾರ್ಕಳ,ಜ.29: ಇತ್ತೀಚೆಗೆ ಚೆನ್ನೈಯಲ್ಲಿ ನಡೆದ ರಾಷ್ಟ್ರೀಯ ಯುವಜನ ಮತ್ತು ಕ್ರೀಡಾ ಇಲಾಖೆಯ ರಾಷ್ಟ್ರಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಕಾರ್ಕಳ ತಾಲೂಕಿನ ಸಾಣೂರಿನ ಆಯುಷ್ ಆರ್. ಶೆಟ್ಟಿ ರಾಜ್ಯವನ್ನು ಪ್ರತಿನಿಧಿಸಿ ಚಿನ್ನದ ಪದಕ ಪಡೆದಿದ್ದಾರೆ. ಇವರು ಪ್ರಕೃತಿ ನ್ಯಾಷನಲ್ ಸ್ಕೂಲ್‌ನ 5ನೆ ತರಗತಿ ವಿದ್ಯಾರ್ಥಿ.
ಗೋಲ್ಡನ್ ಆರ್ಟ್ ಪ್ರಶಸ್ತಿ
ಉಳ್ಳಾಲ, ಜ.29: ಮುಂಬೈಯ ರಂಗೋತ್ಸವ ಸಂಸ್ಥೆ ಆಯೋ ಜಿಸಿದ್ದ ರಾಷ್ಟ್ರ ಮಟ್ಟದ ಕಲರಿಂಗ್ ಮತ್ತು ಕೈಬರಹ ಸ್ಪರ್ಧೆ‘ಆರ್ಟ್‌ಫೆಸ್ಟ್’ನಲ್ಲಿ ಭಾಗವಹಿಸಿದ್ದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಹೃತಿಕ್‌ಚಂದ್ ‘ಅಖಿಲ ಭಾರತದಲ್ಲಿ ದ್ವಿತೀಯ ಸ್ಥಾನಿಯಾಗಿ ‘ಗೋಲ್ಡನ್ ಆರ್ಟ್ ಪ್ರಶಸ್ತಿ’ಯನ್ನು ಪಡೆದುಕೊಂಡಿದ್ದಾರೆ.
ದೇಶದ್ರೋಹಿಗಳ ಸದ್ದಡಗಲಿ: ಶಾಫಿ ಸಅದಿ
ಶಿವಮೊಗ್ಗ, ಜ.29: ಭಾರತದ ಐಕ್ಯತೆಗೆ ಬೆದರಿಕೆಯೊಡ್ಡುತ್ತಿರುವ ದೇಶ ದ್ರೋಹಿಗಳ ಸದ್ದಡಗುವಂತಾಗಲಿ ಎಂದು ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ರಾಜ್ಯಾಧ್ಯಕ್ಷ ಎನ್‌ಕೆಎಂ ಶಾಫಿ ಸಅದಿ ನುಡಿದರು.
ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ನಡೆದ ರೆನಲ್ ಮಟ್ಟದ ಕ್ಯಾಂಪಸ್ ಕಾನ್ಫರೆನ್ಸ್‌ನಲ್ಲಿ ದೇಶದ 67ನೆ ಗಣರಾಜ್ಯೋತ್ಸವ ಸಂದೇಶವನ್ನು ಅವರು ನೀಡುತ್ತಿದ್ದರು.
ಅಡ್ವಕೇಟ್ ಎ.ಕೆ. ಇಸ್ಮಾಯೀಲ್ ವಫಾ ‘ಕ್ಯಾಂಪಸ್‌ನಲ್ಲಿ ಮಾದರಿ ವಿದ್ಯಾರ್ಥಿ’ ವಿಷಯದಲ್ಲಿ, ಇರ್ಫಾನ್ ನೂರಾನಿ ಕಲ್ಲಿಕೋಟೆ ‘ಇಸ್ಲಾಮಿನ ಸೌಂದರ್ಯ’, ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಸಖಾಫಿ ‘ಆಧ್ಯಾತ್ಮಿಕತೆಯಿಂದ ಬದಲಾವಣೆ’ ಎನ್ನುವ ವಿಚಾರದಲ್ಲಿ ವಿಷಯ ಮಂಡಿಸಿದರು. ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಬೆಂಗಳೂರು ಕಾರ್ಯಯೋಜನೆಯನ್ನು ಮಂಡಿಸಿದರು.
ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ರಝ್ವಿ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಅಬೂಬಕರ್ ಸಿದ್ದೀಖ್ ತಂಙಳ್ ದುಆ ಮಾಡಿದರು.ಸಮಾರಂಭದಲ್ಲಿ ಸೈಯದ್ ಅಮೀನ್ ತಂಙಳ್ ಮೂಡಿಗೆರೆ, ಕೆಸಿಎಫ್ ದುಬೈ ರೆನ್ ಅಧ್ಯಕ್ಷ ಮೆಹಬೂಬ್ ಸಖಾಫಿ, ಸೈಯದ್ ಶಾಹುಲ್ ಹಮೀದ್ ತಂಙಳ್, ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ಅಡ್ವಕೇಟ್ ಇಲ್ಯಾಸ್, ಅಬ್ದುರ್ರಹ್ಮಾನ್ ಹಾಜಿ, ಉಸ್ಮಾನ್ ಚಿಕ್ಕಮಗಳೂರು, ಇಸ್ಹಾಕ್ ಝುಹ್ರಿ ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಶಿವಮೊಗ್ಗ ಜಿಲ್ಲಾ ನಾಯಕರಾದ ಅಬ್ದುಲ್ಲತೀಫ್ ಸಅದಿ, ಶಂಸುದ್ದೀನ್, ತಸ್ಲೀಮ್ ಸಖಾಫಿ, ಕರೀಮ್ ಸಅದಿ, ಸಫ್‌ವಾನ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ. ಮುಹಮ್ಮದ್ ಸಾದಿಕ್ ಸ್ವಾಗತಿಸಿದರು. ಯಾಕೂಬ್ ಸಅದಿ ಕಾರ್ಯಕ್ರಮ ನಿರೂಪಿಸಿದರು. ಶಾಹುಲ್ ಹಮೀದ್ ಮುಸ್ಲಿಯಾರ್ ವಂದಿಸಿದರು.
ಸೆರ್ಕಳ: ಅನುಸ್ಮರಣೆ ಕಾರ್ಯಕ್ರಮ
ಬಂಟ್ವಾಳ, ಜ.29: ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಸೆರ್ಕಳ ನಗರ ಶಾಖೆಯ ವತಿಯಿಂದ ತಾಜುಲ್ ಉಲಮಾ, ನೂರುಲ್ ಉಲಮಾ, ಶಂಸುಲ್ ಉಲಮಾ, ಪೊಸೋಟ್ ತಂಙಳ್ ಅನುಸ್ಮರಣೆ ಹಾಗೂ ಹುಬ್ಬುರ್ರಸೂಲ್ ಪ್ರಭಾಷಣವು ತಾಜುಲ್ ಉಲಮಾ ನಗರದಲ್ಲಿ ನಡೆಯಿತು. ಅಕ್ಬರ್ ಅಲಿ ಮದನಿ ಉದ್ಘಾಟಿಸಿದರು. ಅಬೂಬಕರ್ ಸಅದಿ ಸೆರ್ಕಳ ಅಧ್ಯಕ್ಷತೆ ವಹಿಸಿದ್ದರು. ಅಸೈಯದ್ ಜಲಾಲುದ್ದೀನ್ ತಂಙಳ್ ಮಲ್‌ಜಅ್ ಉಜಿರೆ ದುಆ ಆಶೀರ್ವಚನ ನೀಡಿದರು. ಮುಹಮ್ಮದ್ ಅಶ್ರಫ್ ಜೌಹರಿ ಎಮ್ಮೆಮಾಡು ಹುಬ್ಬುರ್ರಸೂಲ್ ಪ್ರಭಾಷಣ ಮಾಡಿದರು. ಮುಹಮ್ಮದ್ ಅಲಿ ಮದನಿ ಸ್ವಾಗತಿಸಿದರು.
ವೇದಿಕೆಯಲ್ಲಿ ಅಬ್ದುಲ್ ಅಝೀಝ್ ಝುಹ್ರಿ ಸೆರ್ಕಳ, ಇಬ್ರಾಹೀಂ ಸಖಾಫಿ ಸೆರ್ಕಳ, ಮುತ್ತಲಿಬ್ ಹಾಜಿ ನಾರ್ಶ, ಅಶ್ರಫ್ ನಾರ್ಶ, ರಫೀಕ್ ಸಖಾಫಿ ಮಡಿಕೇರಿ, ಇಸ್ಮಾಯೀಲ್ ಮುಸ್ಲಿಯಾರ್ ಗೋಳಿಪಡ್ಪುಉಪಸ್ಥಿತರಿದ್ದರು.
ಸಅದಿಯಾ ಸಮ್ಮೇಳನ ಪ್ರಚಾರಾರ್ಥ ಮೊಹಲ್ಲಾ ಭೇಟಿ
ಬೆಳ್ತಂಗಡಿ, ಜ.29: ಕಾಸರಗೋಡಿನ ದೇಳಿಯಲ್ಲಿರುವ ಜಾಮಿಯಾ ಸಅದಿಯಾ ಅರಬಿಯಾದ 46ನೆ ಸನದುದಾನ ಸಮ್ಮೇಳನವು ಫೆ.12,13,14ರಂದು ನಡೆಯಲಿದೆ. ಇದರ ಯಶಸ್ವಿಗೆ ತಾಲೂಕಿನ ಎಲ್ಲಾ ಮೊಹಲ್ಲಾಗಳಿಗೆ ಭೇಟಿ ನೀಡಿ ಸಮ್ಮೇಳನದ ಪ್ರಚಾರದ ಜೊತೆಗೆ ಅರ್ಹರಿಂದ ಆರ್ಥಿಕ ಮತ್ತು ವಸ್ತು ರೂಪದ ದೇಣಿಗೆ ಸಂಗ್ರಹಿಸುವ ಗುರಿ ಹೊಂದಿದೆ. ತಾಲೂಕಿನಲ್ಲಿ ಸಅದಿ ಪದವಿ ಪಡೆದ 100 ಕ್ಕೂ ಅಧಿಕ ವಿದ್ವಾಂಸರು ಬೇರೆ ಬೇರೆ ಧಾರ್ಮಿಕ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದು, ಇವರ ಸಹಕಾರ ಪಡೆಯಲಾಗುವುದು ಎಂದು ಬೆಳ್ತಂಗಡಿ ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಉಮರ್‌ಕುಂಞಿ ನಾಡ್ಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟಕರಾದ ಅಬ್ಬಾಸ್ ಬಟ್ಲಡ್ಕ, ಬದ್ರುದ್ದೀನ್ ಗೇರುಕಟ್ಟೆ, ಅಬ್ದುಲ್ ಹಮೀದ್ ಸಅದಿ, ಉಮರ್ ಸಅದಿ, ಅಬ್ಬೋನು ಪಲ್ಲಾದೆ ಉಪಸ್ಥಿತರಿದ್ದರು.
ಬೈಕಂಪಾಡಿ: ಗಣರಾಜ್ಯೋತ್ಸವ
ಮಂಗಳೂರು,ಜ.29: ದ.ಕ ಜಿ.ಪಂ.ಹಿ. ಪ್ರಾ.ಶಾಲೆ ಬೈಕಂಪಾಡಿ (ಮುಸ್ಲಿಮ್) ಮತ್ತು ಸರಕಾರಿ ಸಂಯುಕ್ತ ಪ್ರೌಢಶಾಲೆ ಅಂಗರಗುಂಡಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಉದ್ಯಮಿ ಮುಮ್ತಾಝ್ ಅಲಿ ಬೈಕಂಪಾಡಿ ಧ್ವಜಾರೋಹಣಗೈದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ವೈಜ್ಞಾನಿಕ ಅಧಿಕಾರಿ ಜಯಪ್ರಕಾಶ್ ನಾಯಕ್ ಭಾಗವಹಿಸಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಕಂಪಾಡಿ ಜುಮಾ ಮಸೀದಿಯ ಅಧ್ಯಕ್ಷ ಬಿ.ಎ.ನಾಸಿರ್ ವಹಿಸಿದ್ದರು. ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎಸ್.ಕೆ. ಇಲ್ಯಾಸ್ ಸ್ವಾಗತಿಸಿದರು. ಶಿಕ್ಷಕಿ ಚಂದ್ರಕಲಾ ವಂದಿಸಿದರು. ಪುಷ್ಪಲತಾ ಜೋಗಿ ಕಾರ್ಯಕ್ರಮ ನಿರೂಪಿಸಿದರು. ಕೊಣಾಜೆ: ಗಣರಾಜ್ಯೋತ್ಸವ
ಕೊಣಾಜೆ, ಜ.29: ಕೊಣಾಜೆ ಪದವಿನ ಮಹಾತ್ಮಗಾಂಧಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಗ್ರಾಪಂ ಸದಸ್ಯ ಅಚ್ಯುತ ಗಟ್ಟಿ ಧ್ವಜಾರೋಹಣಗೈದರು.
ಈ ಸಂದರ್ಭ ಮಂಗಳಾ ಸೇವಾ ಟ್ರಸ್ಟ್‌ನ ಅಬ್ದುನ್ನಾಸಿರ್ ಕೆ.ಕೆ., ಶಾಲಾಭಿವೃದ್ಧಿ ಸಮಿತಿಯ ಅಬೂಬಕರ್ ಸಖಾಫಿ, ಮಂಗಳಾ ಗ್ರಾಮೀಣ ಯುವಕ ಸಂಘದ ಅಬ್ದುರ್ರಹ್ಮಾನ್, ಜಯಪ್ರಕಾಶ್, ಪದ್ಮಾವತಿ, ಮುತ್ತು ಶೆಟ್ಟಿ, ರಾಮಚಂದ್ರ, ಅಬ್ದುರ್ರಹ್ಮಾನ್ ಕೋಡಿಜಾಲ್, ಹಸನ್‌ಕುಂಞಿ, ಅಮೀರ್ ಹುಸೇನ್, ಹಸೈನಾರ್ ಉಪಸ್ಥಿತರಿದ್ದರು.
ಗ್ರಂಥಾಲಯಕ್ಕೆ ಸಾಹಿತ್ಯ ಕೃತಿಗಳ ಹಸ್ತಾಂತರ
ಉಳ್ಳಾಲ, ಜ.29: ಮಂಗಳೂರು ವಿಶ್ವವಿದ್ಯಾನಿಲಯದ ಗ್ರಂಥಾಲಯಕ್ಕೆ ಶಾಂತಿ ಪ್ರಕಾಶನದ ಸಾಹಿತ್ಯ ಕೃತಿಗಳನ್ನು ಗ್ರಂಥಪಾಲಕ ಡಾ. ಎಂ.ಕೆ. ಭಂಡಿಗೆ ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಶಾಖೆಯ ವತಿಯಿಂದ ಸ್ಥಾನೀಯ ಅಧ್ಯಕ್ಷ ಎ.ಎಚ್. ಮಹಮೂದ್ ಹಾಗೂ ಹೂಡೆ ಸ್ವಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಅಕ್ಬರಲಿ ಉಡುಪಿ ನೀಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊ.ಕೈಸರ್ ಮುನಿಬುಲ್ಲಾ ಖಾನ್, ಜ.ಇ.ಹಿಂದ್ ಉಪಾಧ್ಯಕ್ಷ ಅಬ್ದುರ್ರಹೀಮ್, ಸಹಾಯಕ ಗ್ರಂಥಪಾಲಕಿ ಎ.ನಳಿನಿ ಬಾಯಿ, ಬಿ.ಎಸ್. ಜಯಲಕ್ಷ್ಮೀ, ಕೆ.ಎಸ್.ಸುಮಂಗಲಾ, ಡಾ. ಕೆ.ಪುಷ್ಪಲತಾ, ಕೆ.ಕೆ. ಬಾದಾಮಿ, ನಿವೃತ್ತ ಸಹಾಯಕ ನಿರ್ದೇಶಕ ಯು.ಎಂ. ಸಿರ್ಸಿಕರ ಉಪಸ್ಥಿತರಿದ್ದರು.
ಪದಾಧಿಕಾರಿಗಳ ಆಯ್ಕೆ
ಬೆಳ್ತಂಗಡಿ, ಜ.29: ಗುರುವಾಯನಕೆರೆ ಆಟೊ ರಿಕ್ಷಾ ಚಾಲಕರ ಸಂಘ (ಸಿಐಟಿಯು)ದ ನೂತನ ಅಧ್ಯಕ್ಷರಾಗಿ ಅಬೂಬಕರ್, ಉಪಾಧ್ಯಕ್ಷರಾಗಿ ಬಿ.ಎ. ಅಬ್ದುರ್ರಝಾಕ್ ನಡ, ಫೆಲಿಕ್ಸ್ ಪಿಂಟೊ ಗುರುವಾಯನಕೆರೆ, ಕಾರ್ಯದರ್ಶಿಯಾಗಿ ಸೆಬಾಸ್ಟಿಯನ್ ಕ್ರಾಸ್ತಾ ಬೆಳ್ತಂಗಡಿ, ಜೊತೆ ಕಾರ್ಯದರ್ಶಿಯಾಗಿ ಮುಸ್ತಫಾ ಕಾವಳಕಟ್ಟೆ, ಕೋಶಾಧಿಕಾರಿಯಾಗಿ ಬೇಬಿ ಶೆಟ್ಟಿ, ಗೌರವಾಧ್ಯಕ್ಷರಾಗಿ ಸುರೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಸಮಿತಿಯ ಸಲಹೆಗಾರರಾಗಿ ಜನಾರ್ದನ ಸುದೆಮುಗೇರು, ರವಿ ಪೂಜಾರಿ ಓಡಿಲ್ನಾಳ, ಮೋಹನ್ ಪೂಜಾರಿ ಹುಣ್ಸೆಕಟ್ಟೆ, ಲ್ಯಾನ್ಸಿ ಡಿಸೋಜ ಪಣೆಜಾಲು ಆಯ್ಕೆಯಾಗಿದ್ದಾರೆ.
ಕರಾಟೆ: ಚಿನ್ನದ ಪದಕ
ಪುತ್ತೂರು, ಜ.29: ಪುತ್ತೂರಿನ ಸುಭದ್ರ ಸಭಾಭವನದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8ನೆ ತರಗತಿ ವಿದ್ಯಾರ್ಥಿ ಸಾತ್ವಿಕ್ ಶರ್ಮ 2 ಚಿನ್ನದ ಪದಕ ಗಳಿಸಿರುತ್ತಾರೆ. ಬ್ರೌನ್ ಬೆಲ್ಟ್ 14ರ ವಯೋಮಾನದ ಟೀವಕಟಾದಲ್ಲಿ ಚಿನ್ನದ ಪದಕ ಹಾಗೂ ಬಾಲಕರ ವೈಯಕ್ತಿಕ ಕುಮಿಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ. ಅದಲ್ಲದೆ, 4ನೆ ತರಗತಿ ವಿದ್ಯಾರ್ಥಿನಿ ಸಂಹಿತಾ ಶರ್ಮ 1 ಚಿನ್ನ ಹಾಗೂ 2 ಕಂಚಿನ ಪದಕ ಗಳಿಸಿರುತ್ತಾರೆ. ಬ್ರೌನ್ ಬೆಲ್ಟ್ 12ರ ವಯೋಮಾನದ ಬಾಲಕಿಯರ ವಿಭಾಗದ ವೈಯಕ್ತಿಕ ಕಟಾದಲ್ಲಿ ಕಂಚಿನ ಪದಕ ಹಾಗೂ 30 ಕೆ.ಜಿ. ಕುಮಿಟೆ ವಿಭಾಗದಲ್ಲಿ ಕಂಚಿನ ಪದಕ ಹಾಗೂ ಬಾಲಕಿಯರ 12ರ ವಿಭಾಗದ ಟೀಮ್ ಕಟಾ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ. ಇವರು ರಾಜೇಶ ಶರ್ಮ ಮತ್ತು ಸೀಮಾ ಶರ್ಮ ದಂಪತಿಯ ಮಕ್ಕಳು.
ಪತ್ರಕರ್ತ ಭರತ್ ಶೆಟ್ಟಿಗಾರ್‌ಗೆ ಬೀಳ್ಕೊಡುಗೆ
ಉಡುಪಿ, ಜ.29: ಮಂಗಳೂರಿಗೆ ವರ್ಗಾವಣೆಗೊಂಡಿರುವ ‘ವಿಜಯವಾಣಿ’ ಪತ್ರಿಕೆಯ ಉಡುಪಿ ವರದಿಗಾರ ಭರತ್ ಶೆಟ್ಟಿಗಾರ್‌ರಿಗೆ ಉಡುಪಿ ಪ್ರೆಸ್ ಕ್ಲಬ್ ವತಿಯಿಂದ ಬೀಳ್ಕೊಡಲಾಯಿತು.ಈ ಸಂದರ್ಭ ಉಡುಪಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕರ ಸುವರ್ಣ, ಪ್ರೆಸ್‌ಕ್ಲಬ್ ಸಹಸಂಚಾಲಕ ನಝೀರ್ ಪೊಲ್ಯ, ಹರ್ಷರಾಜ್ ಕೋಡಿ ಕನ್ಯಾಣ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಪ್ರಸಾದ್ ಪಾಂಡೇಲು ಸ್ವಾಗತಿಸಿದರು. ಪ್ರೆಸ್‌ಕ್ಲಬ್ ಸಂಚಾಲಕ ಚೇತನ್ ಪಡುಬಿದ್ರೆ ವಂದಿಸಿದರು. ರಹೀಮ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.
ಯುನಿವೆಫ್‌ನಿಂದ ಪ್ರವಾದಿ ಸಂದೇಶ
ಮಂಗಳೂರು, ಜ.29: ಯುನಿವೆಫ್ ಕರ್ನಾಟಕ ವತಿಯಿಂದ ‘ಇಸ್ಲಾಮ್ ಒಂದು ಪರಿಹಾರ-ಪ್ರವಾದಿ ಮುಹಮ್ಮದ್ (ಸ) ಅದರ ವಕ್ತಾರ’ ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಪ್ರವಾದಿ (ಸ) ರ ಸಂದೇಶ ಪ್ರಚಾರ ಅಭಿಯಾನದ ಸಾರ್ವಜನಿಕ ಕಾರ್ಯಕ್ರಮವು ಇತ್ತೀಚೆಗೆ ದೇರಳಕಟ್ಟೆಯ ಸಿಟಿ ಗ್ರೌಂಡ್‌ನಲ್ಲಿ ಜರಗಿತು. ಸಮಾರಂಭದಲ್ಲಿ ಬೆಳ್ಮ ಗ್ರಾಪಂ ಉಪಾಧ್ಯಕ್ಷ ಬಿ.ಎಂ.ಅಬ್ದುಸ್ಸತ್ತಾರ್ ಅತಿಥಿಯಾಗಿ ಭಾಗವಹಿಸಿದ್ದರು. ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಕೇಂದ್ರೀಯ ವಿಷಯದಲ್ಲಿ ಭಾಷಣ ಮಾಡಿದರು.
ಉಳ್ಳಾಲ: ರಕ್ತದಾನ ಶಿಬಿರ
ಉಳ್ಳಾಲ ಜ.29: ಸೈಯದ್ ಮದನಿ ಸುನ್ನಿ ಸೆಂಟ್ರಲ್ ಕಮಿಟಿ ಉಳ್ಳಾಲ ಮತ್ತು ವೆನ್ಲಾಕ್ ಆಸ್ಪತ್ರೆ ಸಹಯೋಗದೊಂದಿಗೆ ಜೀಲಾನಿ ಸ್ಮರಣೆ ಪ್ರಯುಕ್ತ ರಕ್ತದಾನ ಶಿಬಿರ ಇತ್ತೀಚೆಗೆ ಉಳ್ಳಾಲ ದರ್ಗಾ ವಠಾರದಲ್ಲಿ ನಡೆಯಿತು.
ಉಳ್ಳಾಲದ ಮದನಿ ಅರಬಿಕ್ ಕಾಲೇಜಿನ ಪ್ರೊ. ಸೈಯದ್ ಚೆರುಕುಂಞಿ ತಂಙಳ್ ದುಆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಮಿಟಿಯ ಸಲಹಾ ಸಮಿತಿಯ ಅಧ್ಯಕ್ಷ ಎ.ಎ ಹೈದರ್ ಪರ್ತಿಪ್ಪಾಡಿ ಉದ್ಘಾಟಿಸಿದರು. ಕಮಿಟಿಯ ಅಧ್ಯಕ್ಷ ಯು.ಎ. ಹುಸೈನ್ ಮೋನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್ ಹಂಝ, ಉಳ್ಳಾಲ ಮದನಿ ಅರಬಿಕ್ ಕಾಲೇಜಿನ ಪ್ರೊ.ಅಬ್ದುರ್ರಶೀದ್ ಮದನಿ, ಮುಫತ್ತಿಸ್ ಸುಲೈಮನ್ ಮದನಿ, ಎಸಿಪಿ ಕಲ್ಯಾಣ್ ಶೆಟ್ಟಿ, ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷ ಹಾಜಿ ಹನೀಫ್ ಬಿ.ಜಿ, ಡಾ.ಶರತ್ ಕುಮರ್ ರಾವ್.ಜೆ, ದರ್ಗಾ ಸಮಿತಿಯ ಕಾರ್ಯದರ್ಶಿ ಅಶ್ರಫ್ ಹಾಜಿ, ಕರೀಂ ಹಾಜಿ, ಅಬ್ದುಲ್ಲತೀಫ್ ಹಾಜಿ, ಅಬ್ದುಲ್ ಸತ್ತಾರ್, ಉಳ್ಳಾಲ ನಗರ ಸಭೆಯ ಸದಸ್ಯ ಸಲೀಮ್ ಉಪಸ್ಥಿತರಿದ್ದರು. ಆರ್.ಕೆ. ಮದನಿ ಅಮ್ಮೆಂಬಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.